ಶ್ರೀವಿಷ್ಣುವಿನ ಶ್ರೀರಾಮಾವತಾರ ಮತ್ತು ಶ್ರೀಜಯಂತಾವತಾರ (ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ) ಇವರಲ್ಲಿನ ಹೋಲಿಕೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಶ್ರೀರಾಮ ಮತ್ತು ಪರಾತ್ಪರ ಗುರು ಡಾಕ್ಟರರ ನಾಮದ ಮಹತ್ವ

ಭಗವಾನ ಶಿವನು ಶ್ರೀರಾಮನ ಚರಿತ್ರೆಯನ್ನು ಶತಕೋಟಿ, ಅಂದರೆ ೧೦೦ ಕೋಟಿ ಶ್ಲೋಕಗಳಲ್ಲಿ ಎಲ್ಲಕ್ಕಿಂತ ಮೊದಲು ಬರೆದಿದ್ದಾನೆ. ಅವುಗಳನ್ನು ಭಗವಾನ ಶಿವನು ದೇವ, ದೈತ್ಯ ಮತ್ತು ಋಷಿಗಳಲ್ಲಿ ಸಮನಾಗಿ ಹಂಚಿದ್ದಾನೆ. ಕೊನೆಗೆ ಅನುಷ್ಟುಪ್‌ ಛಂದದಲ್ಲಿದ್ದ ಶ್ಲೋಕದ ೩೨ ಅಕ್ಷರಗಳಲ್ಲಿ ೩೦ ಅಕ್ಷರಗಳನ್ನು ಶಿವನು ದೇವರು, ದೈತ್ಯರು ಮತ್ತು ಋಷಿಗಳಲ್ಲಿ ಸಮನಾಗಿ ಹಂಚಿದನು. ಉಳಿದೆರಡು ಅಕ್ಷರಗಳನ್ನು ಶಿವನು ತನ್ನ ಕಂಠದಲ್ಲಿ ಧರಿಸಿದನು ಅದುವೇ ‘ರಾ’ ಮತ್ತು ‘ಮ’. ‘ರಾಮ’ ನಾಮದಲ್ಲಿ ಎಲ್ಲವೂ ಇದೆ. ಅದೇ ರೀತಿ ‘ಪರಾತ್ಪರ ಗುರು ಡಾ. ಆಠವಲೆ’ ಈ ಹೆಸರನ್ನು ನಮ್ಮ ಹೃದಯದಲ್ಲಿ ಸಂಗ್ರಹಿಸಿಡೋಣ. ಅವರ ಈ ನಾಮದಲ್ಲಿ ಮತ್ತು ನಿರಂತರ ಸ್ಮರಣೆಯಲ್ಲಿರುವ ಆನಂದದಲ್ಲೇ ಸಾಧಕರ ಮೋಕ್ಷದ ರಹಸ್ಯ ಅಡಗಿದೆ. ‘ರಾಮ’ ಹೆಸರಿನಿಂದ ಮಹಾಪಾತಕ ನಾಶವಾಗು ವಂತೆಯೇ ನಮ್ಮ ಗುರುಗಳ ಕೇವಲ ಸ್ಮರಣೆಯಿಂದ ಮಹಾಪಾತಕ ನಾಶ ಆಗುತ್ತದೆ, ಎಂದು ನಮ್ಮೆಲ್ಲ ಸಾಧಕರ ಶ್ರದ್ಧೆಯಿದೆ.

