೧. ಗ್ರಂಥಗಳ ಲೇಖನದ ಹಿನ್ನೆಲೆ ಮತ್ತು ವೈದ್ಯಕೀಯ ಗ್ರಂಥಗಳ ಲೇಖನ ಆರಂಭ !
‘ನನ್ನ ಎಲ್ಲಕ್ಕಿಂತ ಹಿರಿಯ ಅಣ್ಣ ಖ್ಯಾತ ಬಾಲರೋಗತಜ್ಞ ಡಾ. ವಸಂತ ಬಾಳಾಜಿ ಆಠವಲೆಯವರು ಪಾಲಕರಿಗಾಗಿ ಗ್ರಂಥ ಲೇಖನವನ್ನು ಆರಂಭಿಸಿದ್ದರು. ಆಗ ನನಗೆ ‘ನಾನು ಕೂಡ ಗ್ರಂಥಗಳನ್ನು ಬರೆಯಬೇಕು ಎಂದು ಅನಿಸುತ್ತಿತ್ತು.’ ವೈದ್ಯಕೀಯ ಶಿಕ್ಷಣ ಪೂರ್ಣವಾದ ನಂತರ ‘ಸ್ವಸಮ್ಮೋಹನ ಉಪಚಾರ ಪದ್ಧತಿಯಿಂದ ಅನೇಕ ವ್ಯಾಧಿಗಳನ್ನು ಗುಣಪಡಿಸಬಹುದು’, ಎಂಬುದು ನನ್ನ ಗಮನಕ್ಕೆ ಬಂದಿತು. ಜನಸಾಮಾನ್ಯರಿಗೆ ಇದರ ಮಾಹಿತಿ ತಿಳಿಯಬೇಕೆಂಬ ಉದ್ದೇಶದಿಂದ ಈ ವಿಷಯದ ಮೇಲಿನ ‘ಸೈನ್ಸ್ ಆಫ್ ಹಿಪ್ನೋಸಿಸ್ (Hypnotherapy)’ ಮತ್ತು ‘ಹಿಪ್ನೋಥೆರಪಿ (Science of Hypnosis) ಈ ಎರಡು ಗ್ರಂಥಗಳನ್ನು ನಾವು ಪ್ರಕಾಶನ ಮಾಡಿದೆವು. ಈ ವಿಷಯದಲ್ಲಿನ ‘ಭಾರತೀಯ ವೈದ್ಯಕೀಯ ಸಮ್ಮೋಹನ ಎವಮ್ ಸಂಶೋಧನ ಪತ್ರಿಕಾ (Indian Journal of Clinical Hypnosis and Research)’ ಈ ‘ಜರ್ನಲ್’ ಕೂಡ ನಾವು ೫ ವರ್ಷ ಪ್ರಕಾಶನ ಮಾಡಿದೆವು. ಪ್ರತಿವರ್ಷ ಸರಾಸರಿ ೩ ಲೇಖನಗಳನ್ನು ಪ್ರಕಾಶನ ಮಾಡಿದೆವು.
೨. ಅಧ್ಯಾತ್ಮದ ಅಭ್ಯಾಸ ಮತ್ತು ‘ಅಧ್ಯಾತ್ಮಶಾಸ್ತ್ರ’ ಈ ಗ್ರಂಥದ ಪ್ರಕಾಶನ !
ಅನಂತರ ‘ವೈದ್ಯಕೀಯ ಉಪಚಾರಕ್ಕಿಂತ ಅಧ್ಯಾತ್ಮ ಶ್ರೇಷ್ಠ’, ಎಂಬುದು ತಿಳಿದಾಗ ನನ್ನ ಅಧ್ಯಾತ್ಮದ ಅಭ್ಯಾಸ ಆರಂಭವಾಯಿತು. ಆ ಅಭ್ಯಾಸದಿಂದ ಅರಿವಾದ ಅಂಶಗಳ ಆಧಾರದಲ್ಲಿ ನಾನು ೧೯೮೭ ರಲ್ಲಿ ‘ಅಧ್ಯಾತ್ಮಶಾಸ್ತ್ರ’ ಈ ಚಕ್ರಮುದ್ರಾಂಕಿತ (‘ಸೈಕ್ಲೋಸ್ಟೈಲ್’) ಗ್ರಂಥದ ಪ್ರಕಾಶನ ಮಾಡಿದೆನು. ಈ ಗ್ರಂಥದಲ್ಲಿ ಕೇವಲ ತಾತ್ತ್ವಿಕ ಮಾಹಿತಿ ಇತ್ತು. ಕಾಲಕ್ರಮೇಣ ‘ಅಧ್ಯಾತ್ಮದ ತಾತ್ತ್ವಿಕ ಮಾಹಿತಿಗಿಂತ ಕೃತಿಯ ಸ್ತರದಲ್ಲಿ ‘ಸಾಧನೆ’ ಇದು ಜನರಿಗೆ ತಿಳಿಯಬೇಕು’, ಎಂಬುದು ತಿಳಿದಾಗ ಕೇವಲ ಪ್ರಾಯೋಗಿಕ ಸ್ತರದ ಜ್ಞಾನದ ಆಧಾರದಲ್ಲಿ ಗ್ರಂಥಗಳ ಪ್ರಕಾಶನ ಮಾಡಲು ಆರಂಭಿಸಿದೆನು.
