Children abused by Pakistan Army : ಪಾಕಿಸ್ತಾನ ಸೇನಾ ಅಧಿಕಾರಿಗಳಿಂದ ಮಕ್ಕಳ ಲೈಂಗಿಕ ಕಿರುಕುಳ !

100 ಮಕ್ಕಳ 600 ವೀಡಿಯೊ ಪ್ರಸಾರ

ಇಸ್ಲಾಮಾಬಾದ – ಪಾಕಿಸ್ತಾನಿ ಸೇನಾದಳದ ಖೈಬರ್ ಪಖ್ತುಂಖ್ವಾದ ಬುಡಕಟ್ಟು ಪ್ರದೇಶದಲ್ಲಿ ನಿಯೋಜಿಸಲಾದ ಅಧಿಕಾರಿಗಳು ಅನೇಕ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಈ ಪ್ರಕರಣದಲ್ಲಿ 100 ಮಕ್ಕಳ 600ಕ್ಕೂ ಹೆಚ್ಚು ವಿಡಿಯೋಗಳು ಪ್ರಸಾರವಾಗಿದೆ. ಈ ಮಕ್ಕಳ ವಯಸ್ಸು 14 ವರ್ಷಕ್ಕಿಂತ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹಸನ್ ಅಜರ್ ಹಯಾತ್ ಅವರು `ಕೋರ್ಟ ಆಫ್ ಎನ್ಕ್ವಾಯರಿ’ಯ ಆದೇಶ ನೀಡಿದ್ದಾರೆ. ಪೊಲೀಸರು ಈ ಪ್ರದೇಶದ ಅಂಗಡಿಕಾರ ತಾಹಿರ ಕಬಾಡಿಯನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿಸಲಾಗಿದೆ.

1. ಪೊಲೀಸರು ನೀಡಿದ ಮಾಹಿತಿಯನುಸಾರ ತಾಹಿರ ಕಬಾಡಿಯು ಸೇನಾದಳದ ನಿಕಟವರ್ತಿಯಾಗಿದ್ದನು. ಅವನು ಸೇನಾ ಅಧಿಕಾರಿಗಳಿಗೆ ಬಡ ಮಕ್ಕಳನ್ನು ಪೂರೈಸುತ್ತಿದ್ದನು. ಅವನು ಚಿಕ್ಕ ಮಕ್ಕಳಿಗೆ ಆಮಿಷ ತೋರಿಸಿ, ಅಧಿಕಾರಿಗಳ ಬಳಿಗೆ ಕಳುಹಿಸುತ್ತಿದ್ದನು. ಹಾಗೆಯೇ ಚಿಕ್ಕ ಮಕ್ಕಳ ಲೈಂಗಿಕ ಕಿರುಕುಳದ ವಿಡಿಯೋಗಳನ್ನೂ ಮಾಡುತ್ತಿದ್ದನು. ಅವನು ಮಕ್ಕಳ ಪೋಷಕರಿಂದ ಹಣವನ್ನು ವಸೂಲಿ ಮಾಡುತ್ತಿದ್ದನು.

2. ಖುರ್ರಾಮ್‌ನ ಸ್ಥಳೀಯ ಜನರು, ಸೇನಾದಳದ ಕೆಲವು ಅಧಿಕಾರಿಗಳ ಮೇಲೆ ಈ ಹಿಂದೆಯೂ ಚಿಕ್ಕ ಮಕ್ಕಳನ್ನು ಲೈಂಗಿಕವಾಗಿ ಶೋಷಣೆ ಮಾಡಲಾಗಿದೆಯೆಂದು ಆರೋಪಿಸಲಾಗಿದೆ; ಆದರೆ ಪಾಕಿಸ್ತಾನಿ ಸೇನಾದಳದ ಹಿರಿಯ ಅಧಿಕಾರಿಗಳು ಪೊಲೀಸರ ಮೇಲೆ ಒತ್ತಡ ಹೇರಿ ಆರೋಪಿಗಳನ್ನು ಬಿಡುಗಡೆಗೊಳಿಸಿತ್ತು, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನಿ ಸೇನಾಧಿಕಾರಿಯ ಕಾಮುಕತೆಯನ್ನು ತಿಳಿಯಿರಿ !