ಲವ್ ಜಿಹಾದ್ ನಿಂದ ಎಚ್ಚೆತ್ತುಕೊಳ್ಳಲು ಶ್ರೀರಾಮ ಸೇನೆಯಿಂದ ಹಿಂದೂ ಮಹಿಳೆಯರಿಗಾಗಿ ‘ಸಹಾಯವಾಣಿ’ ಚಾಲನೆ

ಮಂಗಳೂರು – ಲವ್ ಜಿಹಾದ್ ಪ್ರಕರಣದಲ್ಲಿ ಹಿಂದೂ ಹೆಣ್ಣುಮಕ್ಕಳು ಮತ್ತು ಮಹಿಳೆಯರ ರಕ್ಷಣೆಗಾಗಿ ಶ್ರೀರಾಮ ಸೇನೆಯ ವತಿಯಿಂದ ‘ಸಹಾಯವಾಣಿ’ ಯೋಜನೆಯನ್ನು ಪ್ರಾರಂಭಿಸಿದೆ. ಈ ‘ಸಹಾಯವಾಣಿ’ ಯೋಜನೆಯನ್ನು ರಾಜ್ಯದ 6 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಉದ್ಘಾಟಿಸಲಾಯಿತು. ‘ಸಹಾಯವಾಣಿ’ ಸಂಖ್ಯೆ 9090443444 ಮತ್ತು ಈ ಸಹಾಯವಾಣಿಯ ತಂಡದಲ್ಲಿ ಮಾಜಿ ಪೊಲೀಸ್ ಅಧಿಕಾರಿಗಳು ಮತ್ತು ವಕೀಲರನ್ನು ಒಳಗೊಂಡಿರುತ್ತದೆ. ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಹುಬ್ಬಳ್ಳಿಯ ಕ್ಯೂಬಿಕ್ಸ್ ಹೋಟೆಲ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಹಾಯವಾಣಿ ಯೋಜನೆಯನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಶ್ರೀರಾಮಸೇನೆ ರಾಜ್ಯ ಪ್ರಧಾನ ಕಾರ್ಯ ದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ಇವರು, ಲವ್ ಜಿಹಾದ್ ಗೆ ಬಲಿಯಾದ ಯುವತಿಯರು, ಅವರ ಕುಟುಂಬಸ್ಥರು ಹಾಗೂ ಹಿತೈಷಿಗಳು ಈ ಸಹಾಯವಾಣಿಗೆ ಸಂಪರ್ಕಿಸುತ್ತಲೇ ಶ್ರೀರಾಮಸೇನೆ ತಂಡವು ಕಾನೂನಿನ ಚೌಕಟ್ಟಿನೊಳಗೆ ಇದ್ದು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.