ಪ್ರಜ್ವಲ್ ರೇವಣ್ಣ ಭಗವಾನ್ ಕೃಷ್ಣನ ದಾಖಲೆಯನ್ನು ಮುರಿಯಲು ಬಯಸಿದ್ದರು

  • ಕಾಂಗ್ರೆಸ್ ಸಚಿವ ರಾಮಪ್ಪ ತಿಮ್ಮಪುರ ಅಸಮಾಧಾನಕಾರಕ ಹೇಳಿಕೆ !

  • ಮಾಜಿ ಪ್ರಧಾನಿ ದೇವೇಗೌಡ ಅವರ ಮೊಮ್ಮಗ ಪ್ರಜ್ವಲ ರೇವಣ್ಣ ಅವರ ವಿರುದ್ಧ ಸಾವಿರಾರು ಮಹಿಳೆಯರ ಲೈಂಗಿಕ ಶೋಷಣೆಯ ಆರೋಪ !

ಬೆಂಗಳೂರು (ಕರ್ನಾಟಕ) – ಪ್ರಜ್ವಲ್ ರೇವಣ್ಣ ಇವರಂತಹ ಹೊಲಸು ವಿಚಾರದ ವ್ಯಕ್ತಿಯನ್ನು ಈ ದೇಶದಲ್ಲಿ ಎಲ್ಲಿಯೂ ಕಂಡಿಲ್ಲ. ಬಹುಶಃ ಅವರು ಇದರಲ್ಲಿ, ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮಾಡಲು ಬಯಸಿದ್ದರು. ಮಹಿಳೆಯರು ಭಕ್ತಿ ಭಾವದಿಂದ ಭಗವಾನ್ ಶ್ರೀ ಕೃಷ್ಣನ ಜೊತೆಗೆ ಇರುತ್ತಿದ್ದರು. ಬಹುಶಃ ಪ್ರಜ್ವಲ್ ರೇವಣ್ಣ ಭಗವಾನ್ ಕೃಷ್ಣನ ದಾಖಲೆಯನ್ನು ಮುರಿಯಲು ಬಯಸಿದ್ದರು ಎಂದು ಕರ್ನಾಟಕದ ಉತ್ಪಾದನಾ ಶುಲ್ಕ ಸಚಿವ ರಾಮಪ್ಪ ತಿಮ್ಮಪುರ ಅವರು ಅಸಮಾಧಾನಕರ ಹೇಳಿಕೆ ನೀಡಿದರು. ತಿಮ್ಮಪುರ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲಾಗುತ್ತಿವೆ. ಜನತಾದಳ (ಸೆಕ್ಯುಲರ್) ಪಕ್ಷದ ನಾಯಕ ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರ ಮೊಮ್ಮಗ ಪ್ರಜ್ವಲ ರೇವಣ್ಣ ಅವರ ವಿರುದ್ಧ ಸಾವಿರಾರು ಮಹಿಳೆಯರ ಲೈಂಗಿಕ ಶೋಷಣೆ ಮಾಡಿರುವ ಆರೋಪವಿದೆ.

ತಿಮ್ಮಪುರ ಅವರ ಹೇಳಿಕೆಯ ಬಗ್ಗೆ ಭಾಜಪದ ನಾಯಕ ಮೋಹನ ಕೃಷ್ಣ ಅವರು ಟೀಕಿಸುತ್ತಾ, ಕಾಂಗ್ರೆಸ್ಸಿಗರು ಯಾವಾಗ ತಮ್ಮ ಪ್ರಣಾಳಿಕೆ ಬಿಡುಗಡೆಗೊಳಿಸಿದರೊ ಅಂದಿನಿಂದ ಅವರ ದಿವಾಳಿತನ ಮುಂದೆ ಕಾಣುತ್ತಿದೆ. ಅವರೀಗ ಸನಾತನ ಧರ್ಮವನ್ನು ಗೇಲಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಹಿಂದೂ ಧರ್ಮ ಒಟ್ಟಾಗಿರಲು ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ . ರಾಮಪ್ಪ ತಿಮ್ಮಪುರ ಅವರ ಹೇಳಿಕೆ ನಾಚಿಕೆಗೇಡಿತನದಾಗಿದ್ದು ಹಿಂದೂ ಧರ್ಮದ ದೇವತೆಗಳನ್ನು ಅವಮಾನ ಮಾಡಿರುವುದರಿಂದ ಅವರನ್ನು ಸಚಿವ ಸಂಪುಟದಿಂದ ತಕ್ಷಣ ತೆರವುಗೊಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಮೋಹನ ಕೃಷ್ಣ ಆಗ್ರಹಿಸಿದರು.

ಇಸ್ಕಾನಿನ ಉಪಾಧ್ಯಕ್ಷ ರಾಧಾ ರಮಣ ದಾಸ್: ಇತ್ತೀಚೆಗೆ ಸನಾತನ ಧರ್ಮದ ಅವಮಾನ ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ

ರಾಷ್ಟ್ರೀಯ ಅಧ್ಯಕ್ಷ ಖರ್ಗೆ ಅವರು ಕೂಡ ಅಕ್ಷೇಪಾರ್ಹ ಹೇಳಿಕೆ ನೀಡಿದ್ದರು !

ಕಾಂಗ್ರೆಸ್ಸಿನ ಸಚಿವರಷ್ಟೇ ಅಲ್ಲ, ಅವರ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಮೂರು ದಿನಗಳ ಹಿಂದೆ ಛತ್ತೀಸ್ಗಡದ ಜಾಂಜಗಿರ – ಚಂಪಾ ಲೋಕಸಭಾ ಮತದಾರ ಕ್ಷೇತ್ರದಲ್ಲಿನ ಪ್ರಚಾರ ಸಭೆಯಲ್ಲಿ ಮಾತನಾಡುವಾಗ, ನಮ್ಮ ಅಭ್ಯರ್ಥಿ ಶಿವಕುಮಾರ್ ದಹರಿಯಾ ಇವರ ಹೆಸರಿನಲ್ಲಿಯೇ ಶಿವ ಇದ್ದಾನೆ. ಹಾಗಾಗಿ ಅವರು ರಾಮನನ್ನು (ಭಾಜಪದ ರಾಜಕಾರಣವನ್ನು) ಸರಿಯಾಗಿ ಎದುರಿಸುವರು ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

  • ತಿಮ್ಮಪುರ ಅವರಂತಹ ಹಿಂದೂ ದ್ವೇಷಿ ಕಾಂಗ್ರೆಸ್ಸಿಗರಿಗೆ ಹಿಂದುಗಳು ಲೋಕಸಭಾ ಚುಣಾವಣೆಯಲ್ಲಿ ಪಾಠ ಕಲಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ !
  • ಇತರ ಧರ್ಮದವರ ಬಗ್ಗೆ ಕಾಂಗ್ರೆಸ್ಸಿಗರು ಈ ರೀತಿಯ ಹೇಳಿಕೆ ನೀಡಿದ್ದರೆ, ಆಗ ಅವರ ಸರ್ ತನ್ ಸೆ ಜುದಾ (ಶಿರಚ್ಛೇದ) ಮಾಡುವ ಫತ್ವಾ ಹೊರಡಿಸುತ್ತಿದ್ದರು !