೩. ಪ.ಪೂ.ಭಕ್ತರಾಜ ಮಹಾರಾಜರಿಂದ ಗ್ರಂಥಲೇಖನಕ್ಕಾಗಿ ಆಶೀರ್ವಾದ ಮತ್ತು ಅದರ ಫಲಿತ !
ನನ್ನ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜ (ಪ.ಪೂ. ಬಾಬಾ) ಇವರ ಭೇಟಿಯಾದ ನಂತರ ಅವರು ಏನೇನು ಕಲಿಸುತ್ತಿದ್ದರೋ, ಅದೆಲ್ಲವನ್ನೂ ನಾನು ಬರೆದಿಡುತ್ತಿದ್ದೆನು. ಆಗ ಪ.ಪೂ. ಬಾಬಾ ನನಗೆ, ”ಈ ಲೇಖನದಿಂದ ನಿಮಗೆ ಏನೂ ಲಾಭವಾಗಲಿಕ್ಕಿಲ್ಲ (ಏಕೆಂದರೆ ಈಗ ನೀವು ಶಬ್ದಾತೀತ ಮಾಧ್ಯಮದಿಂದ ಕಲಿಯಲು ಸಾಧ್ಯವಿದೆ); ಆದರೆ ಇತರರಿಗೆ ಉಪಯೋಗವಾಗಬಹುದು’’ ಎಂದು ಹೇಳಿದರು. ನಾನು ೧೯೯೪ ರಲ್ಲಿ ‘ಅಧ್ಯಾತ್ಮಶಾಸ್ತ್ರ’ ಈ ಗ್ರಂಥವನ್ನು ಬಾಬಾರವರಿಗೆ ತೋರಿಸಿದೆನು. ಅವರಿಗೆ ಅದು ಇಷ್ಟವಾಯಿತು. ಪ.ಪೂ.ಬಾಬಾ ನನಗೆ, ”ನನ್ನ ಗುರುಗಳು ನನಗೆ ‘ನೀನು ಅನೇಕ ಪುಸ್ತಕಗಳನ್ನು ಬರೆಯುವಿ |’ ಎಂದು ಆಶೀರ್ವಾದ ನೀಡಿದ್ದರು, ಆದರೆ ನಾನು ಭಜನೆಯ ಒಂದೇ ಪುಸ್ತಕ ಬರೆದೆನು, ನನ್ನ ಗುರುಗಳ ಆಶೀರ್ವಾದವನ್ನು ನಾನು ನಿಮಗೆ ಕೊಡುತ್ತೇನೆ’’ ಎಂದು ಹೇಳಿದರು. ಆಗ ನಾನು, ”ಈಗ ಪುಸ್ತಕಗಳನ್ನು ಬರೆಯುವುದರಲ್ಲಿ ಆನಂದ ಅನಿಸುವುದಿಲ್ಲ.’’ (ಶಬ್ದಗಳ ಆಚೆಗಿನ ಮಟ್ಟಕ್ಕೆ ಹೋದಾಗ ಶಬ್ದಗಳ ಮಟ್ಟಕ್ಕೆ ಬರುವುದೆಂದರೆ, ಆನಂದವನ್ನು ಕಳೆದುಕೊಂಡಂತೆ ಆಗುತ್ತದೆ.) ಎಂದು ಹೇಳಿದೆ. ಆಗ ಬಾಬಾ ಹೇಳಿದರು, ”ನಮ್ಮ ಗುರುಗಳ ಆಶೀರ್ವಾದವನ್ನು ವ್ಯರ್ಥಗೊಳಿಸುವಿರಾ ? ನೀವು ಪುಸ್ತಕಗಳನ್ನು ಬರೆಯಲೇ ಬೇಕು. ಅದು ನಿಮ್ಮ ಕರ್ತವ್ಯವೇ ಆಗಿದೆ. ಒಂದೊಂದು ವಿಷಯದ ಮೇಲೆ ಒಂದೊಂದು, ಹೀಗೆ ಸಣ್ಣ ಸಣ್ಣ ಪುಸ್ತಕಗಳನ್ನು ಬರೆಯಿರಿ. ಜನರಿಗೆ ಉಪಯೋಗಿಸಲು ಸುಲಭವಾಗಬೇಕು ಮತ್ತು ದುಬಾರಿ ಅನಿಸಲೂ ಬಾರದು.’’
೪. ಸಮಷ್ಟಿಯ ಉದ್ಧಾರಕ್ಕಾಗಿ ಜೀವನದ ೩೮ ವರ್ಷ ಅಧ್ಯಾತ್ಮ ಮತ್ತು ಸಾಧನೆಯ ವಿಷಯದಲ್ಲಿ ಗ್ರಂಥಗಳ ಲೇಖನ ಮಾಡುವುದು ಮತ್ತು ಅದರ ಫಲಿತಾಂಶ !
