ಭಾರತ-ಇರಾನ್ ನಡುವಿನ ಚಾಬಹಾರ ಬಂದರ ಒಪ್ಪಂದಕ್ಕೆ ಅಮೇರಿಕಾದ ಆಕ್ಷೇಪ !
ವಾಷಿಂಗ್ಟನ್ (ಅಮೇರಿಕಾ) – ಭಾರತ ಮತ್ತು ಇರಾನ್ ನಡುವೆ ನಡೆದಿರುವ ಚಾಬಹಾರ ಬಂದರ ಒಪ್ಪಂದಕ್ಕೆ ಅಮೇರಿಕಾ ಆಕ್ಷೇಪ ವ್ಯಕ್ತಪಡಿಸಿದೆ. ಇರಾನ್ ಜೊತೆಗಿನ ವ್ಯಾಪಾರದಿಂದ ಭಾರತಕ್ಕೆ ನಿರ್ಬಂಧದ ಅಪಾಯವಿದೆ ಎಂದು ಅಮೇರಿಕಾದ ವಿದೇಶಾಂಗ ಇಲಾಖೆಯ ಉಪವಕ್ತಾರರಾದ ವೇದಾಂತ ಪಟೇಲ್ ಅವರು ಹೇಳಿದರು,
ಪಟೇಲ್ ಮಾತು ಮುಂದುವರೆಸುತ್ತಾ, ವಿದೇಶಾಂಗ ನೀತಿ ಮತ್ತು ಇತರ ದೇಶಗಳ ಜೊತೆಗಿನ ಸಂಬಂಧದ ಸಂದರ್ಭದಲ್ಲಿ ಭಾರತ ಅದರ ನಿರ್ಣಯ ತೆಗೆದುಕೊಳ್ಳಬಹುದು ; ಆದರೆ ಇರಾನ್ ಯಾವ ದೇಶಗಳ ಜೊತೆಗೆ ವ್ಯಾಪಾರ ಮಾಡುತ್ತಿರುವುದೋ ಅದು ಯಾರೇ ಆಗಲಿ ಆ ದೇಶದ ಮೇಲೆ ನಿರ್ಬಂಧ ಹೇರುವ ಅಪಾಯವಿದೆ.
ಅಮೇರಿಕಾದಿಂದ ಇರಾನಿನ ಮೇಲೆ ಸುಮಾರು ಎಲ್ಲಾ ವ್ಯಾಪಾರಿ ನಿರ್ಬಂಧ ಹೇರಲಾಗಿದೆ. ಅದರ ಜೊತೆಗೆ ಅಮೇರಿಕಾದ ಮಿತ್ರ ದೇಶಗಳು ಕೂಡ ಇರಾನ್ ಗೆ ಸಹಾಯ ಮಾಡುವುದು ಮತ್ತು ಶಸ್ತ್ರಾಸ್ತ್ರಗಳ ಮಾರಾಟವನ್ನು ನಿಲ್ಲಿಸಿವೆ. ಇರಾನಿನ ಪರಮಾಣು ಯೋಜನೆ, ಮಾನವಾಧಿಕಾರದ ಉಲ್ಲಂಘನೆ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ಈ ಕಾರಣಗಳಿಂದಾಗಿ ಅಮೇರಿಕ ಈ ನಿರ್ಬಂಧ ಹೇರಿದೆ.
ಭಾರತ ಮತ್ತು ಇರಾನ್ ನಡುವಿನ ಚಾಬಹಾರ ಬಂದರ ಒಪ್ಪಂದ !
ಭಾರತ ಮತ್ತು ಇರಾನ್ ೨೦೧೮ ರಲ್ಲಿ ಚಾಬಹಾರ ಬಂದರ ಕಟ್ಟುವುದಕ್ಕಾಗಿ ಒಪ್ಪಂದ ಮಾಡಿಕೊಂಡಿತ್ತು. ಭಾರತಕ್ಕೆ ಮೇ ೧೩ ರಂದು ಇರಾನಿನ ಜಾಬಹಾರ ನಲ್ಲಿನ ಶಾಯಿದ ಬೆಹಷ್ಟಿ ಬಂದರ ೧೦ ವರ್ಷಕ್ಕಾಗಿ ಬಾಡಿಗೆಗೆ ಪಡೆಯುವ ಒಪ್ಪಂದ ಆಗಿತ್ತು. ಈ ಒಪ್ಪಂದಕ್ಕೆ ಸಹಿ ಮಾಡುವುದಕ್ಕಾಗಿ ಕೇಂದ್ರ ಸಚಿವ ಸರ್ವಾನಂದ ಸೋನೋವಾಲ್ ಅವರು ಇರಾನ್ ಗೆ ತೆರಳಿದ್ದರು. ಭಾರತ ಮತ್ತು ಇರಾನ್ ಎರಡು ದಶಕಗಳಿಂದ ಈ ಬಂದರದ ಕಾರ್ಯ ನಡೆಸುತ್ತಿವೆ. ಈಗ ಬಂದರದ ಸಂಪೂರ್ಣ ವ್ಯವಸ್ಥೆ ಭಾರತದ ಬಳಿ ಇರಲಿದೆ.
