Dabholkar Murder Case Verdict : ಸಾಕ್ಷಾಧಾರಗಳ ಕೊರತೆಯಿಂದ ನಿರಪರಾಧಿ ಎಂದು ಬಿಡುಗಡೆಯಾಗುವೆನು ಎಂಬುದರ ಖಾತ್ರಿಯಿತ್ತು ! – ವಿಕ್ರಮ ಭಾವೆ , ಸನಾತನ ಸಂಸ್ಥೆಯ ಸಾಧಕ

ವಿಕ್ರಮ ಭಾವೆ

ನ್ಯಾಯಾಲಯವು ಇಂದು ನನ್ನನ್ನು ನಿರಪರಾಧಿ ಎಂದು ಬಿಡುಗಡೆಗೊಳಿಸಿದೆ. ನನ್ನ ದೃಷ್ಟಿಯಿಂದ ಅಪೇಕ್ಷಿತ ತೀರ್ಪೆ ಬಂದಿದೆ. ನನ್ನನ್ನು ತಪ್ಪು ರೀತಿಯಲ್ಲಿ ಬಂಧಿಸಲಾಗಿತ್ತು. ನನ್ನ ವಿರುದ್ಧ ಯಾವುದೇ ಸಾಕ್ಷಾಧಾರಗಳಿರಲಿಲ್ಲ. ಆದುದರಿಂದ ನ್ಯಾಯಾಲಯದ ಎದುರು ಯಾವುದೇ ಪುರಾವೆಗಳು ಬರಲಿಲ್ಲ. ನಿರಪರಾಧಿ ಎಂದು ಬಿಡುಗಡೆಯಾಗುವೆನು ಎಂಬ ಖಾತ್ರಿಯಿತ್ತು. ಇಂದು ಅದು ಪ್ರತ್ಯಕ್ಷದಲ್ಲಿ ನಡೆದಿರುವುದು ನನಗಾಗಿ ಆನಂದದ ಸಂಗತಿಯೇ ಆಗಿದೆ.

ನನ್ನನ್ನು ಬಂಧಿಸುವಾಗಲೇ ಸಿಬಿಐ ಅಧಿಕಾರಿಗಳು ನನಗೆ, `ನ್ಯಾಯವಾದಿ ಸಂಜೀವ ಪುನಾಳೇಕರರವರ ವಿರುದ್ಧ ಸಾಕ್ಷಿ ನೀಡಲು ಸಿದ್ದನಿದ್ದರೆ ಮಾತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಇಲ್ಲವಾದರೆ ಅವರು ನನ್ನನ್ನು ಬಂಧಿಸುವವರಿದ್ದರು. ಆದರೆ ನಾನು ಸುಳ್ಳು ಸಾಕ್ಷಿ ಹೇಳಲು ನಿರಾಕರಿಸಿದ್ದರಿಂದಲೇ ಅವರು ನನ್ನನ್ನು ಈ ಪ್ರಕರಣದಲ್ಲಿ ಬಂಧಿಸಿದರು ಮತ್ತು ಅವರು ನನ್ನ ಮೇಲೆ ರೇಕಿ ಮಾಡಿರುವ ಆರೋಪ ಹೊರಿಸಿದರು. ಆದರೆ ಆ ದೃಷ್ಟಿಯಿಂದ ಇಲ್ಲಿಯವರೆಗೆ ಯಾವುದೇ ಸಾಕ್ಷಾಧಾರಗಳನ್ನು ತರಲು ಅವರಿಗೆ ಸಾಧ್ಯವಾಗಲಿಲ್ಲ. ಎಷ್ಟೋ ಬಾರಿ ಅವರು ಆಣೆ ಮಾಡಿ ನನ್ನ ವಿರುದ್ಧ ಸಾಕ್ಷಾಧಾರಗಳು ಇವೆ ಎಂದು ಸುಳ್ಳು ಹೇಳಿ ನನ್ನ ಜಾಮೀನನ್ನು ವಿರೋಧಿಸುತ್ತಿದ್ದರು. ಪ್ರತ್ಯಕ್ಷದಲ್ಲಿ ಸುಳ್ಳು ಬೆಳಕಿಗೆ ಬಂದಿದ್ದು ನನ್ನ ವಿರುದ್ಧ ಒಂದೇ ಒಂದು ಸಾಕ್ಷಿ ಇರಲಿಲ್ಲ.
ನನ್ನ ತಂದೆಯ ನಿಧನವಾದಾಗ ಅಧಿಕಾರಿಗಳು ನನಗೆ ಅವರ ಅಂತ್ಯಸಂಸ್ಕಾರಕ್ಕೂ ಅನುಮತಿ ನೀಡಲಿಲ್ಲ. ನನಗೆ ಉಚ್ಚ ನ್ಯಾಯಾಲಯವು ಜಾಮೀನು ನೀಡಿದಾಗ `ನಾನು ಈ ಖಟ್ಲೆ ಮುಗಿಯುವವರೆಗೆ ಪುಣೆ ಜಿಲ್ಲೆಯಿಂದ ಹೊರಗೆ ಹೋಗಬಾರದು’ ಎಂಬ ಷರತ್ತು ವಿಧಿಸಿತ್ತು. ನನ್ನ ತಂದೆಯವರು ಹಳ್ಳಿಯಲ್ಲಿರುವಾಗ ಅವರ ನಿಧನವಾಯಿತು. ನಾನು ಒಬ್ಬನೇ ಮಗನಾಗಿದ್ದರೂ ಕೂಡ ನನಗೆ ಅವರ ಅಂತ್ಯ ಸಂಸ್ಕಾರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ನಾನು ಅದಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ ಆದರೆ ಅದಕ್ಕೆ ಅನುಮತಿ ದೊರೆಯಲು ಮೂರು ವಾರಗಳು ಬೇಕಾದವು. ಅನಂತರ ನಾನು ಇತರ ದಿನಗಳ ವಿಧಿಗಳನ್ನು ಮಾಡಲು ಸಾಧ್ಯವಾಯಿತು. ಇದರಲ್ಲಿ ಪೊಲೀಸರು ಬೇಕೆಂದೇ ತಡ ಮಾಡಿದರು ಎಂದು ಹೇಳಲಾಗದು. ಏಕೆಂದರೆ ಇದು ನ್ಯಾಯಾಲಯದ ಪ್ರಕ್ರಿಯೆ ಆಗಿದೆ. ಅದರಲ್ಲಿ ಅರ್ಜಿ ನೀಡಿದ ನಂತರ ಸರದಿ ಬರುತ್ತದೆ, ಅದರ ಮೇಲೆ ಯುಕ್ತಿವಾದ ನಡೆಯುತ್ತದೆ. ಇದೆಲ್ಲ ನಡೆಯಲು ಅಷ್ಟು ಸಮಯ ಬೇಕಾಯಿತು. ಇಲ್ಲವಾದರೆ ಅದು ಬೇಗನೆ ಆಗಬಹುದಿತ್ತು ಎಂದು ನನಗೆ ಅನಿಸುತ್ತದೆ.