ಶ್ರೀ. ವಿನಾಯಕ ಶಾನಭಾಗ

ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ಮಹರ್ಷಿಗಳು ಪರಾತ್ಪರ ಗುರು ಡಾ. ಆಠವಲೆಯವರನ್ನು ‘ಭಗವಾನ ಶ್ರೀವಿಷ್ಣುವಿನ ಅವತಾರ’, ಎಂದು ಗೌರವಿಸಿದ್ದಾರೆ. ಶ್ರೀರಾಮ ಮತ್ತು ಪರಾತ್ಪರ ಗುರು ಡಾಕ್ಟರರಲ್ಲಿ ಅರಿವಾದ ಹೋಲಿಕೆಯನ್ನು ಇಲ್ಲಿ ಕೊಡುತ್ತಿದ್ದೇವೆ. ಪ್ರಭು ಶ್ರೀರಾಮನ ರಾಮರಾಜ್ಯದಲ್ಲಿ ಪ್ರಜೆಗಳು ಆನಂದದಲ್ಲಿದ್ದರು, ಅಂತಹ ಸಾತ್ತ್ವಿಕ, ಭಯಮುಕ್ತ ವಾತಾವರಣವಿರುವ ರಾಮರಾಜ್ಯ (ಹಿಂದೂ ರಾಷ್ಟ್ರ)ವನ್ನು ಸ್ಥಾಪಿಸುವ ಸಂಕಲ್ಪವನ್ನು ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ್ದಾರೆ, ಇದು ಖಂಡಿತವಾಗಿಯೂ ಕೇವಲ ಯೋಗಾಯೋಗವಾಗಿಲ್ಲ !

ಸಾಧಕರಿಗೆ ಈ ಲೇಖನದಿಂದ ಪರಾತ್ಪರ ಗುರು ಡಾ. ಆಠವಲೆಯವರ ಮಹತ್ವ ತಿಳಿಯಬೇಕು ಮತ್ತು ಆಪತ್ಕಾಲ ದಿಂದ ಪಾರಾಗಲು ಅವರ ಮೇಲಿನ ಶ್ರದ್ಧೆ ದೃಢ ಆಗಬೇಕು, ಎಂದು ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ನಾವೆಲ್ಲ ಸಾಧಕರು ಅನನ್ಯ ಭಾವದಿಂದ ಪ್ರಾರ್ಥನೆ ಮಾಡು ತ್ತಿದ್ದೇವೆ !

ಸಂಕಲನಕಾರರು : ಶ್ರೀ. ವಿನಾಯಕ ಶಾನಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ. (೯.೫.೨೦೨೦)

ಶ್ರೀ. ವಿನಾಯಕ ಶಾನಭಾಗ

ಶ್ರೀರಾಮನಂತೆಯೇ ಸರ್ವಸಾಮಾನ್ಯ ಮನುಷ್ಯನಂತಿರುವ ಪರಾತ್ಪರ ಗುರು ಡಾಕ್ಟರ !