ನಾನು ಇತರ ಸಂತರ ಹಾಗೆ ಎಲ್ಲೆಡೆ ಸಂಚಾರ ಮಾಡುತ್ತಾ ಕೀರ್ತನೆ-ಪ್ರವಚನಗಳನ್ನು ಮಾಡುತ್ತಿದ್ದರೆ, ಸಮಾಜದಲ್ಲಿ ಕೇವಲ ನಾನು ಹೆಸರು ಗಳಿಸುತ್ತಿದ್ದೆ. ಹಾಗೆ ಮಾಡದೆ ನಾನು ಆ ಸಮಯವನ್ನು ಅಧ್ಯಾತ್ಮಶಾಸ್ತ್ರ ಮತ್ತು ಇನ್ನಿತರ ವಿಷಯಗಳ ಗ್ರಂಥ ಲೇಖನ ಮಾಡಲು ಉಪಯೋಗಿಸಿದೆ. ಸಾವಿರಾರು ಜಿಜ್ಞಾಸುಗಳು ಅಧ್ಯಾತ್ಮಶಾಸ್ತ್ರದ ಈ ಗ್ರಂಥಗಳ ಅಭ್ಯಾಸ ಮಾಡಿದರು ಮತ್ತು ‘ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ’, ಎಂಬುದನ್ನು ತಿಳಿದುಕೊಂಡು ತಕ್ಷಣ ಸಾಧನೆಯನ್ನೂ ಆರಂಭಿಸಿದರು. ಆದ್ದರಿಂದ ಜಿಜ್ಞಾಸುಗಳು ಸಾಧಕರಾದರು ಮತ್ತು ಮುಂದು ಮುಂದಿನ ಹಂತದ ಸಾಧನೆ ಮಾಡಿ ಅವರು ಸಂತ ಪದವಿಯ ಕಡೆಗೆ ಪ್ರಯಾಣ ಬೆಳೆಸಿದರು. ಫೆಬ್ರವರಿ ೨೦೨೪ ರ ವರೆಗೆ ಸನಾತನ ಸಂಸ್ಥೆಯ ೧೨೭ ಜನ ಸಾಧಕರು ಸಂತರಾಗಿದ್ದಾರೆ ಮತ್ತು ೧೦೫೧ ಸಾಧಕರು ಸಂತತ್ವದ ದಿಕ್ಕಿನಲ್ಲಿ ಪ್ರಯಾಣಿಸುತ್ತಿದ್ದು ೫-೧೦ ವರ್ಷಗಳಲ್ಲಿ ಅವರು ಸಂತಪದವಿಯನ್ನು ಪ್ರಾಪ್ತ್ತ ಮಾಡಿಕೊಳ್ಳುವರು. ಇಷ್ಟು ಶೀಘ್ರಗತಿ ಯಲ್ಲಿ ಸಾಧಕ ಮತ್ತು ಸಂತರ ನಿರ್ಮಾಣವಾಗುವುದು ಇದು ಮೊಟ್ಟಮೊದಲ ಉದಾಹರಣೆಯಾಗಿರಬೇಕು ! ಸಮಾಜಕ್ಕೆ ಆಧ್ಯಾತ್ಮಿಕ ಸ್ತರದಲ್ಲಿ ಆಗಿರುವ ಲಾಭವು ನನ್ನ ಪ್ರಸಿದ್ಧಿಯ ತುಲನೆ ಯಲ್ಲಿ ಅನೇಕ ಪಟ್ಟು ಹೆಚ್ಚು ಮಹತ್ವದ್ದಾಗಿದೆ.
೫. ಗ್ರಂಥ ಲೇಖನದ ಉದ್ದೇಶ
ಕಾಲದ ಪ್ರವಾಹದಲ್ಲಿ ಹಿಂದೂ ಧರ್ಮದ ಮಹತ್ವ ಕುಸಿಯಲು ಆರಂಭವಾಗಿದೆ. ಧರ್ಮಶಾಸ್ತ್ರವನ್ನು ತಿಳಿದುಕೊಂಡು ಕೃತಿ ಮಾಡದಿರುವುದು ಮತ್ತು ಅದರಿಂದ ಅಪೇಕ್ಷಿತ ಲಾಭ ವಾಗದಿರುವುದರಿಂದ ಮನುಷ್ಯ ಧಾರ್ಮಿಕ ಕೃತಿಯಿಂದ ದೂರ ವಾಗುತ್ತಿದ್ದಾನೆ. ‘ಈಶ್ವರಪ್ರಾಪ್ತಿ ಮಾಡುವುದು’, ಮನುಷ್ಯ ಜನ್ಮದ ಮೂಲ ಉದ್ದೇಶವಾಗಿದ್ದು ಅದೇ ಮಾನವನಿಗೆ ಮರೆತು ಹೋಗಿದೆ. ಆದ್ದರಿಂದ ‘ಧರ್ಮದ ಜ್ಞಾನ ಮತ್ತು ಈಶ್ವರಪ್ರಾಪ್ತಿಯ ಮಾರ್ಗ ಅಖಿಲ ಮನುಕುಲಕ್ಕೆ ತಿಳಿಯಬೇಕು’, ಎಂಬ ಉದ್ದೇಶದಿಂದ ನಾನು ಗ್ರಂಥಲೇಖನ ಮಾಡುತ್ತಿದ್ದೇನೆ. ಇದರ ಮೂಲಕ ‘ಆನಂದಪ್ರಾಪ್ತಿ ಮತ್ತು ಶೀಘ್ರ ಗತಿಯಲ್ಲಿ ಈಶ್ವರಪ್ರಾಪ್ತಿ ಹೇಗೆ ಮಾಡಿಕೊಳ್ಳಬೇಕು ?’ ಎಂಬುದರ ಕಾಲಾನುಸಾರ ಸಾಧನೆಯ ಪಾಠ ಕಲಿಸಲಾಗುತ್ತದೆ.
