Sanatan Innocence Proved : ‘ಹಿಂದೂ ಭಯೋತ್ಪಾದನೆ’ಯ ಪಿತೂರಿ ರೂಪಿಸುವವರ ಸೋಲು ! – ಸನಾತನ ಸಂಸ್ಥೆ

ಎಡದಿಂದ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸುನೀಲ್ ಘನವಟ, ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ ಮತ್ತು ಸನಾತನ ಸಂಸ್ಥೆಯ ಶ್ರೀ. ಚೈತನ್ಯ ತಾಗಡೆ

ಮುಂಬಯಿ – ಡಾ. ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ತೀರ್ಪಿನ ಕುರಿತು ಸನಾತನ ಸಂಸ್ಥೆಯು ಮೇ 10 ರಂದು ಮಧ್ಯಾಹ್ನ ಮುಂಬಯಿ ಮತ್ತು ಪುಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿತು. ‘ಹಿಂದೂ ಭಯೋತ್ಪಾದನೆ’ಯ ಪಿತೂರಿಯನ್ನು ರೂಪಿಸುತ್ತಿದ್ದವರ ಇಂದು ಸೋಲಿಸಲಾಗಿದೆ. ಅಲ್ಲದೆ, ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ ಹಿಂದುತ್ವನಿಷ್ಠ ಕಾರ್ಯಕರ್ತ ಸಚಿನ್ ಅಂದುರೆ ಮತ್ತು ಶರದ್ ಕಳಸ್ಕರ್ ಅವರನ್ನು ಖುಲಾಸೆಗೊಳಿಸಲು ಹೋರಾಟ ನಡೆಸುವುದಾಗಿ ಸನಾತನ ಸಂಸ್ಥೆತಯ ಈ ಸಂದರ್ಭದಲ್ಲಿ ಘೋಷಿಸಿದೆ.

ತಡವಾಗಿ ಸಿಕ್ಕಿದ ನ್ಯಾಯ ! – ಸನಾತನ ಸಂಸ್ಥೆ

ಸನಾತನ ಸಂಸ್ಥೆಯು ಪ್ರಕಟಿಸಿದ ಪತ್ರಿಕಾಪ್ರಕಟಣೆಯಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ್ ಇವರು, ಈ ತೀರ್ಪಿನಿಂದಾಗಿ ಸನಾತನ ಸಂಸ್ಥೆಯ ಸಾಧಕರು ನಿರಪರಾಧಿಗಳೇ ಆಗಿದ್ದರು, ಇದು ಇಂದು ಸಾಬೀತಾಯಿತು, ಅಲ್ಲದೇ ಸನಾತನ ಸಂಸ್ಥೆ ‘ಹಿಂದೂ ಭಯೋತ್ಪಾದಕ’ ಎಂದು ಸಾಬೀತುಪಡಿಸುವ ‘ಅರ್ಬನ್ ನಕ್ಸಲೀಯರ’ ಸಂಚು ವಿಫಲವಾಗಿದೆ ! ಇಂದು 11 ವರ್ಷಗಳ ನಂತರ ಸನಾತನ ಸಂಸ್ಥೆಗೆ ತಡವಾಗಿ ಸಿಕ್ಕಿರುವ ನ್ಯಾಯವಾಗಿದೆ ಎಂದು ಹೇಳಿದರು.

ಪುಣೆ – ದೋಷಮುಕ್ತರಾದ ಡಾ. ವೀರೇಂದ್ರ ಸಿಂಗ್ ತಾವಡೆ, ನ್ಯಾಯವಾದಿ ಸಂಜೀವ್ ಪುನಾಳೆಕರ್ ಮತ್ತು ಶ್ರೀ. ವಿಕ್ರಮ್ ಭಾವೆ ಅವರ ಅಪಖ್ಯಾತಿಯನ್ನು ಯಾರು ಸರಿದೂಗಿಸುತ್ತಾರೆ ? ಎಂದು ಪುಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಭಯ್ ವರ್ತಕ್ ಇವರು ಪ್ರಶ್ನಿಸಿದ್ದಾರೆ. ಇಲ್ಲಿನ ಪತ್ರಿಕಾ ಭವನದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ 30ಕ್ಕೂ ಹೆಚ್ಚು ಪತ್ರಕರ್ತರು ಉಪಸ್ಥಿತರಿದ್ದರು.

ಇಂದು ಅಮಾಯಕ ಯುವಕರಾದ ಶರದ್ ಕಳಸ್ಕರ್ ಮತ್ತು ಸಚಿನ್ ಅಂದುರೆ ಶಿಕ್ಷೆಗೆ ಗುರಿಯಾಗಿದ್ದಾರೆ; ಆದರೆ, ಅವರು ದೋಷಮುಕ್ತರಾಗುತ್ತಾರೆ ಎಂಬ ನಂಬಿಕೆಯನ್ನೂ ವರ್ತಕ್ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶ್ರೀ. ಅಭಯ ವರ್ತಕ ಮಂಡಿಸಿದ ಸೂತ್ರಗಳು !

