ಪರಿಪಕ್ವತೆ ಮತ್ತು ನೇತೃತ್ವಗುಣವಿರುವ ಸನಾತನದ ಮೊದಲನೇ ಬಾಲಕಸಂತ ಪೂ. ಭಾರ್ಗವರಾಮ ಪ್ರಭು !

ವೈಶಾಖ ಶುಕ್ಲ ದಶಮಿ (೧೮.೫.೨೦೨೪) ಯಂದು ಸನಾತನದ ಮೊದಲೇ ಬಾಲಕಸಂತರಾದ ಪೂ. ಭಾರ್ಗವರಾಮ ಪ್ರಭು ಇವರ ೭ ನೇ ಹುಟ್ಟುಹಬ್ಬವಿದೆ

ಪೂ. ಭಾರ್ಗವರಾಮ ಪ್ರಭು ಇವರ ೭ ನೇ ಹುಟ್ಟುಹಬ್ಬದ ನಿಮಿತ್ತ ಸನಾತನ ಪರಿವಾರದ ವತಿಯಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು

ಶಾಲೆಯ ಪರಿಸರದಲ್ಲಿ ಎಲ್ಲ ಹುಡುಗರು ಬೆಳಗ್ಗಿನ ಪ್ರಾರ್ಥನೆಗಾಗಿ (ಅಸೆಂಬ್ಲಿ) ಸೇರಿದ್ದಾಗ ಒಮ್ಮೆಲೆ ಮಳೆ ಬೀಳುವುದು, ಎಲ್ಲ ಹುಡುಗರು ಬೇರೆ ಕಡೆಗೆ ಧಾವಿಸುತ್ತಿರುವಾಗ ಪೂ. ಭಾರ್ಗವರಾಮ ಇವರು ಅವರೆಲ್ಲರನ್ನು ಒಟ್ಟಿಗೆ ಸೇರಿಸಿ ಒಂದು ಮರದ ಕೆಳಗೆ ಕರೆದುಕೊಂಡು ಹೋಗುವುದು ಮತ್ತು ಮಳೆ ನಿಲ್ಲಲಿ ಎಂದು ಎಲ್ಲರಿಗೂ ದೇವರಲ್ಲಿ ಪ್ರಾರ್ಥಿಸಲು ಹೇಳುವುದು 

ಹೊಸ ಶಾಲೆಯಲ್ಲಿ ಮೊದಲನೇ ದಿನ ಎಲ್ಲ ಮಕ್ಕಳು ಶಾಲೆಯ ಪರಿಸರದಲ್ಲಿ ಪ್ರಾರ್ಥನೆಗಾಗಿ ಸೇರಿದ್ದರು. ಪ್ರಾರ್ಥನೆ ನಡೆಯುತ್ತಿರುವಾಗ ಅಕಸ್ಮಾತ ಜೋರಾಗಿ ಮಳೆ ಸುರಿಯತೊಡಗಿತು ಮತ್ತು ಎಲ್ಲ ಮಕ್ಕಳು ಆಶ್ರಯಕ್ಕಾಗಿ ಅತ್ತ-ಇತ್ತ ಓಡತೊಡಗಿದರು. ಆ ಸಮಯದಲ್ಲಿ ಪೂ. ಭಾರ್ಗವರಾಮ ಇವರ ತರಗತಿಯ ಶಿಕ್ಷಕಿಯು ಮುಂದಿನ ಪ್ರಸಂಗ ನೋಡಿದರು, ‘ದೊಡ್ಡ ಹುಡುಗರು ತಮ್ಮನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಆಚೀಚೆ ಓಡುತ್ತಿದ್ದರು. ಆಗ ಪೂ. ಭಾರ್ಗವರಾಮ ಇವರು ತಮ್ಮ ತರಗತಿಯಲ್ಲಿನ ಎಲ್ಲ ಹುಡುಗರನ್ನು (ಆ ಮಕ್ಕಳು ಅವರಿಗೆ ಹೊಸಬರು ಮತ್ತು ಅಪರಿಚಿತರಾಗಿದ್ದರು) ಒಟ್ಟಿಗೆ ಸೇರಿಸಿ ಒಂದು ಮರದ ಕೆಳಗೆ ಕರೆದುಕೊಂಡು ಹೋದರು. ಅಷ್ಟೇ ಅಲ್ಲದೇ, ‘ಮಳೆಯಿಂದ ಎಲ್ಲ ಮಕ್ಕಳು ಸುರಕ್ಷಿತವಾಗಿದ್ದಾರೆಯೇ ?’, ಎಂದು ಖಚಿತಪಡಿಸಿಕೊಳ್ಳುತ್ತಿದ್ದರು. ಎಲ್ಲ ಮಕ್ಕಳು ಮರದ ಕೆಳಗೆ ಒಟ್ಟಿಗೆ ಬಂದ ನಂತರ ಪೂ. ಭಾರ್ಗವರಾಮ ಇವರು ಎಲ್ಲರಿಗೂ ‘ಮಳೆ ನಿಲ್ಲಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸೋಣ’, ಎಂದು ನಮ್ರವಾಗಿ ಹೇಳಿದರು. ಕೇವಲ ೬ ವರ್ಷದ ಪೂ. ಭಾರ್ಗವರಾಮ ಇವರಲ್ಲಿನ ಪರಿಪಕ್ವತೆ, ನೇತೃತ್ವ ಮತ್ತು ಇತರರ ಕಾಳಜಿ ತೆಗೆದುಕೊಳ್ಳುವುದು, ಈ ಗುಣಗಳನ್ನು ನೋಡಿ ಅವರ ತರಗತಿಯ ಶಿಕ್ಷಕಿಗೆ ಆಶ್ಚರ್ಯವಾಯಿತು. ಅವರಿಗೆ ಅದನ್ನು ನೋಡಿ ಅಸಾಮಾನ್ಯವೆನಿಸಿತು. ಅವರು ಈ ಪ್ರಸಂಗವನ್ನು ಪೂ. ಭಾರ್ಗವರಾಮ ಇವರ ತಾಯಿಗೆ ಹೇಳಿದರು. ಆಗ ನಮಗೆ, ‘ಈಗ ನಿಧಾನವಾಗಿ ಸಾಮಾನ್ಯ ಜನರಿಗೂ ಪೂ. ಭಾರ್ಗವರಾಮ ಇವರು ಸರ್ವಸಾಮಾನ್ಯ ಬಾಲಕರಲ್ಲ’, ಎಂಬುದು ತಿಳಿಯುತ್ತಿದೆ ಎಂಬುದು ತಿಳಿಯಿತು.