೬. ಸನಾತನದ ಗ್ರಂಥಸಂಪತ್ತಿನ ವೈಶಿಷ್ಟ್ಯಗಳು
೬ ಅ. ಸರ್ವಾಂಗಸ್ಪರ್ಶಿ ಗ್ರಂಥಸಂಪತ್ತು : ಸನಾತನದ ವತಿಯಿಂದ ಸಾಧನೆ, ಆಚಾರಧರ್ಮ, ಬಾಲಸಂಸ್ಕಾರ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ, ಈಶ್ವರಪ್ರಾಪ್ತಿಗಾಗಿ ಕಲೆ, ಆಧ್ಯಾತ್ಮಿಕ ಉಪಾಯ, ಆಪತ್ಕಾಲೀನ ಉಪಚಾರ, ಸಮ್ಮೋಹನ ಉಪಚಾರ ಇತ್ಯಾದಿ ವಿವಿಧ ವಿಷಯಗಳ ಗ್ರಂಥಸಂಪತ್ತನ್ನು ಸಂಕಲನ ಮಾಡಲಾಗಿದೆ.
೬ ಆ. ಸುಲಭ ಭಾಷೆಯಲ್ಲಿನ ಬರವಣಿಗೆ : ಹೆಚ್ಚಿನ ಲೇಖಕರು, ಸಂತರು ಮುಂತಾದವರ ಅಧ್ಯಾತ್ಮದ ವಿಷಯದ ಲೇಖನ ಕಠಿಣ ಭಾಷೆಯಲ್ಲಿರುತ್ತದೆ. ಆದ್ದರಿಂದ ಆ ಲೇಖನವು ಜನ ಸಾಮಾನ್ಯರಿಗೆ ತಕ್ಷಣ ಅರ್ಥವಾಗುವುದಿಲ್ಲ. ಈ ಅಡಚಣೆಯನ್ನು ಗಮನದಲ್ಲಿಟ್ಟುಕೊಂಡು ಗ್ರಂಥಗಳನ್ನು ಜನಸಾಮಾನ್ಯರಿಗೆ ತಿಳಿಯುವಂತಹ ಸುಲಭ ಭಾಷೆಯಲ್ಲಿ ಬರೆಯಲಾಗಿದೆ.
೬ ಇ. ವ್ಯಾಕರಣದ ದೃಷ್ಟಿಯಲ್ಲಿ ಶುದ್ಧ ಲೇಖನಕ್ಕಾಗಿ ಪ್ರಯತ್ನ : ಸನಾತನದ ಗ್ರಂಥಗಳಲ್ಲಿ ವ್ಯಾಕರಣದ ಕಡೆಗೆ ಗಮನ ಹರಿಸ ಲಾಗುತ್ತದೆ. ಇತರ ಲೇಖಕರ ಗ್ರಂಥಗಳಲ್ಲಿ ಪ್ರತಿಯೊಂದು ಪುಟ ದಲ್ಲಿ ವ್ಯಾಕರಣದ ೧೦-೧೫ ತಪ್ಪುಗಳಿರುತ್ತವೆ, ಸನಾತನದ ಗ್ರಂಥಗಳಲ್ಲಿ ತಪ್ಪುಗಳು ಕಡಿಮೆ ಇರುತ್ತವೆ. ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಈ ಉಪಕರಣದ ಆಧಾರದಲ್ಲಿ ‘ವ್ಯಾಕರಣದ ದೃಷ್ಟಿಯಲ್ಲಿ ಶುದ್ಧ ಮತ್ತು ಅಶುದ್ಧ ಲೇಖನಗಳ ಬಗ್ಗೆ ಪರಿಶೀಲನೆ ಮಾಡಲಾಯಿತು. ಆಗ ಪ್ರಯೋಗಕ್ಕಾಗಿ ಒಂದು ಮರಾಠಿ ಪುಸ್ತಕದಲ್ಲಿನ ವ್ಯಾಕರಣದ ದೃಷ್ಟಿಯಲ್ಲಿ ಅಶುದ್ಧ ಲೇಖನವನ್ನು ಆಯ್ದುಕೊಳ್ಳಲಾಯಿತು. ನಂತರ ಅದೇ ಲೇಖನವನ್ನು ವ್ಯಾಕರಣದ ನಿಯಮಕ್ಕನುಸಾರ ಶುದ್ಧಪಡಿಸಿ ಅದನ್ನು ಪರಿಶೀಲಿಸಲಾಯಿತು. ಆ ಪರಿಶೀಲನೆಯಲ್ಲಿ ಈ ಮುಂದಿನ ವಿಷಯಗಳ ಅರಿವಾಯಿತು.
