ದೇಶದಾದ್ಯಂತ ೮೭೦ ಕ್ಕೂ ಅಧಿಕ ಕಡೆಗಳಲ್ಲಿ ಸಾಮೂಹಿಕ ಗದಾಪೂಜೆ !

ರಾಮರಾಜ್ಯಕ್ಕಾಗಿ ಆಧ್ಯಾತ್ಮಿಕ ಬಲ ಪಡೆಯಲು ಹಿಂದೂ ಜನಜಾಗೃತಿ ಸಮಿತಿ ಮತ್ತು ಸಮವಿಚಾರಿ ಸಂಘಟನೆಗಳಿಂದ ಪ್ರಯತ್ನ

ಬೆಂಗಳೂರಿನ ಯಲಹಂಕ ನ್ಯೂಟೌನ್‌ದಲ್ಲಿನ ಶ್ರೀವೀರಾಂಜನೇಯ ದೇವಸ್ಥಾನದಲ್ಲಿನ ಗದಾಪೂಜೆಯ ನಂತರ ರಾಮರಾಜ್ಯ ಸ್ಥಾಪನೆಯ ಪ್ರತಿಜ್ಞೆ ಮಾಡುತ್ತಿರುವ ಭಕ್ತರು

ಬೆಂಗಳೂರು – ಶ್ರೀ ಹನುಮಂತ ಜಯಂತಿಯ ನಿಮಿತ್ತ ‘ಗದಾ ಪೂಜೆ’ಯ ಮಾಧ್ಯಮದಿಂದ ಹಿಂದೂಗಳಲ್ಲಿ ಶೌರ್ಯ ಜಾಗೃತಗೊಳಿಸಲು ಹಾಗೂ ರಾಮರಾಜ್ಯದ ಕಾರ್ಯಕ್ಕಾಗಿ ಆಧ್ಯಾತ್ಮಿಕ ಬಲಪ್ರಾಪ್ತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮವಿಚಾರಿ ಹಿಂದುತ್ವವಾದಿ ಸಂಘಟನೆಗಳಿಂದ ದೇಶದಾದ್ಯಂತ ೮೭೦ ಕಡೆಗಳಲ್ಲಿ ಸಾಮೂಹಿಕ ‘ಗದಾಪೂಜೆ’ಯನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ರಾಮರಾಜ್ಯದ ಸ್ಥಾಪನೆಗಾಗಿ ಸಾಮೂಹಿಕ ಪ್ರತಿಜ್ಞೆ ಮಾಡಲಾಯಿತು. ಕರ್ನಾಟಕದ ಬಾಗಲಕೋಟೆ, ಬೆಳಗಾವಿ ಧಾರವಾಡ, ಶಿವಮೊಗ್ಗ, ಮಂಗಳೂರು ಮತ್ತು ಬೆಂಗಳೂರು ಸೇರಿದಂತೆ ೪೦ ಕ್ಕೂ ಹೆಚ್ಚಿನ ಕಡೆಗಳಲ್ಲಿ ಗದಾಪೂಜೆ ನೆರವೇರಿತು.

ಬೆಂಗಳೂರಿನ ಚಂದಾಪುರದಲ್ಲಿ ನಡೆದ ಹನುಮಾನ ಜಯಂತಿಯಂದು ಪೂಜೆ ಮಾಡುತ್ತಿರುವ ಧರ್ಮಪ್ರೇಮಿಗಳು

ರಾಮರಾಜ್ಯದ ಸ್ಥಾಪನೆಗಾಗಿ ಹಿಂದೂಗಳು ಹನುಮಂತನಂತೆ ಭಕ್ತಿ ಮತ್ತು ಶೌರ್ಯವನ್ನು ಹೆಚ್ಚಿಸುವುದು ಆವಶ್ಯಕ ! – ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಮೋಹನ ಗೌಡ

ಹನುಮಂತನು ದೈವೀ ಗದೆಯಿಂದ ಶಕ್ತಿಶಾಲಿ ಅಸುರರು ಮತ್ತು ರಾಕ್ಷಸರನ್ನು ಸಂಹರಿಸಿ ಶ್ರೀರಾಮಚಂದ್ರರ ರಾಮರಾಜ್ಯಕ್ಕಾಗಿ ದೊಡ್ಡ ಕೊಡುಗೆಯನ್ನು ನೀಡಿದನ. ಮಹಾಭಾರತದ ಯುದ್ಧದಲ್ಲಿಯೂ ಮಾರುತಿಯು ಅರ್ಜುನನ ರಥದ ಮೇಲೆ ಕುಳಿತು ಪಾಂಡವರಿಗೆ ಧರ್ಮಯುದ್ಧವನ್ನು ಗೆಲ್ಲಲು ದೈವೀ ಸಹಾಯ ಮಾಡಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯದ ಸ್ಥಾಪನೆಗಾಗಿಯೂ ಸಮರ್ಥ ರಾಮದಾಸ ಸ್ವಾಮಿಗಳು ಮಾರುತಿಯ ಮೂರ್ತಿಯನ್ನು ೧೧ ಕಡೆ ಸ್ಥಾಪಿಸಿ ಮಾವಳೆಯರಿಗೆ (ಶಿವಾಜಿ ಮಹಾರಾಜರ ಸೈನಿಕರಿಗೆ) ಬಲಪ್ರಾಪ್ತಿ ಮಾಡಿಕೊಟ್ಟಿದ್ದರು. ಈಗ ಪುನಃ ೫೦೦ ವರ್ಷಗಳ ನಂತರ ಇನ್ನೊಮ್ಮೆ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ (ಶ್ರೀರಾಮನ ಬಾಲಕರೂಪ) ವಿರಾಜ ಮಾನರಾಗಿದ್ದಾರೆ. ಇಂತಹ ಸಮಯದಲ್ಲಿ ನಾವು ಪುನಃ ರಾಮರಾಜ್ಯವನ್ನು ಸ್ಥಾಪಿಸಲು ಮಾರುತಿಯಂತಹ ಭಕ್ತಿ ಹಾಗೂ ಶೂರತ್ವವು ಅತ್ಯಂತ ಅವಶ್ಯಕವಾಗಿದೆ. ಈ ಉದ್ದೇಶವನ್ನು ಗಮನದಲ್ಲಿಟ್ಟು ಶ್ರೀ ಹನುಮಾನ ಜಯಂತಿಯ ಮಂಗಳ ದಿನದಂದು ವಿವಿಧ ಕಡೆಗಳಲ್ಲಿ ಗದಾಪೂಜೆಯನ್ನು ಆಯೋಜಿಸಲಾಗಿತ್ತು.