|
ನ್ಯೂಯಾರ್ಕ (ಅಮೇರಿಕಾ) – ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪರನ್ನು ಒಂದು ಪ್ರಕರಣದಲ್ಲಿ ನ್ಯೂಯಾರ್ಕ್ ನ್ಯಾಯಾಲಯವು ಅಪರಾಧಿ ಎಂದು ನಿರ್ಧರಿಸಿದೆ. ಟ್ರಂಪ್ ಅವರ ಶಿಕ್ಷೆಯ ನಿರ್ಣಯವನ್ನು ಕಾಯ್ದಿರಿಸಲಾಗಿದೆ. ಸಂಪೂರ್ಣ ಪ್ರಕರಣದಲ್ಲಿ ವಿಚಾರಣೆಯ ಸಮಯದಲ್ಲಿ ಟ್ರಂಪ್ ತಾವು ನಿರ್ದೋಷಿಯೆಂದು ಹೇಳಿಕೊಳ್ಳುತ್ತಿದ್ದರು. ದೋಷಿಯೆಂದು ಕೇಳಿದಾಗ ಮಾತ್ರ ಅವರು ನ್ಯಾಯಾಲಯದಲ್ಲಿ ಅಜಾಗರೂಕವಾಗಿ ಕುಳಿತಿದ್ದರು.
ಏನಿದು ಪ್ರಕರಣ ?
ಪೋರ್ನ್‌ಸ್ಟಾರ್ (ಅಶ್ಲೀಲ ಚಿತ್ರಗಳಲ್ಲಿ ನಟಿಸುವ ನಟಿ) ಸ್ಟ್ರಾಮಿ ಡೇನಿಯಲ್ಸ್ ಅವರು ಟ್ರಂಪ್ ಅವರೊಂದಿಗೆ ಆಕೆಯ ಸಂಬಂಧ ಇದೆಯೆಂದು ಆರೋಪವನ್ನು ಮಾಡಿದ್ದರು. 2016ರಲ್ಲಿ ರಾಷ್ಟ್ರಾಧ್ಯಕ್ಷ ಹುದ್ದೆಯ ಚುನಾವಣೆ ಸಮಯದಲ್ಲಿ ಈ ಅಂಶವನ್ನು ಮುಚ್ಚಿಡಲು ಟ್ರಂಪ್ ಇವರು ಡೇನಿಯಲ್ಸ್‌ಗೆ 1 ಲಕ್ಷದ 30 ಸಾವಿರ ಡಾಲರ್ (1 ಕೋಟಿ 8 ಲಕ್ಷ ರೂಪಾಯಿ) ನೀಡಿದ್ದರು ಎಂಬ ಟ್ರಂಪ ಮೇಲೆ ಆರೋಪ ಮಾಡಿದ್ದರು, ಇಷ್ಟೇ ಅಲ್ಲ ಈ ಮೊತ್ತವನ್ನು ನೀಡಲು ಟ್ರಂಪ್ ಇವರು ಆರ್ಥಿಕ ಅವ್ಯವಹಾರವನ್ನೂ ಮಾಡಿದ್ದಾರೆ ಮತ್ತು ಅವರ ಸಹವರ್ತಿ ಮೈಕೆಲ ಕೊಹೆನ ಇವರ ಮೂಲಕ ಈ ಮೊತ್ತವನ್ನು ಡೇನಿಯಲ್ಸ ಇವರಿಗೆ ನೀಡಲಾಯಿತು. ಟ್ರಂಪ್ ವಿರುದ್ಧದ ಎಲ್ಲಾ 34 ಆರೋಪಗಳಲ್ಲಿ ದೋಷಿ ಎಂದು ಸಾಬೀತಾಗಿದೆ.