ಮುಜ಼ಫ್ಫರಾಬಾದ್ ವಿಧಾನಸಭೆಗೆ ಮುತ್ತಿಗೆ ಹಾಕಲಿರುವ ಆಂದೋಲನಕಾರರು !
ಮುಜ಼ಫ್ಫರಾಬಾದ್ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) – ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜಮ್ಮು-ಕಾಶ್ಮೀರ ಜಂಟಿ ಆವಾಮಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಲಕ್ಷಾಂತರ ಆಂದೋಲನಕಾರರು ಈ ಆಂದೋಲನವನ್ನು ರಾಜಧಾನಿ ಮುಜ಼ಫ್ಫರಾಬಾದ್ ಕಡೆಗೆ ಕರೆದೊಯ್ಯಲು ಆರಂಭಿಸಿದ್ದಾರೆ. ಈ ಆಂದೋಲನದಲ್ಲಿನ ಆಂದೋಲನಾಕಾರರು ಮುಜ಼ಫ್ಫರಾಬಾದ್ ಜಿಲ್ಲೆಯನ್ನು ಪ್ರವೇಶಿಸಿದ್ದಾರೆ. ಆಂದೋಲನಕಾರರು ಮುಜ಼ಫ್ಫರಾಬಾದ್ ನಗರದಲ್ಲಿ ಶಾಸಕಾಂಗ ಸಭೆಗೆ ಮುತ್ತಿಗೆ ಹಾಕುವವರಿದ್ದಾರೆ. ಈ ಆಂದೋಲನದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೇನೆಯನ್ನು ನಿಯೋಜಿಸಲಾಗಿದೆ. ಇದರಿಂದ ಆಂದೋಲನಕಾರರು ಆಕ್ರೋಶಗೊಂಡಿದ್ದಾರೆ ಮತ್ತು ಹಲವೆಡೆ ಸೈನಿಕರನ್ನು ಥಳಿಸಿದ್ದಾರೆ. ಇಡೀ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 5 ದಿನಗಳಿಂದ ಇಂಟರ್ನೆಟ್ ಮತ್ತು ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಇಲ್ಲಿಯ ನಾಗರಿಕರು ನಾವು ಸರಕಾರದ ಭ್ರಷ್ಟ ಆಡಳಿತ ವ್ಯವಸ್ಥೆಯಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ ನಮಗೆ ಸ್ವಾತಂತ್ರ್ಯ ಬೇಕು, ನಮ್ಮ ಆಂದೋಲನ ಶಾಂತಿಯುತವಾಗಿದೆ, ನಾವು ಯಾವುದೇ ಹಾನಿ ಮಾಡಲು ಬಯಸುವುದಿಲ್ಲ. ಒಂದೇ ಒಂದು ಬೇಡಿಕೆ ಈಡೇರದೇ ಇದ್ದಲ್ಲಿ ನಾವು ಹಿಂದೆ ಸರಿಯುವುದಿಲ್ಲ. ನಮ್ಮ ಎಲ್ಲಾ ಬೇಡಿಕೆಗಳನ್ನು ಪೂರೈಸಿದ ನಂತರವೇ ನಾವು ಸಾಯುತ್ತೇವೆ ಎಂದು ಹೇಳುತ್ತಿದ್ದಾರೆ.
ಈ ಆಂದೋಲನದಿಂದಾಗಿ ಪಾಕಿಸ್ತಾನದ ಪ್ರಧಾನಮಂತ್ರಿ ಶಹಬಾಜ಼್ ಷರೀಫ್ ಸಂಪುಟ ಸಭೆ ಕರೆದಿದ್ದಾರೆ. ಮತ್ತೊಂದೆಡೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸರಕಾರವು ಪ್ರತಿಭಟನೆಗಾರರ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ.