ಕೇರಳ: ದೇವಸ್ಥಾನದಲ್ಲಿ ಆಲಿಂಡರ್ (ಕಣಿಗಲು) ಹೂವುಗಳ ಬಳಕೆಯ ನಿಷೇಧ

ಹೂವುಗಳಿಂದ ವಿಷಬಾಧೆ ಭೀತಿ; ನಿಷೇಧ

ತಿರುವನಂತಪುರಂ (ಕೇರಳ) – ಕೇರಳದ ತ್ರಿವೇಂದ್ರ ದೇವಸ್ಥಾನ ಟ್ರಸ್ಟ್ (ಟಿಡಿಬಿ ) ಮತ್ತು ಮಲಬಾರ್ ದೇವಸ್ಥಾನದ ಆಡಳಿತ ಮಂಡಳಿಯು ದೇವಸ್ಥಾನದ ಪ್ರಸಾದದಲ್ಲಿ ಆಲಿಂಡರ್ ಹೂವುಗಳ ಬಳಕೆ ನಿಲ್ಲಿಸಲು ಆದೇಶ ನೀಡಿದ್ದಾರೆ. ಈ ಹೂವುಗಳ ವಿಷಾಕಾರಿ ಪರಿಣಾಮವನ್ನು ಅರಿತು ಈ ಮಹತ್ವಪೂರ್ಣ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಹೂವುಗಳಿಂದ ಮನುಷ್ಯ ಮತ್ತು ಪ್ರಾಣಿಗಳಿಗೆ ಅಪಾಯ ಆಗಬಹುದೆಂದು ಟ್ರಸ್ಟ್ ಹೇಳಿದೆ.

೧. ತ್ರಿವೇಂದ್ರ ದೇವಸ್ವಂ ಟ್ರಸ್ಟಿನ ಅಧ್ಯಕ್ಷ ಪಿ .ಎಸ್. ಪ್ರಶಾಂತ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ದೇವರಿಗೆ ಅರ್ಪಿಸುವ ವಸ್ತು ಮತ್ತು ದೇವಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ಆಲಿಂಡರ್ ಹೂವುಗಳ ಬಳಕೆ ಸಂಪೂರ್ಣವಾಗಿ ನಿಲ್ಲಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಅದರ ಬದಲು ತುಳಸಿ, ಕಿಸುಕಾರೆ (ಇಕ್ಸೋರ), ಚಮೇಲಿ ಮತ್ತು ಗುಲಾಬಿ ಇಂತಹ ಇತರ ಹೂವುಗಳು ಉಪಯೋಗಿಸಲಾಗುವುದು ಎಂದು ತಿಳಿಸಿದರು.

೨. ಅಲಾಪ್ಪುಝ ಮತ್ತು ಪಥನಮಥಿಟ್ಟದಲ್ಲಿ ನಡೆದಿರುವ ಅನೇಕ ಘಟನೆಗಳ ನಂತರ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಅಲಾಪ್ಪುಝದಲ್ಲಿನ ಓರ್ವ ಮಹಿಳೆ ಆಲಿಂಡರ ಹೂವು ಮತ್ತು ಅದರ ಎಲೆ ತಿಂದು ಸಾವನ್ನಪ್ಪಿದ್ದರು. ಪಥನಮಥಿಟ್ಟದಲ್ಲಿ ಆಲಿಂಡರ ಎಲೆ ತಿಂದು ಹಸು ಮತ್ತು ಕರು ಸಾವನ್ನಪ್ಪಿರುವ ಸಮಾಚಾರ ಕೂಡ ಬೆಳಕಿಗೆ ಬಂದಿದ್ದವು.