ಇದರ ಅರ್ಥ ಲೇಖನ ವ್ಯಾಕರಣ ದೃಷ್ಟಿಯಲ್ಲಿ ಅಶುದ್ಧವಾಗಿದ್ದರೆ ಅದರಲ್ಲಿ ನಕಾರಾತ್ಮಕ ಊರ್ಜೆ ಇರುತ್ತದೆ. ಈ ಅಶುದ್ಧ ಲೇಖನವನ್ನು ವ್ಯಾಕರಣದ ನಿಯಮಕ್ಕನುಸಾರ ಶುದ್ಧಪಡಿಸಿದರೆ ನಕಾರಾತ್ಮಕ ಊರ್ಜೆ ನಷ್ಟವಾಗಿ ಅದರಲ್ಲಿ ಸಕಾರಾತ್ಮಕ ಊರ್ಜೆ ಹೆಚ್ಚಾಗುತ್ತದೆ. ಆದುದರಿಂದ ಸನಾತನದ ಗ್ರಂಥಗಳಲ್ಲಿನ ವ್ಯಾಕರಣ ಮತ್ತು ಶುದ್ಧಲೇಖನ ಪರಿಪೂರ್ಣವಿರಬೇಕೆಂದು ಪ್ರಯತ್ನಿಸಲಾಗುತ್ತದೆ.
೬ ಈ. ಅಧ್ಯಾತ್ಮದ ಕೇವಲ ತಾತ್ತ್ವಿಕ ವಿವೇಚನೆಯಲ್ಲ, ಕಾಲಕ್ಕನುಸಾರ ಸಾಧನೆಯ ಕೃತಿ ಮಾಡುವ ವಿಷಯದಲ್ಲಿ ಮಾರ್ಗದರ್ಶನ ! : ಗ್ರಂಥಗಳಿಂದ ‘ಸನಾತನ ಹೇಳುತ್ತಿರುವ ಸಾಧನೆಯನ್ನು ಹೇಗೆ ಮಾಡಬೇಕು ಎಂಬುದನ್ನು ಕಲಿಸಲಾಗುತ್ತದೆ. ಇದರಲ್ಲಿ ಕೇವಲ ತಾತ್ತ್ವಿಕ ಮಾಹಿತಿಯನ್ನು ನೀಡದೆ ಪ್ರಾಯೋಗಿಕ ಸ್ತರದಲ್ಲಿನ ಸಾಧನೆಯ ಮಾಹಿತಿಯನ್ನೂ ಕೊಡಲಾಗಿದೆ. ನಾನು ಬರೆದಿರುವ ಆಧ್ಯಾತ್ಮಿಕ ಮತ್ತು ತಾತ್ತ್ವಿಕ ಮಾಹಿತಿ ಇರುವ ಗ್ರಂಥಗಳಿಂದ ಸಾಕಷ್ಟು ವಾಚಕರು ಮತ್ತು ಧರ್ಮಪ್ರೇಮಿಗಳು ಸಾಧನೆಯ ಕಡೆಗೆ ಆಕರ್ಷಿಸ ಲ್ಪಟ್ಟಿದ್ದಾರೆ. ಅವರಿಗೆ ಪ್ರತ್ಯಕ್ಷ ಸಾಧನೆ ತಿಳಿಯಬೇಕೆಂದು ಸಾಧನೆಯ ಪ್ರಾತ್ಯಕ್ಷಿಕ ವಿಷಯಗಳ ಗ್ರಂಥಗಳನ್ನು ಬರೆಯಲು ಪ್ರಾರಂಭಿಸಿದ್ದೇನೆ.
ಸಾಮಾನ್ಯ ವಾಚಕರಿಗೆ ತಿಳಿಯಲು ಗ್ರಂಥಗಳಲ್ಲಿ ಅಧ್ಯಾತ್ಮದ ವಿಷಯದ ಲೇಖನಗಳ ಜೊತೆಗೆ ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿನ ಲೇಖನಗಳೂ ಉಪಯೋಗವಾಗುತ್ತವೆ. ಅದಕ್ಕಾಗಿ ಲೇಖನದಲ್ಲಿ ಅವುಗಳನ್ನೂ ಸಮಾವೇಶಗೊಳಿಸಲಾಗುತ್ತ್ತಿದೆ.