ಒಪ್ಪಂದದಿಂದ ಭಾರತಕ್ಕಾಗುವ ಲಾಭ !
೧. ಚಾಬಹಾರ ಬಂದರದ ಮಾಧ್ಯಮದಿಂದ ಭಾರತವು ಅಪಘಾನಿಸ್ತಾನ, ಹಾಗೂ ಮಧ್ಯ ಏಷ್ಯಾ ದೇಶ ಮತ್ತು ರಷ್ಯಾಗೆ ನೇರವಾಗಿ ತಲುಪಬಹುದು.
೨. ಈ ಹಿಂದೆ ಭಾರತವು ಪಾಕಿಸ್ತಾನದ ಗ್ವಾದರ್ ಬಂದರದ ಮೂಲಕ ವ್ಯಾಪಾರ ಮಾಡುತ್ತಿತ್ತು; ಆದರೆ ಪಾಕಿಸ್ತಾನ ಜೊತೆಗಿನ ಸಂಬಂಧ ಮುಗಿದಿರುವುದರಿಂದ ಭಾರತವು ಈ ಭಾಗದಲ್ಲಿ ಪರ್ಯಾಯ ಮಾರ್ಗ ಹುಡುಕುತ್ತಿತ್ತು. ಈಗ ಭಾರತದ ಚಾಬಹಾರ ಒಪ್ಪಂದದ ಮೂಲಕ ಈ ಅಡಚಣೆಗೆ ಪರಿಹಾರ ಸಿಕ್ಕಿದೆ.
೩ . ಭಾರತೀಯ ಕಂಪನಿ ಇಂಡಿಯಾ ಪೋರ್ಟ್ ಗ್ಲೋಬಲ್ ಲಿಮಿಟೆಡ್ ಚಾಬಹಾರ ಬಂದರದ ನಿರ್ಮಾಣಕ್ಕಾಗಿ ೧೨ ಕೋಟಿ ಡಾಲರ್ (೧ ಸಾವಿರ ಕೋಟಿ ರೂಪಾಯಿ) ಬಂಡವಾಳ ಹೂಡಿದ್ದು ಅದಕ್ಕೆ ೨೫ ಕೋಟಿ ಡಾಲರ್ (೨ ಸಾವಿರದ ೮೭ ಕೋಟಿ ರೂಪಾಯಿ) ಆರ್ಥಿಕ ಸಹಾಯ ದೊರೆಯಲಿದೆ. ಹಾಗಾಗಿ ಇದು ಸುಮಾರು ೩೭ ಕೋಟಿ ಡಾಲರ್ ಮೌಲ್ಯದ ಒಪ್ಪಂದವಾಗಿದೆ.
೪. ಭಾರತವು ಕಳೆದ ಕೆಲವು ವರ್ಷಗಳಿಂದ ಅಂತರಾಷ್ಟ್ರೀಯ ವ್ಯಾಪಾರ ಹೆಚ್ಚಿಸುವುದರ ಮೇಲೆ ಒತ್ತು ನೀಡುತ್ತಿದ್ದು ಚಾಬಹಾರ ಬಂದರ ಮಹತ್ವದ ಪಾತ್ರನಿರ್ವಹಿಸಲಿದೆ. ಈ ಬಂದರಿನ ಮಾಧ್ಯಮದಿಂದ ಭಾರತವು ಇರಾನ್, ಅಫ್ಘಾನಿಸ್ತಾನ್, ಆರ್ಮೇನಿಯ, ಅಝರಬೈಜಾನ್ , ರಷ್ಯಾ ಮಧ್ಯ ಏಶಿಯ ಮತ್ತು ಯುರೋಪ ದೇಶಗಳ ಜೊತೆಗೆ ನೇರ ವ್ಯಾಪಾರ ಮಾಡಲು ಸಾಧ್ಯವಾಗುವುದು.
೫. ಈ ದೇಶಗಳ ನೈಸರ್ಗಿಕ ವಾಯು ಮತ್ತು ತೈಲ ಕೂಡ ಈ ಬಂದರಿನ ಮೂಲಕ ಇನ್ನು ಮುಂದೆ ಆಮದು ಮಾಡಿಕೊಳ್ಳಬಹುದು.
೬ . ಭೂ ರಾಜಕೀಯ ದೃಷ್ಟಿಯಿಂದ ಕೂಡ ಈ ಬಂದರಿನ ಅಭಿವೃದ್ಧಿಯಿಂದ ಭಾರತವು ಅರಬ್ಬೀ ಸಮುದ್ರದಲ್ಲಿ ಚೀನಾದ ಚಟುವಟಿಕೆಗಳ ಮೇಲೆ ಗಮನವಿಡಲು ಸಾಧ್ಯವಾಗುವುದು. ಇನ್ನೊಂದೆಡೆ ಚೀನಾ ಪಾಕಿಸ್ತಾನದಲ್ಲಿನ ಗ್ವಾದರ ಬಂದರಿನ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತಿದೆ . ಭಾರತದ ಚಾಬಹಾರ ಬಂದರ್ ಮೇಲಿನ ಹಾಜರಿಯಿಂದಾಗಿ ಗ್ವಾದರ ಬಂದರದಲ್ಲಿನ ಚೀನಾ ಮತ್ತು ಪಾಕಿಸ್ತಾನದ ಚಟುವಟಿಕೆಗಳನ್ನು ತಿಳಿಯಲು ಸಹಾಯವಾಗುವುದು. ಎರಡು ಬಂದರದಲ್ಲಿನ ಅಂತರ ಕೇವಲ ೭೦ ಕಿಲೋಮೀಟರ್ ಆಗಿದೆ.
