೧. ಗರ್ಭಗುಡಿಯ ವೈಶಿಷ್ಟ್ಯ : ದೇವಾಲಯಕ್ಕೆ ಛಾವಣಿÉಯಿಲ್ಲದಿದ್ದರೆ, ತೆರೆದ ಆಕಾಶದಲ್ಲಿ ‘ಓಂ’ ಶಬ್ದವು (ದೇವತೆಯ ತತ್ತ್ವ) ಕಣ್ಮರೆಯಾಗುತ್ತದೆ. ದೇವಾಲಯಕ್ಕೆ ಗೋಲಾಕಾರದ ಸುತ್ತಿನ ಗುಮ್ಮಟ ಇರುವುದರಿಂದ ಪ್ರತಿಧ್ವನಿಯು ವರ್ತುಲಾಕಾರದಲ್ಲಿ ತಿರುಗುತ್ತಿರುತ್ತದೆ. ಗರ್ಭಗುಡಿಗಳಿಗೆ ಕಿಟಕಿಗಳು ಇರುವುದಿಲ್ಲ ಮತ್ತು ಚಿಕ್ಕ ಬಾಗಿಲಿರುತ್ತದೆ, ಆದ್ದರಿಂದ ಪ್ರತಿಧ್ವನಿ ಅಲ್ಲಿಯೇ ಸುತ್ತುತ್ತಿರುತ್ತದೆ. ಅಂತಹ ಧ್ವನಿಯ ಪರಿಸರದಲ್ಲಿ, ಮನಸ್ಸಿನ ಆಲೋಚನೆಗಳು ಮುಚ್ಚಿಹೋಗುತ್ತವೆ.
೨. ಗೋಲಾಕಾರದ ಧ್ವನಿಯ ಪರಿಸರದಲ್ಲಿ ಮನಸ್ಸಿನ ವಿಚಾರಗಳು ನಿಂತುಹೋಗುವುದು : ತೆರದ ಆಕಾಶದಲ್ಲಿ ‘ಓಂ’, ‘ರಾಮ್’ ಮುಂತಾದ ಶಬ್ದಗಳು ಕಣ್ಮರೆಯಾಗುತ್ತವೆ; ಆದರೆ ದೇವಾಲಯದ ಗುಮ್ಮಟವು ಗೋಲಾಕಾರದಲ್ಲಿದ್ದಾಗ, ‘ಓಂ’ನ ಅನೇಕ ಪ್ರತಿಧ್ವ್ವನಿಗಳು ಮತ್ತೆ ಮತ್ತೆ ತಿರುಗುತ್ತಲೇ ಇರುತ್ತವೆ. ದೇವಾಲಯದ ನಿರ್ಮಾಣಕ್ಕೆ ತಬಲಾದಂತೆ ಧ್ವನಿಸುವ ಕಲ್ಲುಗಳನ್ನು ಆಯ್ಕೆ ಮಾಡಲಾಗುತ್ತದೆ. ವಿಶಿಷ್ಟ ಮಂತ್ರಗಳ ಉಚ್ಚಾರವು ಗೋಲಾಕಾರ ಧ್ವನಿ ಮತ್ತು ಪ್ರತಿಧ್ವನಿಗಳ ರೂಪದಲ್ಲಿ ಮಂತ್ರಯುಕ್ತ ವಾತಾವರಣವನ್ನು ಸೃಷ್ಟಿಸುತ್ತದೆ. ಘಂಟಾನಾದವು ಸಹ ಗೋಲಾಕಾರವಾಗಿ ಸುತ್ತುತ್ತದೆ. ಅಂತಹ ಗೋಲಾಕಾರದ ಧ್ವನಿಯ ಪರಿಸರದಲ್ಲಿ ಮನಸ್ಸಿನಲ್ಲಿ ವಿಚಾರ ಬರುವುದು ನಿಂತುಹೋಗುತ್ತದೆ. ಪಾಶ್ಚಿಮಾತ್ಯರಿಗೆ ದೇವಾಲಯವು ಆರೋಗ್ಯದ ದೃಷ್ಟಿಯಿಂದ ಅಯೋಗ್ಯವೆನಿಸುತ್ತದೆ; ಏಕೆಂದರೆ ಒಳ ಹೋಗುವ ದಾರಿ ಕಿರಿದಾಗಿದೆ ಮತ್ತು ಒಂದೇ ಬಾಗಿಲನ್ನು ಹೊಂದಿದೆ. ಯಾವುದೇ ಗಾಳಿಯ ಚಲನೆ ಇಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾಗಿಲು, ಕಿಟಕಿಗಳಿದ್ದರೆ, ಧ್ವನಿ ವರ್ತುಲವನ್ನು ರಚಿಸಲಾಗುವುದಿಲ್ಲ.
– ದಿ. ಸದ್ಗುರು (ಡಾ.) ವಸಂತ ಬಾಳಾಜಿ ಆಠವಲೆ