‘ಶ್ರೀರಾಮಾವತಾರದಲ್ಲಿ ವಾಲ್ಮೀಕಿ ಋಷಿಗಳು ಶ್ರೀರಾಮನ ವಿವಿಧ ವ್ಯಕ್ತಿತ್ವವನ್ನು ಬರೆದಿರುವುದರಿಂದ ಇಂದು ಕಲಿಯುಗದಲ್ಲಿಯೂ ನಮಗೆ ಶ್ರೀರಾಮನ ವಿವಿಧ ಗುಣಗಳು ಕಲಿಯಲು ಸಿಗುತ್ತಿವೆ. ವಾಲ್ಮೀಕಿ ಋಷಿಗಳು ಶ್ರೀರಾಮನನ್ನು ವರ್ಣಿಸಿದುದರಿಂದ ‘ಶ್ರೀರಾಮನು ಪರಮಾತ್ಮನಾಗಿದ್ದಾನೆ’, ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಶ್ರೀರಾಮನ ಬಗ್ಗೆ ವಾಲ್ಮೀಕಿ ಋಷಿಗಳು ಮಾಡಿದ ವರ್ಣನೆಯು ಪರಾತ್ಪರ ಗುರು ಡಾ. ಆಠವಲೆ ಇವರಿಗೆ ಎಲ್ಲ ರೀತಿಯಲ್ಲಿ ಹೊಂದಿಕೆಯಾಗುತ್ತದೆ. ಶ್ರೀರಾಮಾವತಾರದಲ್ಲಿ ಸೀತೆಯು ಅಗ್ನಿಪರೀಕ್ಷೆಯನ್ನು ಕೊಡಲು ಹೋಗು ತ್ತಾಳೆ. ಆ ಸಮಯದಲ್ಲಿ ಋಷಿ-ಮುನಿಗಳು ತಕ್ಷಣ ಪ್ರತ್ಯಕ್ಷರಾಗುತ್ತಾರೆ ಮತ್ತು ‘ಶ್ರೀರಾಮ, ನೀವು ಸ್ವಯಂ ಭಗವಾನ ವಿಷ್ಣುವಾಗಿದ್ದೀರಿ. ಸೀತೆಯ ಪಾತಿವ್ರತ್ಯದ ಬಗ್ಗೆ ನಿಮಗೆ ಎಲ್ಲವೂ ಗೊತ್ತಿದ್ದರೂ ನೀವು ಅವಳನ್ನು ಅಗ್ನಿಪರೀಕ್ಷೆಯಿಂದ ಏಕೆ ತಡೆಯುತ್ತಿಲ್ಲ ?’ ಎಂದು ಕೇಳುತ್ತಾರೆ. ಅಲ್ಲಿಯವರೆಗೆ ಆಕಾಶಮಂಡಲದಲ್ಲಿ ಬ್ರಹ್ಮದೇವ, ಭಗವಾನ ಶಿವ,ಇಂದ್ರಾದಿ ದೇವತೆಗಳು ಪ್ರಕಟವಾಗುತ್ತಾರೆ. ಆಗ ಶ್ರೀರಾಮನು, ”ಇದುವರೆಗೆ ನಾನು ನನ್ನನ್ನು ಕೇವಲ ದಶರಥನ ಪುತ್ರ ರಾಮನೆಂದೇ ನಂಬಿದ್ದೇನೆ. ‘ನಾನು ವಿಷ್ಣುವಾಗಿದ್ದೇನೆ’, ಎಂದು ನಾನು ಯಾವತ್ತೂ ಹೇಳಿಲ್ಲ” ಎಂದು ಹೇಳಿದನು.

ಶ್ರೀರಾಮನಂತೆಯೇ ಪರಾತ್ಪರ ಗುರು ಡಾಕ್ಟರರೂ ಯಾವತ್ತೂ ‘ನಾನು ವಿಷ್ಣುವಿನ ಅವತಾರವಾಗಿದ್ದೇನೆ’, ಎಂದು ಹೇಳಿಲ್ಲ. ಅವರು ಎಲ್ಲರೊಂದಿಗೆ ಒಬ್ಬ ಸಾಮಾನ್ಯ ಮನುಷ್ಯನಂತೆಯೇ ನಡೆದುಕೊಳ್ಳುತ್ತಾರೆ.

ಸ್ವತಃ ತ್ರಿಕಾಲಜ್ಞಾನಿಯಾಗಿದ್ದರೂ ಮಾಡುವ ಕಾರ್ಯದ ಬಗ್ಗೆ ಬ್ರಹ್ಮನಿಂದ ತಿಳಿದುಕೊಳ್ಳುವ ಶ್ರೀರಾಮ ಮತ್ತು ತನಗೆ ಎಲ್ಲ ಜ್ಞಾನವಿದ್ದರೂ ಮಹರ್ಷಿ ಮತ್ತು ಜ್ಯೇಷ್ಠ ಸಂತರ ಆಜ್ಞೆಯನ್ನು ಪಾಲಿಸುವ ಪರಾತ್ಪರ ಗುರು ಡಾಕ್ಟರ !

