ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಬೈಗುಳ ನೀಡುವ ಸಿಬೈನ ಅಧಿಕಾರಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಒಂದು ಸಲ ತನಿಖಾ ಅಧಿಕಾರಿಯು ನನ್ನ ಬಳಿಗೆ ಬಂದರು ಮತ್ತು ನನಗೆ, ”ಮಿತ್ರ ಭಾವೆ, ನಿನ್ನ ಆ ಮುದುಕ ಗುರು ಡಾ. ಆಠವಲೆ ಇವನು ‘೨೦೨೫ ರಲ್ಲಿ ಹಿಂದೂ ರಾಷ್ಟ್ರವು ಬರುವುದು’, ಎಂದು ಹೇಳುತ್ತಾನೆ. ನಾನು ದೂರದೂರದವರೆಗೂ ನೋಡುತ್ತಿದ್ದೇನೆ ನನಗೆ ಎಲ್ಲಿಯೂ ಹಿಂದೂ ರಾಷ್ಟ್ರ ಕಾಣಿಸುವುದಿಲ್ಲ, ಹೇಗೆ ಬರುವುದು ಮಿತ್ರ ಹಿಂದೂ ರಾಷ್ಟ್ರ ? ಇದೆಲ್ಲವೂ ನಿಮ್ಮೆಲ್ಲರನ್ನು (ಬೈಗುಳು ನೀಡಿದರು) ಮರಳು ಮಾಡುವ ವ್ಯಾಪಾರವಾಗಿದೆ. ವಾಸ್ತವದಲ್ಲಿ ನಿನ್ನ ಆ ಗುರುವೇ (ಬೈಗುಳ ನೀಡಿದರು) ಇದ್ದಾನೆ’’, ಎಂದು ಹೇಳಿದರು.

ಶ್ರೀ. ವಿಕ್ರಮ ಭಾವೆ

ನನ್ನ ಗುರುಗಳ ಬಗ್ಗೆ ಈ ರೀತಿಯ ಉದ್ಗಾರ ತೆಗೆದ ನಂತರ ನನಗೆ ಬಹಳ ಸಿಟ್ಟು ಬಂದಿತು. ‘ನಾನು ಸಿಟ್ಟಿನ ಭರದಲ್ಲಿ ಏನಾದರೂ ತಪ್ಪು ಮಾಡಬೇಕು’, ಎಂಬುದೇ ಅವರ ಉದ್ದೇಶವಾಗಿತ್ತು. ಆದುದರಿಂದ ನಾನು ಸಿಟ್ಟನ್ನು ತಡೆಹಿಡಿದು ಅವರಿಗೆ, ”ಈ ಪಾಪದ ಫಲ ನಿಮಗೆ ಇದೇ ಜನ್ಮದಲ್ಲಿ ಮತ್ತು ಅದೂ ಮುಂಬರುವ ಕೆಲವೇ ವರ್ಷಗಳಲ್ಲಿಯೇ ಸಿಗುವುದು. ಆದರೆ ಆ ಸಮಯದಲ್ಲಿ ಪರಿಸ್ಥಿತಿ ಹೇಗಿರುತ್ತದೆಯೆಂದರೆ, ನಿಮಗೆ ಪಶ್ಚಾತ್ತಾಪ ಪಡಲೂ ಸಾಧ್ಯವಾಗುವುದಿಲ್ಲ. ನೀವು ಹಿಂದೂವೋ ಅಥವಾ ಅಲ್ಲವೋ ಎಂಬ ಸಂದೇಹ ನಿಮ್ಮ ಈ ಮಾತುಗಳಿಂದ ವ್ಯಕ್ತವಾಗುತ್ತಿದೆ’’, ಎಂದು ಹೇಳಿದೆನು. ಇದನ್ನು ಕೇಳಿದ ನಂತರ ಸುಭಾಷ ಸಿಂಗ್‌ ಇವರು ಸಿಟ್ಟಿಗೆದ್ದು ಹೊರಟು ಹೋದರು.