Statement By Amit Shah: ಮುಂಬರುವ ೨ -೩ ವರ್ಷಗಳಲ್ಲಿ ನಕ್ಸಲವಾದ ಕೊನೆ – ಕೇಂದ್ರ ಗೃಹ ಸಚಿವ ಅಮಿತ ಶಾಹ

ಸಪ್ಟೆಂಬರ್ ೩೦ಕ್ಕೂ ಮೊದಲೇ ಕಾಶ್ಮೀರದಲ್ಲಿ ವಿಧಾನಸಭೆಯ ಚುನಾವಣೆ ನಡೆಯುವುದು !

ನವದೆಹಲಿ – ಬರುವ ೨ – ೩ ವರ್ಷದಲ್ಲಿ ದೇಶದಲ್ಲಿನ ನಕ್ಸಲರ ಸಮಸ್ಯೆ ಸಂಪೂರ್ಣವಾಗಿ ಕೊನೆಗಾಣುವುದು, ಎಂದು ಕೇಂದ್ರ ಸಚಿವ ಅಮಿತ ಶಾಹ ಅವರು ಆಶ್ವಾಸನೆ ನೀಡಿದ್ದಾರೆ. ಒಂದಾನೊಂದು ಕಾಲದಲ್ಲಿ ಪಶುಪತಿನಾಥದಿಂದ ತಿರುಪತಿ ಮಾರ್ಗವನ್ನು ‘ನಕ್ಸಲ್ ಕಾರಿಡಾರ್’ ಎಂದು ಕೇಲವರು ಕರೆಯುತ್ತಿದ್ದರು ಈಗ ಜಾರ್ಖಂಡ ರಾಜ್ಯ ಸಂಪೂರ್ಣವಾಗಿ ನಕ್ಸಲ್ ಮುಕ್ತವಾಗಿದೆ. ಬಿಹಾರ, ಒಡಿಸ್ಸಾ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಕೂಡ ಸಂಪೂರ್ಣವಾಗಿ ನಕ್ಸಲ ಮುಕ್ತವಾಗಿವೆ. ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶ ಇವುಗಳು ಕೂಡ ನಕ್ಸಲವಾದದಿಂದ ಮುಕ್ತವಾಗಿವೆ. ಐದು ತಿಂಗಳ ಹಿಂದೆ ಛತ್ತೀಸ್ಗಡದಲ್ಲಿ ಭಾಜಪ ಅಧಿಕಾರಕ್ಕೆ ಬಂದ ನಂತರ ರಾಜ್ಯವನ್ನು ನಕ್ಸಲ ಮುಕ್ತ ಮಾಡುವ ಕಾರ್ಯ ಆರಂಭವಾಗಿದೆ. ಮುಂಬರುವ ಎರಡು-ಮೂರು ವರ್ಷಗಳಲ್ಲಿ ಈ ಸಮಸ್ಯೆ ಸಂಪೂರ್ಣವಾಗಿ ಕೊನೆಗಾಣುವುದು ಎಂದು ಶಾಹ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಪಿಟಿಐ ವಾರ್ತಾ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಅವರು ಈ ಮಾಹಿತಿ ನೀಡಿದರು.

ಶಾಹ ಅವರು ಮಾತು ಮುಂದುವರಿಸಿ:

೧. ಜಮ್ಮು ಕಾಶ್ಮೀರದಲ್ಲಿ ಸಪ್ಟೆಂಬರ್ ೩೦ಕ್ಕೂ ಮೊದಲೇ ವಿಧಾನಸಭೆಯ ಚುನಾವಣೆ ನಡೆಯುವುದು. ನಮ್ಮ ಸರಕಾರವು ನೀಡಿರುವ ಆಶ್ವಾಸನೆಯ ಪ್ರಕಾರ ಚುನಾವಣೆಯ ನಂತರ ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯದ ಸ್ಥಾನಮಾನ ನೀಡಲಾಗುವುದು.

೨. ಜಮ್ಮು ಕಾಶ್ಮೀರದಲ್ಲಿ ನಡೆದ ಯಶಸ್ವಿ ಮತದಾನದಿಂದ ಮೋದಿ ಸರಕಾರದ ಕಾಶ್ಮೀರದ ಬಗ್ಗೆಯ ನೀತಿ ಯೋಗ್ಯವಾಗಿದೆ ಎಂದು ಸಾಬೀತಾಗಿದೆ.

೩. ನಾವು ಜಮ್ಮು-ಕಾಶ್ಮೀರದಲ್ಲಿನ ಗಡಿ ಗುರುತಿಸುವಿಕೆಯ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ; ಗಡಿ ಗುರುತಿಸುವಿಕೆಯ ಪ್ರಕ್ರಿಯೆ ಪೂರ್ಣವಾದ ನಂತರವೇ ಮೀಸಲಾತಿ ನೀಡಬಹುದು. ಡಿಸೆಂಬರ್ ೨೦೨೩ ರಲ್ಲಿ ಸರ್ವೋಚ್ಚ ನ್ಯಾಯಾಲಯವು ಜಮ್ಮು ಕಾಶ್ಮೀರದಲ್ಲಿ ೩೦ ಸೆಪ್ಟೆಂಬರ್ ೨೦೨೪ರವರೆಗೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಆದೇಶ ನೀಡಿತ್ತು. ಅದರ ಪ್ರಕಾರ ವಿಧಾನಸಭೆಯ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸುವೆವು.

೪. ಮುಂಬರುವ ೫ ವರ್ಷಗಳಲ್ಲಿ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲಾಗುವುದು.

೫. ದೇಶದಲ್ಲಿ ಎಲ್ಲಾ ಚುನಾವಣೆಗಳನ್ನು ಒಂದೇ ಸಮಯದಲ್ಲಿ ನಡೆಸಲಾಗುವುದು.