ಪ್ರಭು ಶ್ರೀರಾಮನು ಮುಂದೆ ಹೇಳುತ್ತಾನೆ, ”ಅನೇಕ ಋಷಿಗಳಿಂದ ನಾನು ಭವಿಷ್ಯವನ್ನು ಕೇಳಿದ್ದೇನೆ ಏನೆಂದರೆ, ರಾವಣನ ಸಂಹಾರಕ್ಕಾಗಿ ನನ್ನ ಜನ್ಮವಾಗಿದೆ. ಆ ಕಾರ್ಯವು ಈಗ ಪೂರ್ಣವಾಯಿತು. ಇದಕ್ಕಿಂತ ಹೆಚ್ಚು ನನಗೆ ಏನೂ ಗೊತ್ತಿಲ್ಲ. ಬ್ರಹ್ಮದೇವರು ಇಲ್ಲಿ ಬಂದಿದ್ದಾರೆ. ನನ್ನ ಜನ್ಮದ ಇನ್ನೂ ಬೇರೆ ಏನಾದರೂ ಕಾರಣವಿದ್ದರೆ ಬ್ರಹ್ಮದೇವರಿಗೆ ಗೊತ್ತಾಗುವುದು. ಆದ್ದರಿಂದ ಈ ಕುರಿತು ಅವರು ನನಗೆ ಹೇಳಬೇಕು, ಎಂದು ಅವರ ಚರಣಗಳಲ್ಲಿ ಪ್ರಾರ್ಥನೆಯಾಗಿದೆ.” ಅದಕ್ಕೆ ಬ್ರಹ್ಮದೇವರು ಹೇಳುತ್ತಾರೆ, ”ಶ್ರೀರಾಮ, ನೀನು ಸ್ವತಃ ನಾರಾಯಣನಾಗಿರುವೆ. ನೀನು ಪರಬ್ರಹ್ಮನಾಗಿರುವೆ. ನಿನಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲ !

ಮತ್ಸ್ಯ, ಕೂರ್ಮ, ವರಾಹ, ವಾಮನ, ನರಸಿಂಹ ಮತ್ತು ಪರಶುರಾಮನ ರೂಪವನ್ನು ಧಾರಣೆ ಮಾಡುವವನು ನೀನೇ ಆಗಿರುವೆ. ರಾಮ, ನೀನು ಈ ಚರಾಚರ ಸೃಷ್ಟಿಯನ್ನು ನಿರ್ಮಿಸುವವನು ಅದರ ಪಾಲನೆ-ಪೋಷಣೆ ಮಾಡುವ ಮತ್ತು ಲಯವನ್ನೂ ಮಾಡುವನಾಗಿರುವೆ. ನೀನು ಎಲ್ಲ ದೇವತೆಗಳಿಗೆ ನಿರ್ಭಯವನ್ನು ನೀಡುವವನಾಗಿರುವೆ. ನೀನು ಅನಂತ ಕೋಟಿ ಬ್ರಹ್ಮಾಂಡಗಳ ಚರಾಚರದಲ್ಲಿರುವೆ. ಅಗ್ನಿ ಮತ್ತು ಆಹುತಿ ನೀನೇ ಆಗಿರುವೆ.  ಯಜ್ಞವನ್ನು ಮಾಡುವವನು ಮತ್ತು ಯಜ್ಞವನ್ನು ಮಾಡಿಸಿ ಕೊಳ್ಳುವವನೂ ನೀನೇ ಆಗಿರುವೆ. ಓಂಕಾರವೂ ನೀನೇ ಆಗಿರುವೆ. ನಾನು ಬ್ರಹ್ಮ, ನಿನ್ನ ಹೃದಯವಾಗಿದ್ದೇನೆ, ದೇವಿ ಸರಸ್ವತಿಯು ನಿನ್ನ ವಾಣಿಯಾಗಿದ್ದಾಳೆ. ನಿನ್ನ ಉಸಿರು ಎಂದರೆ ವೇದಗಳಾಗಿವೆ ಮತ್ತು ನಿನ್ನ ದಿವ್ಯ ಶರೀರವೆಂದರೆ ಋಗ್ವೇದದ ಮಂಡಲವಾಗಿದೆ. ನಿನ್ನ ಕ್ರೋಧವೆಂದರೆ ಸೂರ್ಯ ಮತ್ತು ನಿನ್ನ ಕರುಣೆಯೆಂದರೆ ಚಂದ್ರನಾಗಿದ್ದಾನೆ. ನಿನ್ನ ಸೀತೆಯು ಸ್ವಯಂ ಶ್ರೀ ಮಹಾಲಕ್ಷ್ಮಿಯಾಗಿದ್ದಾಳೆ. ರಾವಣನ ಸಂಹಾರಕ್ಕಾಗಿ ನೀನು ಕ್ಷತ್ರೀಯ ರೂಪದಲ್ಲಿ ಅವತರಿಸಿರುವೆ. ನಿನ್ನ ಕಾರ್ಯವು ಈಗ ಪೂರ್ಣಗೊಂಡಿದೆ” ಎಂದು ಹೇಳಿದರು. ಅನಂತರ ತಕ್ಷಣ ಅಗ್ನಿದೇವನು ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸುತ್ತಾನೆ ಮತ್ತು ”ನನಗಿಂತಲೂ ಸೀತೆಯು ಶುದ್ಧವಾಗಿದ್ದಾಳೆ” ಎಂದು ಹೇಳುತ್ತಾನೆ. ಶ್ರೀರಾಮನು ಸೀತೆಯ ಕಡೆಗೆ ಆನಂದದಿಂದ ನೋಡುತ್ತಾನೆ.