೬ ಉ. ಪೃಥ್ವಿಯ ಮೇಲೆ ಎಲ್ಲಿಯೂ ಲಭ್ಯವಿಲ್ಲದ ಜ್ಞಾನ : ಸನಾತನದ ಹೆಚ್ಚಿನ ಗ್ರಂಥಗಳಲ್ಲಿ ಪೃಥ್ವಿಯ ಮೇಲೆ ಮೊದಲು ಲಭ್ಯವಿದ್ದ ಜ್ಞಾನದ ಪ್ರಮಾಣ ಸುಮಾರು ಶೇ. ೨೦ ರಷ್ಟಿದೆ. ಗ್ರಂಥಗಳಲ್ಲಿ ನೀಡಿದ ಶೇಖಡಾವಾರು ಸ್ತರದ ಜ್ಞಾನ (ಉದಾ. ವಿವಿಧ ದೇವತೆಗಳ ‘ಉತ್ಪತ್ತಿ, ಸ್ಥಿತಿ ಮತ್ತು ಲಯ ಮಾಡುವ ಕ್ಷಮತೆ’) ಮತ್ತು ಪ್ರಾಯೋಗಿಕ ವಿಷಯಗಳಿಗೆ ಸಂಬಂಧಿಸಿದ ಜ್ಞಾನ (ಉದಾ. ಆದರ್ಶ ದೇವರಕೋಣೆಯ ಅಳತೆ) ಇಂತಹ ಜ್ಞಾನ ಇಷ್ಟರವರೆಗೆ ಪೃಥ್ವಿಯ ಮೇಲೆ ಎಲ್ಲಿಯೂ ಲಭ್ಯವಿರಲಿಲ್ಲ.
೬ ಊ. ವಿಜ್ಞಾನಯುಗದಲ್ಲಿ ವಾಚಕರಿಗೆ ಸಹಜವಾಗಿ ತಿಳಿಯುವಂತಹ ವೈಜ್ಞಾನಿಕ ಪರಿಭಾಷೆಯಲ್ಲಿನ ಲೇಖನ : ಸದ್ಯದ ವಿಜ್ಞಾನಯುಗದ ಪೀಳಿಗೆಗೆ ವೈಜ್ಞಾನಿಕ ಪರಿಭಾಷೆಯ ಲೇಖನಗಳು ಬೇಗನೆ ಅರ್ಥವಾಗುತ್ತವೆ. ಅಧ್ಯಾತ್ಮದಲ್ಲಿನ ಪ್ರತಿಯೊಂದು ವಿಷಯದಲ್ಲಿನ ‘ಏಕೆ ಮತ್ತು ಹೇಗೆ’, ಎಂಬುದನ್ನು ಅವರಿಗೆ ವಿವರಿಸಿ ಹೇಳಿದರೆ, ಅವರಿಗೆ ಅಧ್ಯಾತ್ಮದ ಮೇಲೆ ವಿಶ್ವಾಸ ಬರುತ್ತದೆ ಮತ್ತು ಅವರು ಸಾಧನೆಯ ಕಡೆಗೆ ಹೊರಳುತ್ತಾರೆ. ಅದಕ್ಕಾಗಿ ಸನಾತನದ ಪ್ರತಿಯೊಂದು ಗ್ರಂಥದಲ್ಲಿ ಅಧ್ಯಾತ್ಮಶಾಸ್ತ್ರ ವೈಜ್ಞಾನಿಕ ಪರಿಭಾಷೆಯಲ್ಲಿ (ಕೋಷ್ಟಕ, ಶೇಕಡಾವಾರು ಇತ್ಯಾದಿ ಪದ್ಧತಿಯಲ್ಲಿ) ಹೇಳಲು ಪ್ರಯತ್ನ ಮಾಡಲಾಗಿದೆ. ಅಧ್ಯಾತ್ಮದ ವಿವಿಧ ಅಂಗಗಳ ಕಾರ್ಯಕಾರಣಭಾವ ಮತ್ತು ಅಧ್ಯಾತ್ಮದಲ್ಲಿನ ಪ್ರತಿಯೊಂದು ಕೃತಿಯ ವಿಷಯದ ಶಾಸ್ತ್ರೀಯ ಭಾಷೆಯ ಮಾಹಿತಿಯನ್ನು ಗ್ರಂಥಗಳಲ್ಲಿ ನೀಡಲಾಗಿದೆ.
