ಪ್ರಾಚೀನ ದೇವಾಲಯಗಳನ್ನು ಈಶ್ವರೇಚ್ಛೆಯಿಂದ ಕಟ್ಟಲಾಗಿದೆ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ಹಿಂದಿನ ಕಾಲದಲ್ಲಿನ ದೇವಾಲಯಗಳನ್ನು ಈಶ್ವರೇಚ್ಛೆಯಿಂದಲೇ ಕಟ್ಟಲಾಗುತ್ತಿತ್ತ್ತು : ‘ಹಿಂದಿನ ಕಾಲದಲ್ಲಿ ದೇವಾಲಯಗಳ ನಿರ್ಮಾಣ ದಲ್ಲಿ ದೇವತೆಗಳು ಸಾಕ್ಷಾತ್ಕಾರ ರೂಪದಲ್ಲಿ ಭಕ್ತರಿಗೆ ದರ್ಶನ ನೀಡಿ ದೇವಾಲಯವನ್ನು ಹೇಗೆ ಕಟ್ಟಬೇಕು ಎಂಬುದರ ಮಾರ್ಗದರ್ಶನ ಮಾಡುತ್ತಿದ್ದರು ಹಾಗೂ ದೇವತೆಯ ಆಸನಪೀಠ ಎಲ್ಲಿರಬೇಕು ?’ ಇದರ ಮಾಹಿತಿಯನ್ನೂ ಕೊಡುತ್ತಿದ್ದರು. ಆದ್ದರಿಂದ ಸಂಪೂರ್ಣ ದೇವಾಲಯವನ್ನು ಈಶ್ವರೇಚ್ಛೆಯಿಂದಲೇ ನಿರ್ಮಿಸಲಾಗುತ್ತಿತ್ತು.

೨. ದೇವಾಲಯದ ರಚನೆಯ ವೈಶಿಷ್ಟ್ಯಗಳು : ದೇವಾಲಯಗಳು  ಈಶ್ವರೇಚ್ಛೆಯಿಂದ ಕಟ್ಟಲ್ಪಡುತ್ತಿದ್ದುದರಿಂದ ಈ ದೇವಾಲಯಗಳ ರಚನೆಯು ಕಾಲಚಕ್ರಕ್ಕೆ ಅಗತ್ಯವಿರುವ ಕಾರ್ಯಕ್ಕೆ ಅನುಗುಣವಾಗಿ ಪ್ರಾದೇಶಿಕ ಅರಿವಿನಿಂದಲೂ ಜೋಡಿಸಲ್ಪಡುತ್ತಿದ್ದವು.

೩. ಶ್ರೀ ಮಹಾಲಕ್ಷ್ಮಿ ದೇವಾಲಯವು ಸೃಷ್ಟಿಯಲ್ಲಿನ ಪ್ರತಿಯೊಂದು ಕಾರ್ಯಕಾರೀ ಕಾಲಚಕ್ರವಾಚಕ ಚಟುವಟಿಕೆಗಳಿಗೆ ಸಾಕ್ಷಿದಾರ ಆಗಿದೆ : ಕೊಲ್ಹಾಪುರದ ಶ್ರೀ ಮಹಾಲಕ್ಷ್ಮಿ ದೇವಾಲಯವೂ ಹೀಗೆಯೆ ಕಾಲಚಕ್ರಕ್ಕನುಸಾರ ಯೋಗ್ಯ ಸ್ಥಳದರ್ಶಕ ಆಕೃತಿಬಂಧದಿಂದ ಸಾಕಾರವಾಗಿರುವುದರಿಂದ ಅದು ಸೃಷ್ಟಿಯ ಪ್ರತಿಯೊಂದು ಕಾರ್ಯಕಾರೀ ಕಾಲಚಕ್ರವಾಚಕ ಘಟನೆಗಳಿಗೆ ಸಾಕ್ಷಿಯಾಗಿದೆ.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ ಗೋವಾ.