ಪರಾತ್ಪರ ಗುರುದೇವರೂ ಎಲ್ಲರಿಗೂ ಸಾಮಾನ್ಯ ಮನುಷ್ಯರ ರೂಪದಲ್ಲಿ ಕಾಣಿಸುತ್ತಾರೆ. ಸಂತರು, ಜ್ಯೋತಿಷ್ಯರು ಮತ್ತು ಜೀವನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳು ಗುರುದೇವರ ಅವತಾರತ್ವವನ್ನು ಜಗತ್ತಿನ ಮುಂದೆ ತಂದಿದ್ದಾರೆ. ತ್ರೇತಾಯುಗದಲ್ಲಿ ಶ್ರೀವಿಷ್ಣುವು ಶ್ರೀರಾಮನ ರೂಪದಲ್ಲಿ ಅವತರಿಸಿದ್ದನು, ಆ ಶ್ರೀವಿಷ್ಣುವೇ ಈಗ ಪರಾತ್ಪರ ಗುರು ಡಾ. ಆಠವಲೆಯವರ ರೂಪದಲ್ಲಿ ಪೃಥ್ವಿಯ ಮೇಲೆ ಬಂದಿದ್ದಾನೆ.

ರಾಮರಾಜ್ಯ ಹೇಗಿತ್ತು ?

ವಾಲ್ಮೀಕಿ ರಾಮಾಯಣದಲ್ಲಿ ಹೀಗೆ ಹೇಳಲಾಗಿದೆ, ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕವಾದ ನಂತರ ಶ್ರೀರಾಮನು ೧೦ ಸಾವಿರ ವರ್ಷಗಳ ವರೆಗೆ ರಾಜ್ಯವಾಳಿದನು. ಆ ಸಮಯದಲ್ಲಿ ‘ರಾಜ್ಯವು ಹೇಗಿತ್ತು ?’, ಇದನ್ನು ವಾಲ್ಮೀಕಿಯವರು ಮುಂದಿನಂತೆ ಉಲ್ಲೇಖಿಸಿದ್ದಾರೆ.

ಅ. ಯಾರಿಗೂ ಮೃತ್ಯುವಿನ ಮತ್ತು ವ್ಯಾಧಿಗಳ ಬಗ್ಗೆ ಯಾವುದೇ ರೀತಿಯ ಭಯವಿರಲಿಲ್ಲ.

ಆ. ಎಲ್ಲರೂ ರೋಗಮುಕ್ತರಾಗಿದ್ದರು.

ಇ. ವಯಸ್ಕ ಜನರೂ ಆನಂದ ಮತ್ತು ಆರೋಗ್ಯದಿಂದ ಇದ್ದರು.

ಈ. ಮಕ್ಕಳಿಗೆ ಜನ್ಮ ಕೊಡುವಾಗ ಸ್ತ್ರೀಯರಿಗೆ ಯಾವುದೇ ತೊಂದರೆಗಳಾಗುತ್ತಿರಲಿಲ್ಲ.

ಉ. ಮಳೆಯು ಅಮೃತದಂತೆ ಮಧುರವಾಗಿತ್ತು.

