|
ರಾಮನಾಥಿ (ಗೋವಾ) – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ೮೨ ನೇ ಜನ್ಮೋತ್ಸವದ ಪ್ರಯುಕ್ತ ಮೇ ೨೮ ರಿಂದ ೩೦ ಈ ಕಾಲಾವಧಿಯಲ್ಲಿ ಇಲ್ಲಿಯ ಸನಾತನದ ಆಶ್ರಮದಲ್ಲಿ ‘ಚಂಡಿ ಯಾಗ’ ನೆರವೇರಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ ( ಸೌ.) ಬಿಂದಾ ನಿಲೇಶ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ ( ಸೌ.) ಅಂಜಲಿ ಮುಕುಲ್ ಗಾಡಗಿಳ ಹಾಗೂ ಸನಾತನದ ಸಂತರ ವಂದನೀಯ ಉಪಸ್ಥಿತಿಯಲ್ಲಿ ಈ ಯಾಗ ನೆರವೇರಿತು. ಮೇ ೩೦ ರಂದು ತಿಥಿಯ ಪ್ರಕಾರ ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಇವರ ಜನ್ಮೋತ್ಸವವಿತ್ತು.
ಯಾಗದ ಮೊದಲ ದಿನ ಅಂದರೆ ಮೇ ೨೮ ರಂದು ಸನಾತನದ ಪುರೋಹಿತ ಪಾಠಶಾಲೆಯ ಪುರೋಹಿತರು ಈ ಯಾಗದಲ್ಲಿ ದಶದ್ರವ್ಯ ಮಿಶ್ರಿತ ಪಾಯಸ ಮುಂತಾದ ದ್ರವ್ಯಗಳಿಂದ ಯಜ್ಞ ನಡೆಸಿದರು. ‘ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಇವರ ಮಹಾಮೃತ್ಯು ಯೋಗ ದೂರವಾಗಿ ಅವರಿಗೆ ಆರೋಗ್ಯ ಪೂರ್ಣ ದೀರ್ಘಾಯುಷ್ಯ ಲಭಿಸಲಿ ಹಾಗೂ ಸಾಧಕರ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟದಲ್ಲಿನ ತೊಂದರೆಗಳು ದೂರವಾಗಲಿ ಮತ್ತು ಆದಷ್ಟು ಬೇಗನೆ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿ, ಈ ಉದ್ದೇಶದ ಪೂರ್ತಿಗಾಗಿ ಈ ಯಜ್ಞ ನಡೆಸಲಾಯಿತು.