೬ ಎ. ಪ್ರಗತ ವೈಜ್ಞಾನಿಕ ಉಪಕರಣಗಳ ಮೂಲಕ ಮಾಡಿದ ಸಂಶೋಧನಾತ್ಮಕ ಪ್ರಯೋಗಗಳು : ಆಯಾಯ ವಿಷಯಗಳಿಗೆ ಸಂಬಂಧಿಸಿದ ಗ್ರಂಥಗಳಲ್ಲಿ ‘ಧಾರ್ಮಿಕ ಕೃತಿ ಮತ್ತು ಸಾಧನೆಯಿಂದ ವ್ಯಕ್ತಿ, ವಸ್ತು, ವಾಸ್ತು ಮತ್ತು ವಾತಾವರಣದ ಮೇಲಾಗುವ ಒಳ್ಳೆಯ-ಕೆಟ್ಟ ಪರಿಣಾಮಗಳಿಗೆ ಸಂಬಂಧಿಸಿದ ಸೂಕ್ಷ್ಮ-ಸ್ತರದ ಪ್ರಕ್ರಿಯೆಯನ್ನು ದರ್ಶಿಸುವ ಸೂಕ್ಷ್ಮಚಿತ್ರಗಳು (ಸೂಕ್ಷ್ಮದಿಂದ ಕಾಣಿಸಿದ ಚಿತ್ರಗಳು) ಮತ್ತು ಲೇಖನಗಳು ಮತ್ತು ಆಂಗ್ಲ ಅಕ್ಷರಗಳಲ್ಲ, ದೇವನಾಗರಿ ಅಕ್ಷರಗಳು ಸಾತ್ತ್ವಿಕವಾಗಿರುತ್ತವೆ; ತೀರ್ಥಕ್ಷೇತ್ರಗಳ ಮಹಾತ್ಮೆ’ ಇತ್ಯಾದಿಗಳ ವಿಷಯದಲ್ಲಿ ವೈಜ್ಞಾನಿಕ ಉಪಕರಣ ಗಳ ಮೂಲಕ ಮಾಡಿದ ಸಂಶೋಧನೆ ಸಮಾವೇಶವಿದೆ.
೬ ಏ. ಬುದ್ಧಿಯ ಆಚೆಗಿನ ಲೇಖನ : ಗ್ರಂಥಗಳಲ್ಲಿನ ನನ್ನ ಲೇಖನವನ್ನು ಬುದ್ಧಿಯ ಸ್ತರದಲ್ಲಿ ವಿಚಾರ ಮಾಡಿ ಬರೆದಿಲ್ಲ. ದೇವರು ಸೂಚಿಸುವುದನ್ನೇ ಅದರಲ್ಲಿ ಬರೆಯಲಾಗಿದೆ.
೬ ಒ. ಸೂಕ್ಷ್ಮ-ಜ್ಞಾನದ ವಿಷಯದ ಪರೀಕ್ಷಣೆ ಮತ್ತು ಚಿತ್ರಗಳು : ಸಾತ್ತ್ವ್ವಿಕ ಉಡುಗೆತೊಡುಗೆ, ಆಹಾರ, ಅಲಂಕಾರ, ಧಾರ್ಮಿಕ ಕೃತಿ ಇತ್ಯಾದಿಗಳಿಂದ ವ್ಯಕ್ತಿಯ ಮೇಲಾಗುವ ಒಳ್ಳೆಯ ಪರಿಣಾಮ ಈ ಬಗ್ಗೆ ಸೂಕ್ಷ್ಮ-ಸ್ತರದ ಪ್ರಕ್ರಿಯೆ ತೋರಿಸುವ ಪರೀಕ್ಷಣೆ, ಚಿತ್ರಗಳನ್ನು ಸನಾತನದ ಆಯಾ ವಿಷಯದ ಗ್ರಂಥಗಳಲ್ಲಿದೆ.
೬ ಔ. ಕೆಟ್ಟ ಶಕ್ತಿಗಳ ವಿಷಯದಲ್ಲಿನ ಜ್ಞಾನ ಮತ್ತು ಅವುಗಳ ತೊಂದರೆ ಗಳ ನಿವಾರಣೆಗೆ ಉಪಾಯ : ಮನುಕುಲದ ಶೇ. ೮೦ ರಷ್ಟು ಸಮಸ್ಯೆಗಳಿಗೆ ‘ಕೆಟ್ಟ ಶಕ್ತಿಗಳ ತೊಂದರೆ’ಯೆ ಮೂಲವಾಗಿರುತ್ತದೆ. ಈ ಬಗ್ಗೆ ಈ ಹಿಂದೆ ಎಲ್ಲಿಯೂ ಲಭ್ಯವಿಲ್ಲದ ಜ್ಞಾನ ಮತ್ತು ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಯ ಉಪಾಯವನ್ನು ಆಯಾಯ ಗ್ರಂಥಗಳಲ್ಲಿ ಸಮಾವೇಶಗೊಳಿಸಲಾಗಿದೆ.
೬ ಅಂ. ಲೇಖನಗಳಿಗೆ ವೇದ, ಉಪನಿಷತ್ತುಗಳು ಇತ್ಯಾದಿ ಧರ್ಮಗ್ರಂಥಗಳ ಆಧಾರ : ಹಿಂದಿನ ಕಾಲದ ಋಷಿಗಳು ವೇದ, ಉಪನಿಷತ್ತು, ರಾಮಾಯಣ, ಮಹಾಭಾರತದಂತಹ ಧರ್ಮಗ್ರಂಥಗಳ ಮೂಲಕ ವಿಸ್ತಾರ ಲೇಖನಗಳನ್ನು ಮಾಡಿಟ್ಟಿದ್ದಾರೆ. ಈ ಧರ್ಮಗ್ರಂಥಗಳಿಂದ ಪ್ರಸ್ತುತ ಕಾಲಕ್ಕೆ ಆವಶ್ಯಕವಿರುವ ವಿಷಯಗಳನ್ನು ಮತ್ತು ಲೇಖನಗಳನ್ನು ಸನಾತನದ ಗ್ರಂಥಗಳಿಗೆ ಆಯ್ದು ಕೊಳ್ಳಲಾಗುತ್ತದೆ. ಲೇಖನಗಳಿಗೆ ಆವಶ್ಯಕವಿರುವ ಸಂದರ್ಭ ಈ ಗ್ರಂಥಗಳಿಂದ ಸಹಜವಾಗಿ ಉಪಲಬ್ಧವಾಗುತ್ತದೆ.
