Trudeau On Nijjar Murder: ‘ಕೆನಡಾವು ಕಾನೂನಿನ ರಾಜ್ಯವಿರುವ ದೇಶವಾಗಿದೆಯಂತೆ !’ – ಪ್ರಧಾನ ಮಂತ್ರಿ ಟ್ರುಡೊ

ನಿಜ್ಜರ್ ಹತ್ಯೆ ಪ್ರಕರಣದಲ್ಲಿ 3 ಭಾರತೀಯರ ಬಂಧನ

ಒಟಾವಾ (ಕೆನಡಾ) – ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ 3 ಭಾರತೀಯರನ್ನು ಬಂಧಿಸಿದ ನಂತರ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಹೇಳಿಕೆ ಹೊರಬಿದ್ದಿದೆ. ಅವರು, ಕೆನಡಾ ಕಾನೂನಿನ ರಾಜ್ಯವಿರುವ ದೇಶ ಎಂದು ಹೇಳಿದರು. ಇದು ಬಲಿಷ್ಠ ಮತ್ತು ಸ್ವತಂತ್ರ ನ್ಯಾಯಾಂಗವನ್ನು ಹೊಂದಿದೆ. ಈ ಪ್ರಕರಣದಲ್ಲಿ ಕೆನಡಾ ಪೊಲೀಸರು ಕರಣ್‌ಪ್ರೀತ್ ಸಿಂಗ್, ಕಮಲ್‌ಪ್ರೀತ್ ಸಿಂಗ್ ಮತ್ತು ಕರಣ್ ಬರಾಡ ಅವರನ್ನು ಬಂಧಿಸಿದ್ದಾರೆ.

ಟ್ರುಡೋ ತಮ್ಮ ಮಾತನ್ನು ಮುಂದುವರೆಸಿ, ನಮ್ಮ ನಾಗರಿಕರನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ. ತನಿಖೆ ಕೇವಲ ಈ ಮೂವರಿಗೆ ಮಾತ್ರ ಸೀಮಿತವಾಗದೆ ಮುಂದುವರಿಯಲಿದೆ. ಸಿಖ್ ಸಮುದಾಯದ ಜನರಲ್ಲಿ ಅಭದ್ರತೆ ಹೆಚ್ಚಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಬೇರೆ ದೇಶಗಳಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವವರಿಗೆ ಆಶ್ರಯ ನೀಡುವುದು ಕಾನೂನಿನ ರಾಜ್ಯದಲ್ಲಿ ನಡೆಯುತ್ತದೆಯೇ ? ಬೇರೆ ದೇಶದಲ್ಲಿ ಅಶಾಂತಿ ಹರಡುವುದು ಕಾನೂನು ಉಲ್ಲಂಘನೆಯಲ್ಲವೇ?