‘ಪೂ. ಭಾರ್ಗವರಾಮ ಇವರ ಮೊದಲನೇ ಶಾಲೆಯು ಜಾತ್ಯತೀತ ವಿಚಾರಸರಣಿಯದ್ದಾಗಿದ್ದರಿಂದ ಇತ್ತೀಚೆಗಷ್ಟೇ ನಾವು ಅವರನ್ನು ‘ಅಮೃತ ವಿದ್ಯಾಲಯ’ ಎಂಬ ಹೊಸ ಶಾಲೆಗೆ ಸೇರಿಸಿದ್ದೇವೆ. ಪೂ. ಭಾರ್ಗವರಾಮ ಇವರು ಶಾಲೆಯಲ್ಲಿ ಹೊಸಬರಾಗಿದ್ದರಿಂದ ಶಾಲೆಯ ಶಿಕ್ಷಕರಿಗೆ ‘ಅವರು ಯಾರು ? ಮತ್ತು ಅವರ ವರ್ತನೆ ಹೇಗಿದೆ ?’, ಎಂಬುದರ ಬಗ್ಗೆ ಏನೂ ಗೊತ್ತಿರಲಿಲ್ಲ. ಶಾಲೆ ಆರಂಭವಾದ ಮೊದಲನೇ ದಿನವೇ ಘಟಿಸಿದ ಮುಂದಿನ ಪ್ರಸಂಗವನ್ನು ಪೂ. ಭಾರ್ಗವರಾಮ ಇವರ ಶಿಕ್ಷಕಿ ನಮಗೆ ಹೇಳಿದರು

ಶ್ರೀ. ಭರತ ಪ್ರಭು

ಪೂ. ಭಾರ್ಗವರಾಮ ಇವರ ರೂಪದಲ್ಲಿ ನಮಗೆ ಬಾಲಕಸಂತರನ್ನು ನೀಡಿದ್ದಕ್ಕಾಗಿ ಮತ್ತು ಅವರಿಂದ ಕಲಿಯುವ ಅವಕಾಶವನ್ನು ನೀಡಿದ್ದಕ್ಕಾಗಿ, ನಾನು ಪರಾತ್ಪರ ಗುರುದೇವ ಡಾ. ಆಠವಲೆ ಇವರ ಕೋಮಲ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’

– ಶ್ರೀ. ಭರತ ಪ್ರಭು (ಪೂ. ಭಾರ್ಗವರಾಮ ಇವರ ತಂದೆ), ಮಂಗಳೂರು, ದಕ್ಷಿಣ ಕನ್ನ ಜಿಲ್ಲೆ, ಕರ್ನಾಟಕ. (೨೮.೬.೨೦೨೩)