ಬೆಳಗಾವಿ: ಲವ್ ಜಿಹಾದ್ ಪ್ರಬೋಧನೆ ಹೋರ್ಡಿಂಗ್ ಹಾಕಿದ್ದಕ್ಕೆ ೬ ಹಿಂದೂ ಯುವಕರ ಬಂಧನ !

ಲವ್ ಜಿಹಾದ್ ಪ್ರಬೋಧನೆಗಾಗಿ ಹೋರ್ಡಿಂಗ್

(ಹೋರ್ಡಿಂಗ್ ಎಂದರೆ ದೊಡ್ಡ ಫಲಕ)

ಬೆಳಗಾವಿ – ಬಾಪಟಗಲ್ಲಿ ಪ್ರದೇಶದಲ್ಲಿ ಲವ್ ಜಿಹಾದ್ ಪ್ರಬೋಧನೆ ಮಾಡುವ ಹೋರ್ಡಿಂಗ್ ಹಾಕಿದ್ದಕ್ಕೆ ಖಡೆ ಬಜಾರ್ ಪೊಲೀಸ್ ಠಾಣೆಯಲ್ಲಿ ೯ ಹಿಂದೂ ಯುವಕರ ವಿರುದ್ಧ ದೂರು ದಾಖಲಿಸಲಾಗಿದ್ದು ೬ ಮಂದಿ ಯುವಕರನ್ನು ಬಂಧಿಸಲಾಗಿದೆ. ಖಡೆ ಬಜಾರ್ ಪೊಲೀಸರು ಯುವಕರ ಮೇಲೆ ೨೯೫ ( ಅ), ೫೦೫, ೧೪೩, ೧೪೮ ಸಹ ಕಲಂ ೧೪೯ ಅಂತರ್ಗತ ದೂರು ದಾಖಲಿಸಿದ್ದಾರೆ. ಇದರಲ್ಲಿ ನಾಗೇಶ್ ಮುರಕುಟೆ ಅವರಿಗೆ ನ್ಯಾಯಾಲಯವು ಜಾಮೀನು ನೀಡಿದೆ. ಚೇತನ ಕಿಲ್ಲೆದಾರ, ಶುಭಮ್ ಕಿಲ್ಲೆದಾರ, ಲೋಕನಾಥ್ ಹಾಗೂ ಲೋಕೇಶ್ ರಾಜಪುತ, ಸತೀಶ್ ಗವಾಣೆ, ಕಾರ್ತಿಕ್ ಗವಾಣೆ, ವಿನಯ್ ಮೂರುಕೂಟೆ, ಅಪ್ಪಣ್ಣ ರಾಯದೆ ಮತ್ತು ಪ್ರಶಾಂತ ಚೌಹಾಣ್ ಯುವಕರಾಗಿದ್ದು ಇವರೆಲ್ಲರೂ ಬಾಪಟಗಲ್ಲಿಯ ನಿವಾಸಿಗಳಾಗಿದ್ದಾರೆ.

೧. ಮೇ ೧೨ ರಂದು ರಾತ್ರಿ ಬಾಪಟಗಲ್ಲಿಯಲ್ಲಿ ಲವ್ ಜಿಹಾದ್ ಬಗ್ಗೆ ಪ್ರಬೋಧನೆ ಮಾಡುವ ೨ ಹೋರ್ಡಿಂಗ್ ಗಳನ್ನು ಹಾಕಲಾಗಿತ್ತು, ಅದರ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದವು.

೨. ಇದಕ್ಕೆ ಕೆಲವು ಮತಾಂಧರು ಆಕ್ಷೇಪ ವ್ಯಕ್ತಪಡಿಸಿದ್ದರು. ಪೊಲೀಸರು ಮೇ ೧೩ ರಂದು ೯ ಜನರ ವಿರುದ್ಧ ದೂರ ದಾಖಲಿಸಿ ೬ ಜನರನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

  • ನಾವು ಲವ್ ಜಿಹಾದ್ ವಿರುದ್ಧ ಏನೂ ಮಾಡುವುದಿಲ್ಲ ಮತ್ತು ನಿಮಗೂ ಮಾಡಲು ಬಿಡುವುದಿಲ್ಲ, ಎಂಬ ಪ್ರವೃತ್ತಿಯ ಪೊಲೀಸರು ! ಇಂತಹ ಪೊಲೀಸ್ ಇಲಾಖೆಯವರು ಎಂದಾದರೂ ಸಮಾಜದಲ್ಲಿ ಅಪರಾಧವನ್ನು ಕೊನೆಗೊಳಿಸಲು ಸಾಧ್ಯವೇ?
  • ಇತ್ತೀಚಿಗೆ ಕರ್ನಾಟಕದಲ್ಲಿ ಸ್ನೇಹ ಹಿರೇಮಠ ಎಂಬ ಯುವತಿಯ ಲವ್ ಜಿಹಾದದಿಂದ ಹತ್ಯೆಯಾಯಿತು. ಇದು ವಾಸ್ತವವಾಗಿರುವಾಗ ಈ ಬಗ್ಗೆ ಕೇವಲ ಪ್ರಬೋಧನೆ ಮಾಡುವ ಹೋರ್ಡಿಂಗ್ ಹಾಕಿದ್ದಕ್ಕೆ ಹಿಂದೂ ಯುವಕರ ವಿರುದ್ಧ ದೂರು ದಾಖಲಿಸಿ ಬಂಧಿಸುವ ಪೊಲೀಸರು ಮತಾಂಧರನ್ನು ಓಲೈಸುತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಹಿಂದುಗಳ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ, ಇದು ವಿವಿಧ ಘಟನೆಗಳಿಂದ ಎದ್ದು ಕಾಣುತ್ತಿದೆ.