ಭಾರತೀಯ ರಾಯಭಾರಿ ಕಚೇರಿಯಿಂದ ಕಾಂಬೋಡಿಯದ ೩೫೦ ಒತ್ತೆಯಾಳಗಳ ಬಿಡುಗಡೆ

ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ ಚೀನಾದ ದಲ್ಲಾಳಿಗಳು

ನಾಮ್ ಪೆನ್ (ಕಾಂಬೋಡಿಯ) – ಚೀನೀ ದಲ್ಲಾಳಿಗಳು ೩೫೦ ಭಾರತೀಯರನ್ನು ಒತ್ತೆಯಾಳುಗಳನ್ನು ಇಟ್ಟುಕೊಂಡಿರುವವರನ್ನು ಭಾರತೀಯ ರಾಯಭಾರಿ ಕಚೇರಿಯು ಬಿಡುಗಡೆಗೊಳಿಸಿದೆ. ಸಂತ್ರಸ್ತರಿಗೆ ಮೊದಲು ನೌಕರಿಯ ಆಮಿಷ ತೋರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಇವರೆಲ್ಲರನ್ನೂ ಆದಷ್ಟು ಬೇಗನೆ ಭಾರತಕ್ಕೆ ಕರೆತರುವ ಸಿದ್ಧತೆ ನಡೆಯುತ್ತಿದೆ. ಇವರಲ್ಲಿ ೬೦ ಭಾರತೀಯರ ಮೊದಲನೆಯ ತಂಡವು ಭಾರತಕ್ಕೆ ಹಿಂತಿರುಗಿದೆ.

ಕಾಂಬೋಡಿಯಾದಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಕೆಲವು ಸುಳ್ಳು ನೌಕರಿ ನೀಡುವ ದಲ್ಲಾಳಿಗಳಿಂದ ಭಾರತೀಯರನ್ನು ಬಂಧಿಸಿರುವ ಮಾಹಿತಿ ಬಂದಿತ್ತು. ಈ ಭಾರತೀಯರನ್ನು ಮೇ ೨೦ ರಂದು ಜಿನಬೇಯಿ ೪ ಹೆಸರಿನ ಸ್ಥಳದಿಂದ ಅಧಿಕಾರಿಗಳು ಬಿಡುಗಡೆಗೊಳಿಸಿದರು. ಈ ಕಾರ್ಯಾಚರಣೆ ಸಿಹಾನೋಕವಿಲೇ ಯ ಅಧಿಕಾರಿಗಳ ಸಮನ್ವಯದಿಂದ ನಡೆಸಲಾಯಿತು. ಭಾರತೀಯ ರಾಯಭಾರಿ ಕಚೇರಿಯಿಂದ ಇತ್ತೀಚಿಗೆ ಕಾಂಬೋಡಿಯಾಗೆ ನೌಕರಿಗಾಗಿ ಹೋಗುವ ಜನರಿಗಾಗಿ ಒಂದು ಮಾರ್ಗಸೂಚಿ ಪ್ರಸಾರ ಮಾಡಿತ್ತು, ಅದರಲ್ಲಿ ಭಾರತೀಯ ನಾಗರಿಕರಿಗೆ ವಿದೇಶಿ ಸಚಿವಾಲಯದಿಂದ ಮಾನ್ಯತೆ ನೀಡಿರುವ ಅಧಿಕೃತ ಏಜೆಂಟಗಳ ಮಾಧ್ಯಮದಿಂದಲೇ ನೌಕರಿಗಾಗಿ ಪ್ರಯತ್ನಿಸಲು ಸೂಚಿಸಲಾಗಿತ್ತು.