೭ . ಕಳೆದ ವರ್ಷ ಅಪಘಾನಿಸ್ತಾನಕ್ಕೆ ೨೦ ಸಾವಿರ ಟನ್ ಗೋಧಿ ಸಹಾಯವೆಂದು ಕಳುಹಿಸಲು ಚಾಬಹಾರ ಬಂದರಿನ ಉಪಯೋಗವನ್ನು ಭಾರತ ಮಾಡಿಕೊಂಡಿತ್ತು. ೨೦೧೯ ರಲ್ಲಿ ಇರಾನ್ ಗೆ ಕ್ರಿಮಿನಾಶಕದ ಪೂರೈಕೆ ಮಾಡುವುದಕ್ಕಾಗಿ ಕೂಡ ಭಾರತ ಈ ಬಂದರಿನ ಉಪಯೋಗ ಮಾಡಿಕೊಂಡಿತ್ತು.
ಸಂಪಾದಕೀಯ ನಿಲುವುಇದು ಅಮೇರಿಕಾದ ಗುಂಡಾಗಿರಿ ಆಗಿದೆ. ಮೊದಲು ರಷ್ಯಾ ಈಗ ಇರಾನ್ ಜೊತೆಗೆ ವ್ಯಾಪಾರ ಬೆಳೆಸುವುದು, ಇದು ಭಾರತದ ವೈಯಕ್ತಿಕ ವಿಚಾರವಾಗಿದೆ. ಇದರಲ್ಲಿ ಅಮೆರಿಕಕ್ಕೆ ಮೂಗು ತೂರಿಸುವ ಯಾವುದೇ ಅಧಿಕಾರವಿಲ್ಲ ಜಗತ್ತಿನಲ್ಲಿ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಭಾರತದ ಅರ್ಥಿಕ ವ್ಯವಸ್ಥೆಯನ್ನು ನೋಡಿದರೆ, ಅಮೇರಿಕಾ ಭಾರತದ ಮೇಲೆ ನಿರ್ಬಂಧ ಹೇರಲು ಸಾಧ್ಯವಿಲ್ಲ, ಹಾಗೆ ಮಾಡಿದರೆ ಅದು ಅಮೇರಿಕಾಗೇ ನಷ್ಟತರುವುದು. ಭಾರವೂ ಕೂಡ ಇನ್ನು ಮುಂದೆ ಶತ್ರು ದೇಶ ಪಾಕಿಸ್ತಾನದ ಜೊತೆಗೆ ಸಂಬಂಧ ಬೆಳೆಸುವ ದೇಶಗಳ ಮೇಲೆ ನಿಷೇಧ ಘೋಷಿಸಬೇಕು. ಅಮೇರಿಕಾ ಸ್ವಹಿತ ನೋಡಿ ಭಾರತಕ್ಕೆ ಬೆದರಿಕೆ ನೀಡಬಹುದು ಎಂದಾದರೆ, ಆಗ ಭಾರತವೂ ಕೂಡ ಅಮೇರಿಕಕ್ಕೆ ಅಲ್ಲಿಯ ಖಲಿಸ್ತಾನಿವಾದಿಗಳನ್ನು ಮುಗಿಸುವ ಅಥವಾ ಅವರನ್ನು ಭಾರತಕ್ಕೆ ಒಪ್ಪಿಸಲು ಆಗ್ರಹಿಸಬೇಕು. ಅಲ್ಲಿಯ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತೆಯ ಭರವಸೆ ನೀಡಬೇಕು . ಇದರ ಜೊತೆಗೆ ಅಮೇರಿಕಾದ ನೆರೆಯ ರಾಷ್ಟ್ರವಾದ ಕೆನಡಾದಿಂದ ಕೂಡ ಇಂತಹ ಕೃತಿಗಳನ್ನು ಮಾಡಿಸಿಕೊಳ್ಳಬೇಕು ಇಲ್ಲವಾದರೆ ಕೆನಡಾದ ಜೊತೆಗಿನ ಎಲ್ಲಾ ವ್ಯಾಪಾರಿ ಒಪ್ಪಂದಗಳು ಮುರಿಯಲಾಗುವುದು. ಭಾರತದ ವಿದೇಶಾಂಗ ಸಚಿವಾಲಯವು ಇಂತಹ ದೃಢವಾದ ನಿಲುವು ಮಂಡಿಸಿದರೆ ಕುತಂತ್ರಿ ಅಮೇರಿಕ ದಾರಿಗೆ ಬರುವುದು ಇದೇ ಸತ್ಯ ! |