ರಕ್ಷಣಾ ಕಾರ್ಯಾಚರಣೆಗಾಗಿ ಅಂತರರಾಷ್ಟ್ರೀಯ ನೆರವಿಗೆ ಮನವಿ !
ಪೋರ್ಟ್ ಮೊರೆಸ್ಬಿ (ಪಾಪುವಾ ನ್ಯೂಗಿನಿ) – ಪ್ರಶಾಂತ ಮಹಾಸಾಗರದ ದ್ವೀಪ ದೇಶವಾದ ಪಪುವಾ ನ್ಯೂಗಿನಿಯಾದ ಗುಡ್ಡಗಾಡು ಪ್ರದೇಶದಲ್ಲಿ ಮೇ 25 ರಂದು ಸಂಭವಿಸಿದ ಭೂಕುಸಿತದಲ್ಲಿ ಇದುವರೆಗೆ 2 ಸಾವಿರ ಕ್ಕೂ ಹೆಚ್ಚು ಜನರು ಹೂತಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಈ ಹಿನ್ನಲೆಯಲ್ಲಿ ಪಾಪುವಾ ನ್ಯೂಗಿನಿ ಸರಕಾರವು ರಕ್ಷಣಾ ಕಾರ್ಯಗಳಿಗೆ ನೆರವು ನೀಡುವಂತೆ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮನವಿ ಮಾಡಿದೆ. ರಾಜಧಾನಿ ಪೋರ್ಟ್ ಮೊರೆಸ್ಬಿಯಿಂದ ಸರಿಸುಮಾರು 600 ಕಿಲೋಮೀಟರ್ ದೂರದಲ್ಲಿರುವ ಎಂಗಾ ಪ್ರಾಂತ್ಯದಲ್ಲಿ ಈ ಘಟನೆ ಸಂಭವಿಸಿತ್ತು.
ವಿಶ್ವಸಂಸ್ಥೆಯ `ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್’ ಇದು ಪಪುವಾ ನ್ಯೂಗಿನಿಯಾದಲ್ಲಿ 670 ಜನರು ಸಾವನ್ನಪ್ಪಿರಬಹುದು ಎಂದು ಕಳವಳ ವ್ಯಕ್ತಪಡಿಸಿತ್ತು. ಈ ಸಂಸ್ಥೆಯ ಅಂಕಿಅಂಶಗಳಿಗಿಂತ ಸರಕಾರದ ಅಂಕಿಅಂಶಗಳು ಸರಿಸುಮಾರು ಮೂರುಪಟ್ಟುಗಳಷ್ಟಿದೆ.
ಭಾರತದಿಂದ ಸಂತಾಪ
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಇವರು ಪಪುವಾ ನ್ಯೂಗಿನಿಯಾದಲ್ಲಾದ ಭೂಕುಸಿತದಿಂದ ಉಂಟಾದ ಜೀವಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಕಷ್ಟದ ಸಮಯದಲ್ಲಿ ಭಾರತವು ತನ್ನ ಸ್ನೇಹಿತರರೊಂದಿಗೆ ಒಂದಾಗಿ ನಿಂತಿದೆ. ನಾವು ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಈ ವಿಷಯದಲ್ಲಿ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇವೆ ಎಂದು ತಮ್ಮ `ಎಕ್ಸ್‘ನಲ್ಲಿ ಬರೆದಿದ್ದಾರೆ.