ಶ್ರೀ. ಅಭಯ ವರ್ತಕ

1. ಆರೋಪಿಗಳು ವಿಚಾರಣೆಯನ್ನು ವಿಳಂಬಗೊಳಿಸಲು ನ್ಯಾಯಾಲಯದ ಕಲಾಪವನ್ನು ಮುಂದೂಡಲು ಪ್ರಯತ್ನಿಸುತ್ತಾರೆ. ಆದರೆ, ಇಲ್ಲಿ ದಾಭೋಲ್ಕರ್ ಕುಟುಂಬ ಹೈಕೋರ್ಟ್ ಮೊರೆ ಹೋಗಿ ತನಿಖೆ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ ಹಾಗೂ ಕಾಲಾವಧಿ ಹೆಚ್ಚಿಸುವಂತೆ ಕೋರಿದ್ದರು. ಇಲ್ಲವಾದರೆ 2018ರಲ್ಲೇ ಡಾ. ತಾವಡೆ ಬಿಡುಗಡೆ ಆಗುತ್ತಿದ್ದರು. ಹತ್ಯೆಗೀಡಾದ ವ್ಯಕ್ತಿಯ ಸಂಬಂಧಿಕರು 5 ವರ್ಷಗಳ ಕಾಲ ಪ್ರಕರಣವನ್ನು ನಿಲ್ಲಿಸುವುದು ಇದು ಭಾರತದ ಏಕೈಕ ಪ್ರಕರಣವಾಗಿರಬಹುದು. ಇದರಿಂದ ಕೇಸರಿ ಭಯೋತ್ಪಾದನೆಯ ಸಂಚು ನಡೆಸಲು, ‘ನಿಜವಾದ ಹಂತಕರು ಬಿಡುಗಡೆಯಾದರೂ ಪರವಾಗಿಲ್ಲ; ಹಿಂದುತ್ವನಿಷ್ಠರನ್ನು ಬಂಧಿಸಬೇಕು’, ಈ ದುಷ್ಟ ಉದ್ದೇಶ ಇಟ್ಟುಕೊಂಡು ಹಿಂದೂಗಳನ್ನು ಬಂಧಿಸುವ ವಿಕೃತ ಸಂತೋಷವನ್ನು ದಾಭೊಲ್ಕರ ಕುಟುಂಬ ತೆಗೆದುಕೊಂಡಿತು.

2. ಸನಾತನ ಸಂಸ್ಥೆಯ 1 ಸಾವಿರದ 600 ಕ್ಕೂ ಹೆಚ್ಚು ಸಾಧಕರ ಕುಟುಂಬಗಳ ತನಿಖೆ ಮಾಡಲಾಗಿದೆ. ಸನಾತನ ಸಂಸ್ಥೆಯು 11 ವರ್ಷಗಳ ಕಾಲ ಈ ಎಲ್ಲ ಅನ್ಯಾಯವನ್ನು ಸಹಿಸಿಕೊಂಡಿದೆ. ಹಮೀದ್ ದಾಭೋಲ್ಕರ್ ಅವರು ‘ದಾಭೋಲ್ಕರ್ ಅವರ ಎರಡನೇ ಗಾಂಧಿ ಮಾಡುವೆವು’; ಎಂದು ಸನಾತನ ಸಂಸ್ಥೆಯಿಂದ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದರು, ಆದರೆ ನ್ಯಾಯಾಲಯದಲ್ಲಿ ಯಾವುದೇ ಸಾಕ್ಷ್ಯವನ್ನು ಹಾಜರುಪಡಿಸಲಾಗಿಲ್ಲ. ಇದರಿಂದ ಸನಾತನ ಸಂಸ್ಥೆಗೆ ಮಾನಹಾನಿಯಾಯಿತು; ಆದರೆ ಈ ತೀರ್ಪಿನಿಂದಾಗಿ ಸನಾತನ ಸಂಸ್ಥೆಯ ಮೇಲಿದ್ದ ಕಳಂಕ ಅಳಿಸಿ ಹೋಗಿದೆ.

3. ಡಾ. ದಾಭೋಲ್ಕರ್ ಹತ್ಯೆಯ ತನಿಖೆ ನಡೆಯುತ್ತಿರುವಾಗ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಕಾರ್ಯಕರ್ತ ಮಿಲಿಂದ್ ದೇಶಮುಖ್ ಸಾಕ್ಷಿಗಳನ್ನು ಭೇಟಿಯಾಗಿ ಅವರೊಂದಿಗೆ ಊಟ ಮಾಡಿದರು. ವಾಸ್ತವವಾಗಿ, ಫಿರ್ಯಾದಿ ಅಥವಾ ಪ್ರತಿವಾದಿಯು ಸಾಕ್ಷಿಗಳನ್ನು ಭೇಟಿ ಮಾಡಲು ಅನುಮತಿಸಲಿಲ್ಲ, ಆದರೆ ಇಲ್ಲಿ ಕಾನೂನನ್ನು ಉಲ್ಲಂಘಿಸಲಾಗಿದೆ. ಇದರಲ್ಲಿ ಯಾರು ಭಾಗಿಯಾದವರು ? ಇದರ ತನಿಖೆ ನಡೆಸಿ ಅವರನ್ನು ಬಂಧಿಸಬೇಕು, ಎಂದು ಆಗ್ರಹಿಸುತ್ತೇವೆ.

ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಹಣಕಾಸು ಹಗರಣಗಳು, ಜಾತಿ ಪಂಚಾಯತ್, ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಬೋಗಸ್ ವೈದ್ಯರ ವಿರುದ್ಧ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಅಭಿಯಾನದ ತನಿಖೆ ಏಕೆ ಮಾಡಲಿಲ್ಲ ? – ಸುನೀಲ್ ಘನವಟ, ರಾಜ್ಯ ಸಂಘಟಕರು, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಸುನೀಲ ಘನವಟ

ದಾಭೋಲ್ಕರ್ ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳು ಪ್ರತಿ ಬಾರಿ ಬದಲಾಗುತ್ತಿದ್ದರು. ತನಿಖಾ ಸಂಸ್ಥೆಗಳು ಸೃಷ್ಟಿಸಿದ ಸುಳ್ಳು ಸುದ್ದಿ ಈಗ ನಿಷ್ಪರಿಣಾಮಕಾರಿ ಎಂದು ಸಾಬೀತಾಗಿದೆ. ವಾರಕರಿ ಸಂಪ್ರದಾಯ, ಶ್ರೀಶಿವ ಪ್ರತಿಷ್ಠಾನ, ಹಿಂದೂಸ್ಥಾನ, ಹಿಂದೂ ಏಕತಾ ಆಂದೋಲನ, ಹಿಂದೂ ರಾಷ್ಟ್ರ ಸೇನೆಯಂತಹ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ಮೂಢನಂಬಿಕೆಗಳ ನಿರ್ಮೂಲನೆ ಕಾಯ್ದೆಯನ್ನು ವಿರೋಧಿಸಿದವು ಮತ್ತು ಅವುಗಳ ತನಿಖೆ ಮಾಡಲಾಯಿತು. ನಕ್ಸಲೀಯ ಚಟುವಟಿಕೆಯಲ್ಲಿ ತೊಡಗಿದ್ದ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಕಾರ್ಯಕರ್ತರು ಅಂದರೆ ಅರ್ಬನ್ ನಕ್ಸಲೀಯರು ಎಂದು ಏಕೆ ಹೇಳಬಾರದು ? ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಹಣಕಾಸು ಹಗರಣಗಳು, ಜಾತಿ ಪಂಚಾಯತಿ, ಬೋಗಸ್ ವೈದ್ಯರ ವಿರುದ್ಧ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಅಭಿಯಾನದ ತನಿಖೆ ಏಕೆ ನಡೆಸಲಿಲ್ಲ ? ಈ ಸಂದರ್ಭದಲ್ಲಿ ಸುನಿಲ್ ಘನವಟ ಅವರು ಪ್ರಶ್ನೆಯನ್ನು ಎತ್ತಿದರು.

ಶ್ರೀ. ಘನವಟ ಅವರು ಮಾತನ್ನು ಮುಂದುವರೆಸುತ್ತಾ, ನಾನೇ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಹಗರಣಗಳನ್ನು ಸಾಕ್ಷಿ ಸಮೇತ ಸತಾರಾ ಚಾರಿಟೇಬಲ್ ಕಮಿಷನರೇಟ್‌ಗೆ ಹಾಜರುಪಡಿಸಿದ್ದೇನೆ. ತನಿಖೆ ಮಾಡುವಾಗ ಈ ಎಲ್ಲಾ ಸಾಧ್ಯತೆಗಳನ್ನು ಏಕೆ ಪರಿಗಣಿಸಲಿಲ್ಲ ? ಈ ತೀರ್ಪಿನಿಂದಾಗಿ, ಹಿಂದೂ ಭಯೋತ್ಪಾದನೆಯ ‘ಸಿದ್ಧಾಂತ’ (ಪರಿಕಲ್ಪನೆ) ವಿಫಲವಾಗಿದೆ. ಪ್ರಗತಿಪರ ವ್ಯವಸ್ಥೆಯನ್ನು ಸಾಬೀತುಪಡಿಸಲು ಇದೆಲ್ಲವನ್ನೂ ಸೃಷ್ಟಿಸಲಾಯಿತು ಎಂದು ಹೇಳಿದರು.

ನ್ಯಾಯಾಲಯವು ಈ ಅಪರಾಧದಲ್ಲಿ ಹೇರಲಾಗಿದ್ದ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ‘ಯುಎಪಿಎ’ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ) ಕಾಯ್ದೆಯನ್ನೂ ರದ್ದುಗೊಳಿಸಿದೆ. ಈ ಕಾನೂನನ್ನು ಹೇರಿ ಸನಾತನ ಸಂಸ್ಥೆಯನ್ನು ‘ಕೇಸರಿ ಭಯೋತ್ಪಾದಕ’ ಎಂದು ನಿರ್ಧರಿಸಿ ನಿಷೇಧಿಸುವ ಪಿತೂರಿಯು ಈ ತೀರ್ಪಿನಿಂದ ನಾಶವಾಗಿದೆ !