Dabholkar Murder Case : ‘ಡಾ. ದಾಭೋಲ್ಕರರವರ ಹತ್ಯೆಯಲ್ಲಿ ಸನಾತನದ ಕೈವಾಡವಿದೆ (ಅಂತೆ) !’ – ಮಿಲಿಂದ ದೇಶಮುಖ, ಅಂನಿಸ ರಾಜ್ಯ ಕಾರ್ಯಕಾರಿಣಿ ಸದಸ್ಯರು

ನಾನು 2016 ರಿಂದ ದಾಭೋಲ್ಕರ ಹತ್ಯೆ ಪ್ರಕರಣದ ವರದಿಯನ್ನು ಪಡೆಯುತ್ತಿದ್ದೇನೆ. ಇಂದು ಈ ಪ್ರಕರಣದ ತೀರ್ಪು ಬಂದಿದೆ. ಪ್ರತ್ಯಕ್ಷವಾಗಿ ಗುಂಡು ಹಾರಿಸಿದವರಿಗೆ ಶಿಕ್ಷೆಯಾಗಿದ್ದರೂ ಮೂವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಿಡುಗಡೆ ಮಾಡಲಾಗಿದೆ. ನಿಜ ಹೇಳಬೇಕೆಂದರೆ, ಅವರ ವಿರುದ್ಧ ಉತ್ತಮ ಸಾಕ್ಷ್ಯಗಳನ್ನು ಸಂಗ್ರಹಿಸಬಹುದಿತ್ತು. ನ್ಯಾಯಾಲಯವು ಅವರ ಸಹಭಾಗ ಇಲ್ಲ ಎಂದು ಸ್ಪಷ್ಟವಾಗಿ ಏನೂ ಹೇಳಿಲ್ಲ. ಯೋಗ್ಯ ಸಾಕ್ಷಾಧಾರಗಳು ದೊರೆತಿದ್ದರೆ ಅವರಿಗೂ ಶಿಕ್ಷೆಯಾಗುತ್ತಿತ್ತು. ಡಾ. ದಾಭೋಲ್ಕರರವರ ಹತ್ಯೆಯ ಹಿಂದೆ ಸನಾತನ ಬಿಟ್ಟರೆ ಬೇರೆ ಯಾರೂ ಇಲ್ಲ. (ಸಾಕ್ಷಿದಾರರ ಮೇಲೆ ಒತ್ತಡ ಹೇರುವ, ವಂಚಕರು ಮತ್ತು ಸಂಪೂರ್ಣ ಸುಳ್ಳುಗಾರರಾಗಿರುವ (ಅ)ವಿವೇಕಿ ಅಂಧಶ್ರದ್ಧಾ ನಿರ್ಮೂಲನ ಸಮಿತಿಯು ಇತರರಿಗೆ ಬುದ್ಧಿವಂತಿಕೆಯನ್ನು ಕಲಿಸದಿದ್ದರೇ ಒಳ್ಳೆಯದು ! – ಸಂಪಾದಕರು)

‘ಮುಖ್ಯ ಸೂತ್ರಧಾರ ಸಿಗದಿರುವುದು ವಿಷಾದದ ಸಂಗತಿಯಾಗಿದೆ (ಅಂತೆ) !’ – ಹಮೀದ ದಾಭೋಲ್ಕರ, ಡಾ.ದಾಭೋಲ್ಕರರವರ ಮಗ

ಹಮೀದ ದಾಭೋಲ್ಕರ

ನಾನು ಇನ್ನೂ ತೀರ್ಪನ್ನು ನೋಡಿಲ್ಲ. ಈ ತನಿಖೆಯು ಸುಮಾರು 11 ವರ್ಷಗಳ ಕಾಲ ನಡೆಯಿತು. ಇದು ನ್ಯಾಯಾಂಗದ ಮೇಲಿನ ವಿಶ್ವಾಸ, ಸಮಾಜಿಕ ಕಾರ್ಯಕರ್ತರ ಹತ್ಯೆ ಮತ್ತು ವಿಚಾರವನ್ನು ಮುಗಿಸಲು ಜನರನ್ನು ಕೊಲ್ಲುವ ಪದ್ದತಿಯ ವಿರುದ್ಧದ ಹೋರಾಟವಾಗಿತ್ತು. ಇಂತಹ ಪ್ರವೃತ್ತಿ ಇರುವ ವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂಬುದು ನಮ್ಮ ನಿಲುವಾಗಿದೆ. ಸೂತ್ರಧಾರ ಸಿಗದಿರುವುದು ವಿಷಾದನೀಯವಾಗಿದೆ; ಏಕೆಂದರೆ ಇಂತಹ ಷಡ್ಯಂತ್ರಗಳಲ್ಲಿ ನಮಗೆ ಹೆಚ್ಚಾಗಿ ಕಾಣುವುದೇನೆಂದರೆ ಪೇದೆಗಳಾದವರಿಗೇ ಬಲಿದಾನ ನೀಡಬೇಕಾಗುತ್ತದೆ. ಅವರ ಹಿಂದಿನ ಸೂತ್ರಧಾರರು ಮುಕ್ತವಾಗಿ ತಿರುಗುತ್ತಾರೆ. ತೀರ್ಪಿನ ಮಾಹಿತಿಯನ್ನು ಪಡೆದು ಮುಂದಿನ ಹೋರಾಟದ ನಿಲುವನ್ನು ನಿರ್ಧರಿಸುತ್ತೇವೆ. (ದಾಭೋಲ್ಕರರವರು ಸೂತ್ರಧಾರನನ್ನು ಹುಡುಕಲು ಅಷ್ಟೊಂದು ಉತ್ಸುಕರಾಗಿದ್ದರೆ, ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಬೇಕೆಂದು ಉಚ್ಚ ನ್ಯಾಯಾಲಯಕ್ಕೆ ಏಕೆ ಹೋದರು ? ದಾಭೋಲ್ಕರರವರ ಹತ್ಯೆಯ ತನಿಖೆಯನ್ನು ದಾರಿತಪ್ಪಿಸುವಲ್ಲಿ ತನಿಖಾ ದಳದಷ್ಟೇ ದಾಭೋಲ್ಕರ ಕುಟುಂಬವೂ ಕಾರಣವಾಗಿದೆ, ಎಂಬುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು. – ಸಂಪಾದಕರು)

ಸಂಪಾದಕೀಯ ನಿಲುವು

ನ್ಯಾಯಾಲಯಕ್ಕಿಂತ ತಾವೇ ಹೆಚ್ಚು ಬುದ್ಧಿವಂತರು ಎಂದು ತಿಳಿದುಕೊಳ್ಳುವ ಅಂಧಶ್ರದ್ಧಾ ನಿರ್ಮೂಲನ ಸಮಿತಿ (ಅಂನಿಸ) !