೧೩ ವಿಮಾನ ನಿಲ್ದಾಣಗಳನ್ನು ಬಾಂಬ್ ಸ್ಫೋಟದಿಂದ ಧ್ವಂಸಗೊಳಿಸುವ ಸುಳ್ಳು ಬೆದರಿಕೆ !

ಕೆಲವು ದಿನಗಳ ಹಿಂದೆ ದೆಹಲಿಯಲ್ಲಿನ ೧೦೦ ಶಾಲೆಗಳು, ಹಾಗೂ ಕರ್ಣಾವತಿಯಲ್ಲಿನ ೭ ಶಾಲೆಗಳಿಗೂ ಕೂಡ ಭಯೋತ್ಪಾದಕ ದಾಳಿಯ ಬೆದರಿಕೆ ಬಂದಿತ್ತು!

ನವದೆಹಲಿ – ಕೆಲ ದಿನಗಳ ಹಿಂದಿನಿಂದ ಸುಳ್ಳು ಬೆದರಿಕೆ ನೀಡುವ ಘಟನೆಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಈ ಹಿಂದೆ ದೆಹಲಿಯಲ್ಲಿನ ೧೦೦ ಶಾಲೆಗಳಿಗೆ, ಹಾಗೂ ಕರ್ಣಾವತಿಯ ೭ ಶಾಲೆಗಳಿಗೆ ಬಾಂಬ್ ಸ್ಫೋಟದಿಂದ ಧ್ವಂಸಗೊಳಿಸುವ ಬೆದರಿಕೆ ನೀಡಿರುವ ಇ-ಮೇಲ್ ದೊರೆತಿದ್ದವು.
ಈಗ ದೇಶದಲ್ಲಿನ ೧೩ ವಿಮಾನ ನಿಲ್ದಾಣಗಳನ್ನು ಧ್ವಂಸಗೊಳಿಸುವ ಬೆದರಿಕೆ ಬಂದಿದೆ. ಕೇಂದ್ರ ಔದ್ಯೋಗಿಕ ರಕ್ಷಣಾ ತಂಡಕ್ಕೆ ಮೇ ೧೨ ರಂದು ಈ ವಿಷಯದ ಬೆದರಿಕೆಯ ಇ-ಮೇಲ್ ದೊರೆತಿದ್ದು ಇದರ ತುರ್ತು ತನಿಖೆ ನಡೆಸಲಾಯಿತು. ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಲಕ್ಷ್ಮಣಪುರಿಯ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹಾಗೂ ಜಮ್ಮು , ಜಯಪುರ, ಭೋಪಾಲ್, ಹಾಗೂ ಪಾಟಲಿಪುತ್ರ, ವಿಮಾನ ನಿಲ್ದಾಣಗಳಲ್ಲಿ ಬಾಂಬ್ ಸ್ಫೋಟದ ಭಯ ಹುಟ್ಟಿದೆ. ಈ ಬೆದರಿಕೆ ಸುಳ್ಳಾಗಿದ್ದು ಮತ್ತು ಇ-ಮೇಲ್ ಕಳಿಸಿರುವವನನ್ನು ಹುಡುಕುವುದಕ್ಕಾಗಿ ಮುಂದಿನ ತನಿಖೆ ನಡೆಸಲಾಗುತ್ತಿದೆ. ಈ ಬೆದರಿಕೆ ಬಂದ ಬಳಿಕ ಲಕ್ಷ್ಮಣಪುರಿ ವಿಮಾನ ನಿಲ್ದಾಣದ ರಕ್ಷಣಾ ತಂಡ ಸಂಪೂರ್ಣ ವಿಮಾನ ನಿಲ್ದಾಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ ; ಆದರೆ ಬಾಂಬ್ ಬೆದರಿಕೆ ಮೌಲ್ಯಾಂಕನ ಸಮಿತಿಯು ಇದು ಸುಳ್ಳು ಬೆದರಿಕೆಯಾಗಿದೆ ಎಂದು ಹೇಳಿದೆ. ಇತರ ವಿಮಾನ ನಿಲ್ದಾಣಗಳಲ್ಲಿನ ಬೆದರಿಕೆಗಳು ಕೂಡ ಸುಳ್ಳಾಗಿರುವುದು ಕಂಡು ಬಂದಿದೆ ಎಂದು ಕೇಂದ್ರ ಆದ್ಯೋಗಿಕ ಸುರಕ್ಷಾ ತಂಡ ತಿಳಿಸಿದೆ.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದಕರಿಂದ ನರಿಯ ಕಥೆಯ ಹಾಗೆ ಮೊದಲು ಸುಳ್ಳು ಬೆದರಿಕೆಗಳನ್ನು ನೀಡಲಾಗುತ್ತಿದೆಯೇ? ಎಂಬ ಅನುಮಾನ ಬರುತ್ತಿದೆ.
ಆದ್ದರಿಂದ ನಾಳೆ ನಿಜವಾಗಿಯೂ ದಾಳಿ ನಡೆಸುವ ಯೋಜನೆ ಇದ್ದರೆ ಭಯೋತ್ಪಾದಕರನ್ನು ಬಂಧಿಸುವದಕ್ಕಾಗಿ ರಕ್ಷಣಾ ವ್ಯವಸ್ಥೆಯು ಯಾವುದೇ ನಿರ್ಲಕ್ಷ್ಯ ಮಾಡಬಾರದು !