ಊ. ೧೦ ಸಾವಿರ ವರ್ಷಗಳ ವರೆಗೆ ಪ್ರತಿ ವರ್ಷ ಮಳೆಯು ಸಮಯಕ್ಕೆ ಸರಿಯಾಗಿಯೇ ಬೀಳುತ್ತಿತ್ತು ಮತ್ತು ಧಾನ್ಯಗಳು ಯಾವಾಗಲೂ ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತಿದ್ದವು.

ಎ. ಆ ಕಾಲದಲ್ಲಿ ಒಂದು ಸಲವೂ ಯುದ್ಧ ಆಗಲಿಲ್ಲ ಅಥವಾ ಒಂದು ಸಲವೂ ಬರಗಾಲದ ಪರಿಸ್ಥಿತಿ ಬರಲಿಲ್ಲ.

ಐ. ಒಮ್ಮೆಯೂ ಭೂಕಂಪ, ಜ್ವಾಲಾಮುಖಿ ಅಥವಾ ಯಾವುದೇ ಇನ್ನಿತರ ನೈಸರ್ಗಿಕ ಆಪತ್ತುಗಳು ಬರಲಿಲ್ಲ.

ಓ. ‘ಶ್ರೀರಾಮನು ೧೦೦ ‘ಅಶ್ವಮೇಧ ಯಾಗ’ಗಳನ್ನು ಮಾಡಿದನು.’ (ಆಧಾರ : ವಾಲ್ಮೀಕಿ ರಾಮಾಯಣ, ಯುದ್ಧಕಾಂಡ, ಉತ್ತರಾರ್ಧ)

೧೦ ಸಾವಿರ ವರ್ಷಗಳ ವರೆಗೆ ರಾಜ್ಯವಾಳಿದ ನಂತರ ಶ್ರೀರಾಮನು ತನ್ನ ಅವತಾರವನ್ನು ಮುಕ್ತಾಯಗೊಳಿಸಿದನು. ಅವತಾರ ಮುಗಿದ ನಂತರ, ನಂತರದ ಕಾಲದಲ್ಲಿ ಅಯೋಧ್ಯೆಗೆ ‘ರಾಮರಾಜ್ಯ’ ಎಂದು ಯಾರೂ ಕರೆಯಲಿಲ್ಲ. ಇದನ್ನು ಸಂಕ್ಷಿಪ್ತದಲ್ಲಿ ಹೇಳುವುದಾದರೆ ‘ಶ್ರೀರಾಮನ ಅಸ್ತಿತ್ವವು ಪೃಥ್ವಿಯಲ್ಲಿ ಎಷ್ಟು ಮಹತ್ವದ್ದಾಗಿತ್ತು’, ಎಂಬುದು ಗಮನಕ್ಕೆ ಬರುತ್ತದೆ.

ಈಗಲೂ ಪೃಥ್ವಿಯಲ್ಲಿ ‘ಶ್ರೀವಿಷ್ಣುವಿನ ಅಂಶಾವತಾರ’ ಎಂದು ಮಹರ್ಷಿಗಳು ಗೌರವಿಸಿದ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರು ಇರುವಾಗ ಎಲ್ಲ ಸಾಧಕರು ‘ರಾಮರಾಜ್ಯ’ವನ್ನು ಅನುಭವಿ ಸುತ್ತಿದ್ದಾರೆ ಮತ್ತು ಈ ಮುಂದೆಯೂ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿರುವ ಇಬ್ಬರು ಸದ್ಗುರುಗಳ ಮಾಧ್ಯಮದಿಂದ ೨೦೨೫ ರಲ್ಲಿ ಆಂತರಿಕ ರಾಮರಾಜ್ಯವು ಅವತರಿಸಲಿದೆ. ಮುಂದೆ ೧ ಸಾವಿರ ವರ್ಷಗಳ ವರೆಗೆ ರಾಮರಾಜ್ಯದಂತೆ ಸ್ಥಿತಿಯಿರುವುದು ಮತ್ತು ನಂತರ ಪುನಃ ಅಧರ್ಮ ಪ್ರಾರಂಭ ವಾಗುವುದು. ಅನಂತರ ೧ ಸಾವಿರ ವರ್ಷಗಳ ನಂತರ ಅಧರ್ಮ ಹೆಚ್ಚಾದಾಗ ಭಗವಾನ ವಿಷ್ಣುವು ಪುನಃ ಅವತರಿಸುವನು.

ಶ್ರೀರಾಮನ ಗಂಧರ್ವ ಅಸ್ತ್ರ ಮತ್ತು ಪರಾತ್ಪರ ಗುರು ಡಾಕ್ಟರರ ‘ಪ್ರೀತಿ’ ಅಸ್ತ್ರ

ಮೇಘನಾದ, ಕುಂಭಕರ್ಣ ಮೊದಲಾದ ರಾಕ್ಷಸರು ಯುದ್ಧದಲ್ಲಿ ಹತರಾದ ನಂತರ ಕೊನೆಗೆ ರಾವಣನು ಸ್ವತಃ ಯುದ್ಧಕ್ಕೆ ಹೋಗುವುದಾಗಿ ನಿರ್ಧರಿಸಿದನು. ರಾವಣನ ಬಳಿ ಅತ್ಯಂತ ಬಲಾಢ್ಯ ರಾಕ್ಷಸರ ಒಂದು ಮೀಸಲು ಸೈನ್ಯವಿತ್ತು. ಅವರ ಸಂಖ್ಯೆ ೧ ಕೋಟಿಯಷ್ಟು ಇತ್ತು. ಈ ಮೀಸಲು ರಾಕ್ಷಸರ ಸೈನ್ಯವು ಕೇವಲ ರಾವಣನೊಂದಿಗೆ ಯುದ್ಧಕ್ಕೆ ಹೋಗುತ್ತಿತ್ತು. ಈ ರಾಕ್ಷಸರು ದಷ್ಟಪುಷ್ಟ ಮತ್ತು ಅಪಾರ ಬಲಶಾಲಿಗಳಾಗಿದ್ದರು. ಈ ರಾಕ್ಷಸ ಸೈನ್ಯವು ಯಾವಾಗ ಯುದ್ಧಕ್ಕೆ ಹೊರಟಿತೋ, ಆಗ ರಾವಣನೂ ಅವರ ಹಿಂದೆ ಹೊರಟನು. ಆ ಸಮಯದಲ್ಲಿ ಎಲ್ಲ ವಾನರರು ಭಯಭೀತರಾದರು ಮತ್ತು ಹಿಂದೆ ಹಿಂದೆ ಸರಿಯತೊಡಗಿದರು. ಆಗ ರಾವಣನು ಅವನ ಸೈನ್ಯಕ್ಕೆ, ”ಇಲ್ಲಿ ನನ್ನ ಅವಶ್ಯಕತೆಯಿಲ್ಲ, ನೀವೇ ರಾಮ ಮತ್ತು ಅವನ ವಾನರರನ್ನು ವಧಿಸಿ” ಎಂದು ಹೇಳಿದನು. ರಾವಣನು ಪುನಃ ಲಂಕಾ ನಗರಕ್ಕೆ ಬಂದನು. ಶ್ರೀರಾಮನು ಒಂದೊಂದು ಹೆಜ್ಜೆಗಳನ್ನಿಡುತ್ತ ಮುಂದೆ ಮುಂದೆ ಸಾಗುತ್ತಿದ್ದನು. ಶ್ರೀರಾಮನ ಬಳಿ ಬ್ರಹ್ಮಾಸ್ತ್ರ, ನಾರಾಯಣಾಸ್ತ್ರ, ವರುಣಾಸ್ತ್ರ, ಅಗ್ನೇಯಾಸ್ತ್ರ ಹೀಗೆ ಅನೇಕ ಅಸ್ತ್ರಗಳಿದ್ದರೂ, ಅವನು ‘ಗಂಧರ್ವ ಅಸ್ತ್ರ’ವನ್ನು ಹೊರಗೆ ತೆಗೆದನು. ಶ್ರೀರಾಮನು ನಗುನಗುತ್ತ ಗಂಧರ್ವ ಅಸ್ತ್ರವನ್ನು ಬಿಟ್ಟನು. ಒಂದು ಕೋಟಿ ರಾಕ್ಷಸರ ಕಡೆಗೆ ಒಂದು ಗಂಧರ್ವ ಅಸ್ತ್ರದಿಂದ ಒಂದು ಕೋಟಿ ಅಸ್ತ್ರಗಳು ಹೋದವು. ಆ ಅಸ್ತ್ರಗಳು ರಾಕ್ಷಸರಿರುವ ದಿಶೆಯತ್ತ ಹೋಗುತ್ತಿದ್ದವು, ಆಗ ರಾಕ್ಷಸರಿಗೆ ಅಸ್ತ್ರಗಳು ಕಾಣಿಸದೇ ಕೇವಲ ಶ್ರೀರಾಮನ ಮಂದಹಾಸಭಾವದ ಸುಂದರ ಮುಖ ಕಾಣಿಸುತ್ತಿತ್ತು. ಪ್ರಭು ಶ್ರೀರಾಮನ ಮುಖದ ಕಡೆಗೆ ನೋಡುವಾಗ ರಾಕ್ಷಸರು ಮೈಮರೆತರು ಮತ್ತು ಅವನನ್ನು ನೋಡುತ್ತಲೇ ಇದ್ದರು. ಮರುಕ್ಷಣ ಪ್ರತಿಯೊಂದು ಬಾಣವು ರಾಕ್ಷಸರನ್ನು ಭೇದಿಸಿತು. ಕೆಲವೇ ಕ್ಷಣಗಳಲ್ಲಿ ಶ್ರೀರಾಮನು ಅತ್ಯಂತ ಬಲಿಷ್ಠರಾದÀ ಒಂದು ಕೋಟಿ ರಾಕ್ಷಸರನ್ನು ಸಂಹರಿಸಿದನು.

