Slovakia PM Shot : ಯುರೋಪ್‌ನ ಸ್ಲೋವಾಕಿಯಾದ ದೇಶದ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ಗುಂಡಿನ ದಾಳಿ

ಆರೋಗ್ಯ ಚಿಂತಾಜನಕ

ಬ್ರಾಟಿಸ್ಲಾವಾ (ಸ್ಲೋವಾಕಿಯಾ) – 71 ವರ್ಷದ ವೃದ್ದ ನಾಗರಿಕನೊಬ್ಬನು ಮೇ 15 ರಂದು ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ಐದು ಗುಂಡುಗಳನ್ನು ಹಾರಿಸಿದ್ದಾನೆ. ಇದರಲ್ಲಿ ಫಿಕೋ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಮೂರೂವರೆ ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಸಾರ್ವಜನಿಕರನ್ನು ಭೇಟಿಯಾಗುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ. ದಾಳಿಕೋರನನ್ನು ಪೊಲೀಸರು ಬಂಧಿಸಿದ್ದರೂ, ದಾಳಿಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ.

1. ರಾಬರ್ಟ್ ಫಿಕೊ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಾಲ್ಕನೇ ಬಾರಿಗೆ ಸ್ಲೋವಾಕಿಯಾದ ಪ್ರಧಾನಿಯಾದರು.  ರಾಬರ್ಟ್ ಫಿಕೊ ಸ್ಲೋವಾಕಿಯಾದ ಅತ್ಯಂತ ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿದ್ದಾರೆ. ರಾಬರ್ಟ್ ಫಿಕೊ 2018 ರಲ್ಲಿ ಪ್ರಮುಖ ಭ್ರಷ್ಟಾಚಾರ ಹಗರಣ ಮತ್ತು ಸರ್ಕಾರದ ವಿರೋಧಿ ಭಾವನೆ ಭುಗಿಲೆದ್ದ ನಂತರ ರಾಜೀನಾಮೆ ನೀಡಬೇಕಾಗಿತ್ತು; ಆದರೆ ನಂತರ ಮತ್ತೆ ಪ್ರಧಾನಿಯಾದರು.

2. ಪ್ರಧಾನಿ ನರೇಂದ್ರ ಮೋದಿ ಅವರು ಈ ದಾಳಿಯನ್ನು ಖಂಡಿಸಿದ್ದು, ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತ ಸ್ಲೋವಾಕಿಯಾ ಬೆಂಬಲಕ್ಕೆ ನಿಂತಿದೆ ಎಂದು ಹೇಳಿದ್ದಾರೆ. ಇದರೊಂದಿಗೆ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಈ ದಾಳಿಯನ್ನು ಖಂಡಿಸಿದ್ದಾರೆ.