ರೋಹಿತ ವೇಮುಲಾ ದಲಿತನಾಗಿರಲಿಲ್ಲ ! – ತೆಲಂಗಾಣ ಪೊಲೀಸ್

ದಲಿತ ಅಲ್ಲ ಎಂದು ಬೆಳಕಿಗೆ ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು, ಭಯದಿಂದ ರೋಹಿತ ಆತ್ಮಹತ್ಯೆ ಮಾಡಿಕೊಂಡಿದ್ದ !

ಭಾಗ್ಯನಗರ (ತೆಲಂಗಾಣ) – ವಿದ್ಯಾರ್ಥಿ ರೋಹಿತ ವೇಮುಲಾನ ಸಾವಿನ ೮ ವರ್ಷದ ನಂತರ ತೆಲಂಗಾಣ ಪೋಲೀಸರು ಪ್ರಕರಣವನ್ನು ಮುಚ್ಚಿರುವ ವರದಿ ನೀಡಿದೆ. ರೋಹಿತನು ದಲಿತನಾಗಿರಲಿಲ್ಲ ಎಂದು ಇದರಲ್ಲಿ ಹೇಳಿದ್ದಾರೆ. ಪೊಲೀಸರು ಉಚ್ಚ ನ್ಯಾಯಾಲಯದಲ್ಲಿ, ರೋಹಿತಗೆ ತಾನು ದಲಿತನಲ್ಲ ಎಂದು ತಿಳಿದಿತ್ತು. ಜಾತಿ ಬೆಳಕಿಗೆ ಬಂದ ನಂತರ, ತನ್ನ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವರು, ಈ ಭಯದಿಂದ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದರಿಂದ ಈ ಪ್ರಕರಣದಲ್ಲಿ ಯಾರ ಮೇಲೆ ಆರೋಪ ಹೋರಿಸಲಾಗಿತ್ತೋ, ಅವರೆಲ್ಲರ ಖುಲಾಸೆಗೊಳಿಸಲಾಗಿದೆ. ಇದರಲ್ಲಿ ಭಾಜಪದ ಸಿಕಂದರಾಬಾದಿನ ತತ್ಕಾಲಿನ ಸಂಸದ ಹಾಗೂ ಈಗಿನ ಹರಿಯಾಣದ ರಾಜ್ಯಪಾಲ ಭಂಡಾರು ದತ್ತಾತ್ರೇಯ, ವಿಧಾನ ಪರಿಷತ್ತಿನ ಸದಸ್ಯ ಶಾಸಕ ಎನ್. ರಾಮಚಂದ್ರ ರಾವ, ಮಾಜಿ ಕುಲಗುರು ಅಪ್ಪಾ ರಾವ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನಾಯಕರ ಸಹಿತ ಅನೇಕ ಪ್ರಮುಖ ರಾಜಕೀಯ ವ್ಯಕ್ತಿಗಳನ್ನು ಅಮಾಯಕರೆಂದು ಬಿಡುಗಡೆಗೊಳಿಸಲಾಗಿದೆ. ಪೊಲೀಸರು ಮಾರ್ಚ್ ೨೧ ರಂದು ವರದಿ ಪ್ರಸ್ತುತ ಪಡಿಸಿತ್ತು. ಅದರಲ್ಲಿ, ಅನುಸೂಚಿತ ಜಾತಿಯ ಪ್ರಮಾಣ ಪತ್ರದ ಮೂಲಕ ರೋಹಿತನು ಶೈಕ್ಷಣಿಕ ಯಶಸ್ಸು ಪಡೆದಿದ್ದನು ಎಂದು ಹೇಳಲಾಗಿದೆ.

ಇದರ ಬಗ್ಗೆ ರೋಹಿತನ ತಾಯಿ ಮತ್ತು ಸಹೋದರ ರಾಜ ಇವರು ಮಾತ್ರ ಪೊಲೀಸರ ವರದಿಯ ಬಗ್ಗೆ ಪ್ರಶ್ನೆ ಕೇಳಿದ್ದರು. ಪರಿಶಿಷ್ಟ ಜಾತಿ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಣಯ ತೆಗೆದುಕೊಳ್ಳುವರು. ಇಬ್ಬರೂ ಈ ವರದಿಯ ಬಗ್ಗೆ ಪ್ರಶ್ನೆ ಕೇಳಿದ ನಂತರ ತೆಲಂಗಾಣದ ಪೊಲೀಸ ಮಹಾ ಸಂಚಾಲಕರು, ನಾವು ಈ ಪ್ರಕರಣವನ್ನು ಮತ್ತೊಮ್ಮೆ ವಿಚಾರಣೆ ನಡೆಸುವೆವು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ರೋಹಿತ ವೇಮುಲಾ ಆತ್ಮಹತ್ಯೆ ಘಟನೆಯ ನಂತರ ತಥಾಕಥಿತ ಜಾತ್ಯತೀತವಾದಿಗಳು ಮತ್ತು ದಲಿತರ ಹಿತೈಶಿ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಆಕಾಶ ಪಾತಾಳ ಒಂದು ಮಾಡಿತ್ತು. ಆದ್ದರಿಂದ ಈಗ ರಾಹುಲ ಗಾಂಧಿ ಸಹಿತ ಜನರೇ ಕಾಂಗ್ರೆಸ್ಸಿಗೆ ಪ್ರಶ್ನೆ ಕೇಳಬೇಕು !