೬ ಕ. ಲೇಖಕ ಅಲ್ಲ, ‘ಸಂಕಲನಕಾರ’ : ಗ್ರಂಥಗಳಲ್ಲಿ ಕೆಲವು ಸ್ಥಳಗಳಲ್ಲಿ ಸನಾತನದ ಕೆಲವು ಸಾಧಕರಿಗೆ ಲಭಿಸಿದ ಈಶ್ವರೀ ಜ್ಞಾನ, ಇತರ ಸಂತರ ಮಾರ್ಗದರ್ಶಕ ಲೇಖನಗಳನ್ನೂ ಸಮಾವೇಶಗೊಳಿಸಲಾಗಿದೆ. ಆದ್ದರಿಂದ ನಾನು ‘ಲೇಖಕ’ನಾಗಿರದೆ ಈ ಅಂಶಗಳ ಸಂಕಲನ ಮಾಡುವ ಕೇವಲ ‘ಸಂಕಲನಕಾರ’ನಾಗಿರುವುದರಿಂದ ಗ್ರಂಥಗಳಲ್ಲಿ ನನ್ನ ಹೆಸರನ್ನು ‘ಸಂಕಲನಕಾರ’ನೆಂದು ತೋರಿಸಲಾಗಿದೆ.
೭. ಸನಾತನದ ಗ್ರಂಥಸಂಪತ್ತು !
ಏಪ್ರಿಲ್ ೨೦೨೪ ರ ವರೆಗೆ ೩೬೫ ಗ್ರಂಥಗಳು ೧೩ ಭಾಷೆಗಳಲ್ಲಿ ೯೬ ಲಕ್ಷದ ೫೪ ಸಾವಿರ ಪ್ರತಿಗಳು ಮುದ್ರಿತವಾಗಿವೆ. ಇದರಿಂದ ‘ಸಮಾಜದಲ್ಲಿ ಜಿಜ್ಞಾಸುಗಳಿಗೆ ಅಧ್ಯಾತ್ಮ ಮತ್ತು ಶಾಸ್ತ್ರವನ್ನು ತಿಳಿದುಕೊಳ್ಳುವ ಆಸಕ್ತಿ ಎಷ್ಟಿದೆ’, ಎಂಬುದು ಅರಿವಾಗುತ್ತದೆ.
ಸನಾತನ ಪ್ರಕಾಶನಗೊಳಿಸಿದ ಗ್ರಂಥಗಳ ಭಾಷೆ ಮತ್ತು ಸಂಖ್ಯೆ
ಏಪ್ರಿಲ್ ೨೦೨೪ ರ ವರೆಗೆ ಪ್ರಕಟವಾಗಿರುವ ಗ್ರಂಥಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಇದಲ್ಲದೇ ೫ ಸಾವಿರಕ್ಕೂ ಹೆಚ್ಚು ಗ್ರಂಥಗಳಾಗು ವಷ್ಟು ಲೇಖನಗಳನ್ನು ಇಷ್ಟರ ವರೆಗೆ ಸಂಗ್ರಹಿಸಿಡಲಾಗಿದೆ. ಇದರಲ್ಲಿ ‘ಮನುಷ್ಯ, ಸಾಧನೆ, ಕಲೆ, ಸಮಾಜ, ರಾಷ್ಟ್ರ, ವಿಶ್ವ, ಅಧ್ಯಾತ್ಮ, ಕೆಟ್ಟ ಶಕ್ತಿ, ಒಳ್ಳೆಯ ಶಕ್ತಿ, ಸೂಕ್ಷ್ಮ ಜಗತ್ತು, ಧರ್ಮ’ ಇತ್ಯಾದಿಗಳ ಗ್ರಂಥಮಾಲಿಕೆ ಗಳಿವೆ; ಅವುಗಳ ಸಂಕಲನ ಮತ್ತು ಪ್ರಕಾಶನ ಬಾಕಿ ಇದೆ. ಗುರುಗಳ, ಅಂದರೆ ಭಗವಂತನ ಕೃಪೆಯಿಂದ ಗ್ರಂಥನಿರ್ಮಾಣದ ಮತ್ತು ಆ ಮೂಲಕ ಅಧ್ಯಾತ್ಮ ಮತ್ತು ಧರ್ಮ ಪ್ರಸಾರದ ಕಾರ್ಯ ಆಗಿದೆ ಮತ್ತು ಆಗುತ್ತಿದೆ. ಅದಕ್ಕಾಗಿ ನಾನು ಕೃತಜ್ಞತೆ ಸಲ್ಲಿಸುತ್ತೇನೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೫.೩.೨೦೨೪)
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.
*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |