Pakistan Supporters : ಫೇಸ್‌ಬುಕ್‌ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ನ ಘೋಷಣೆ; ಪ್ರಧಾನಿ ಮೋದಿಗೆ ಧಿಕ್ಕಾರ !

ಆರೋಪಿ ಅಸ್ಗರ್ ವಿರುದ್ಧ ಪ್ರಕರಣ ದಾಖಲು !

ಚಿಕ್ಕಮಗಳೂರು – ಜಿಲ್ಲೆಯ ಕೊಪ್ಪದಲ್ಲಿ ಅಸ್ಗರ್ ಎಂಬ ವ್ಯಕ್ತಿ ತನ್ನ ಫೇಸ್ ಬುಕ್ ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಬರೆದಿದ್ದ. ಅಷ್ಟೇ ಅಲ್ಲದೇ ಪ್ರಧಾನಿ ಮೋದಿ ಹಾಗೂ ಬಜರಂಗದಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದಾನೆ. ಇದನ್ನು ಪೋಸ್ಟ್ ಮಾಡಿದ ಸ್ವಲ್ಪ ಸಮಯದ ನಂತರ ಅವನು ತನ್ನ ಫೇಸ್‌ಬುಕ್ ಖಾತೆಯನ್ನು ‘ಡಿಲೀಟ್’ ಮಾಡಿದ್ದಾನೆ.

ಪೊಲೀಸರು ಪೋಸ್ಟ್ ಆಧರಿಸಿ ಸದರಿ ಪ್ರಕರಣ ದಾಖಲಿಸಿಕೊಂಡಿದ್ದು, ಅಸ್ಗರ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಸ್ಗರ್ ವಿರುದ್ಧ ಹಿಂದುತ್ವನಿಷ್ಟ ಸಂಘಟನೆಗಳೂ ಆಕ್ರೋಶ ವ್ಯಕ್ತಪಡಿಸಿವೆ.