ಮಹಮ್ಮದ್ ಅಲಿ ಅಲಿಯಾಸ್ ಶಹನಾಜನು ಹಿಂದುತ್ವನಿಷ್ಠ ನೂಪುರ ಶರ್ಮ ಮತ್ತು ಉಪದೇಶ ರಾಣ ಇವರನ್ನು ಮುಗಿಸುವ ಷಡ್ಯಂತ್ರ ರೂಪಿಸಿದ್ದ !
ಪಾಟಲಿಪುತ್ರ (ಬಿಹಾರ) – ಭಾಜಪದ ಮಾಜಿ ವಕ್ತಾರ ನೂಪುರ್ ಶರ್ಮಾ, ಭಾಜಪದ ಶಾಸಕ ಟಿ. ರಾಜಸಿಂಹ, ‘ಸುದರ್ಶನ ನ್ಯೂಸ್’ನ ಮುಖ್ಯ ಸಂಪಾದಕ ಸುರೇಶ್ ಚೌಹಾಣಕೆ ಮತ್ತು ಹಿಂದೂ ಸನಾತನ ಸಂಘದ ರಾಷ್ಟ್ರೀಯ ಅಧ್ಯಕ್ಷ ಉಪದೇಶ ರಾಣಾ ಸಹಿತ ಅನೇಕ ನಾಯಕರ ಹತ್ಯೆ ಮಾಡುವ ಷಡ್ಯಂತ್ರದಲ್ಲಿ ಮಹಮ್ಮದ್ ಅಲಿಯನ್ನು ಬಂಧಿಸಿದ್ದಾರೆ. ಗುಜರಾತ ಪೋಲೀಸರು ರಾಜ್ಯದಲ್ಲಿನ ಮುಝಫ್ಫರಪುರದಿಂದ ಬಂಧಿಸಿದ್ದಾರೆ. ಪಾಕಿಸ್ತಾನದ ಜೊತೆಗೆ ಇವನ ಸಂಬಂಧ ಇರುವುದು ಬೆಳಕಿಗೆ ಬಂದಿದೆ. ಅವನು ಇಲ್ಲಿಯ ಓರ್ವ ವ್ಯಕ್ತಿಯ ಜೊತೆಗೆ ‘ವಾಟ್ಸಪ್ ಗ್ರೂಪ್’ಗೆ ಸೇರಿದ್ದನು. ಗುಜರಾತ್‌ನ ಮೌಲಾನ (ಇಸ್ಲಾಮಿನ ಅಭ್ಯಾಸಕ) ಸೊಹೆಲ್ ಅಬೂಬಕರ್ ತಿಮೋಲ್ ಕೂಡ ಇದೆ ಗುಂಪಿನಲ್ಲಿ ಇದ್ದನು. ಅವನನ್ನು ಕೆಲವು ದಿನಗಳ ಹಿಂದೆ ಪೊಲೀಸರು ಸೂರತದಿಂದ ಬಂಧಿಸಿದ್ದರು.
೨೪ ವರ್ಷದ ಮಹಮ್ಮದ್ ಅಲಿಯನ್ನು ಮುಜಫ್ಫರಪುರದ ಸಕ್ರಾದಿಂದ ಮೇ ೧೧ ರಂದು ರಾತ್ರಿ ೨ ಗಂಟೆಗೆ ಬಂಧಿಸಿದ್ದಾರೆ. ಸೊಹೇಲ್ ನ ಬಂಧನದ ನಂತರ ಗುಜರಾತ್‌ನ ವಿಶೇಷ ಶಾಖೆಯ ತಂಡ ಮುಜಫ್ಫರಪುರದ ಸಕ್ರಾಗೆ ತಲುಪಿದ್ದರು. ಪೊಲೀಸರು ಆತನಿಂದ ಮೊಬೈಲ್ ವಶಪಡಿಸಿಕೊಂಡರು. ಅದರಲ್ಲಿ ಹಿಂದೂ ದೇವತೆಗಳ ಆಕ್ಷೆಪಾರ್ಹ ಛಾಯಾಚಿತ್ರಗಳು ಇವೆ ಎಂದು ಪೊಲೀಸರು ಹೇಳಿದರು. ಅವನು ಯಾವ ನಾಯಕರಿಗೆ ಬೆದರಿಸಬೇಕು ಎಂದು ಇಚ್ಚಿಸಿದ್ದನು, ಅವರ ಸಂಖ್ಯೆ ಒಂದು ವಿಶೇಷ ಗುಂಪಿನಲ್ಲಿ ಜೋಡಿಸುವುದು ಮತ್ತು ಗ್ರೂಪ್ ವಿಡಿಯೋ ಕಾಲ್ ಮಾಡುತ್ತಿದ್ದ. ವೀಡಿಯೋ ಕಾಲ್ ಮೂಲಕ ಅವನು ಬೆದರಿಕೆ ನೀಡುತ್ತಿದ್ದನು. ಈ ಬೆದರಿಕೆಯಲ್ಲಿ ಹತ್ಯೆಯ ಬೆದರಿಕೆ ಕೂಡ ಇರುತ್ತಿತ್ತು. ಇವನ ಮೇಲೆ ಅನೇಕ ಹಿಂದುಗಳ ನಾಯಕರಿಗೆ ಹತ್ಯೆಯ ಬೆದರಿಕೆ ನೀಡಿರುವುದು ಮತ್ತು ಷಡ್ಯಂತ್ರ ರೂಪಿಸಿರುವ ಆರೋಪವಿದೆ. ಕೆಲವು ದಿನಗಳ ಹಿಂದೆ ಸುರತನಿಂದ ಮೌಲಾನ ಸೊಹೇಲ್ ಅಬೂಬಕರ್ ತಿಮೋಲ ಇವನನ್ನು ಬಂಧಿಸಲಾಗಿತ್ತು. ಅದರ ಆಧಾರದಲ್ಲಿ ಈಗ ಮಹಮ್ಮದ್ ಅಲಿಯನ್ನು ಬಂಧಿಸಲಾಗಿದೆ.