ಇದುವರೆಗೆ ಸಾಧಕರು ಪರಾತ್ಪರ ಗುರು ಡಾ. ಆಠವಲೆಯವರನ್ನು ಪಾತಾಳದ ಮಾಂತ್ರಿಕರೊಂದಿಗೆ ಸೂಕ್ಷ್ಮ-ಯುದ್ಧ ಮಾಡುವುದನ್ನು ನೋಡಿದ್ದಾರೆ. ಆಗಲೂ ಅವರ ಮುಖದ ಮೇಲೆ ಯಾವಾಗಲೂ ಮಂದಹಾಸ ಇರುತ್ತದೆ. ಸಪ್ತಪಾತಾಳದಲ್ಲಿನ ದೊಡ್ಡ ಕೆಟ್ಟ ಶಕ್ತಿಗಳೊಂದಿಗೆ ಗುರುದೇವರು ಪ್ರೇಮದಿಂದಲೇ ಯುದ್ಧವನ್ನು ಮಾಡಿದರು. ಸಂಕ್ಷಿಪ್ತವಾಗಿ ಹೇಳುವುದಾದರೆ, ಅದು ಪರಾತ್ಪರ ಗುರು ಡಾಕ್ಟರರ ‘ಪ್ರೀತಿಅಸ್ತ್ರ’ವಾಗಿತ್ತು ಮತ್ತು ಕೆಟ್ಟ ಶಕ್ತಿಗಳೂ ಅವರಿಗೆ ಮರುಳಾದವು.

ಹೇ ಭಗವಂತಾ, ‘ಇದು ನಿನ್ನ ಪೃಥ್ವಿಯ ಮೇಲಿನ ಸದೇಹ ರೂಪವಾಗಿದೆ ಮತ್ತು ಅದರ ಸೇವೆಯನ್ನು ಮಾಡುವುದರಿಂದ ನಿನ್ನ ಕೃಪೆಯಾಗಿ ನಮಗೆ ನಿನ್ನ ಪ್ರಾಪ್ತಿಯಾಗಲಿದೆ’, ಎಂಬ ಅರಿವು ನಮ್ಮಲ್ಲಿ ಸತತವಾಗಿರಲಿ, ಇದೇ ನಿನ್ನ ಕೋಮಲ ಚರಣಗಳಲ್ಲಿ ಪ್ರಾರ್ಥನೆ.