ಭಾರತದ ಬಗ್ಗೆ ಮಾತನಾಡುವ ಪಾಕಿಸ್ತಾನದ ಸಂಪೂರ್ಣ ಇತಿಹಾಸವೇ ಅನುಮಾನಾಸ್ಪದ !

ವಿಶ್ವ ಸಂಸ್ಥೆಯಲ್ಲಿ ಮತ್ತೊಮ್ಮೆ ಪಾಕಿಸ್ತಾನಕ್ಕೆ ತಪರಾಕಿ ಹಾಕಿದ ಭಾರತ !

ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ರುಚಿರಾ ಕಾಂಬೋಜ್

ನ್ಯೂಯಾರ್ಕ್ (ಅಮೇರಿಕಾ) – ಪಾಕಿಸ್ತಾನದ ಇತಿಹಾಸವೇ ಎಲ್ಲಾ ವಿಷಯಗಳಲ್ಲಿ ಅನುಮಾನಾಸ್ಪದವಾಗಿದೆ ಎಂದು ಭಾರತ ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಟೀಕಿಸಿತು. ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪಾಕಿಸ್ತಾನದ ಪ್ರತಿನಿಧಿಯಿಂದ ಭಾರತದ ವಿರುದ್ಧ ಹೇಳಿಕೆ ನೀಡಲಾಯಿತು. ಅವರು ಶ್ರೀರಾಮ ಮಂದಿರ ಮತ್ತು ಪೌರತ್ವ ಸುಧಾರಣೆ ಕಾನೂನಿನ ಬಗ್ಗೆ ಹೇಳಿಕೆ ನೀಡಿದ್ದರು. ಈ ಬಗ್ಗೆ ಭಾರತವು ಈ ರೀತಿ ಪ್ರತ್ಯುತ್ತರ ನೀಡಿತು:

ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ಮಾತನಾಡಿ,

೧. ಜಗತ್ತಿನಲ್ಲಿ ಕಠಿಣ ಕಾಲದಲ್ಲಿ ನಾವು ಶಾಂತಿ ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಈ ಹೇಳಿಕೆ ಶಿಷ್ಟಾಚಾರದ ವಿರುದ್ಧವಾಗಿದೆ. ಅವರ ಇಂತಹ ಸ್ವಭಾವ ನಮ್ಮ ಪ್ರಯತ್ನಕ್ಕೆ ಅಪಾಯ ತಂದೊಡ್ಡಬಹುದು .

೨. ಭಾರತ ಕೇವಲ ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಧರ್ಮದ ಜನ್ಮಸ್ಥಾನವಾಗಿಲ್ಲ, ಅದು ಇಸ್ಲಾಂ, ಕ್ರೈಸ್ತ, ಜ್ಯೂ, ಮತ್ತು ಪಾರಸಿ ಧರ್ಮದ ಕೇಂದ್ರವೂ ಆಗಿದೆ. ಅನೇಕ ಕಾಲದಿಂದ ಈ ಧರ್ಮದ ಜನರು ಇಲ್ಲಿ ಆಶ್ರಯ ಪಡೆದಿದ್ದಾರೆ. ವಿಶ್ವದಲ್ಲಿ ಭಾರತದ ವೈವಿಧ್ಯತೆಯು ಅತಿದೊಡ್ಡ ಪುರಾವೆಯಾಗಿದೆ.

೩. ಪಾಕಿಸ್ತಾನದಿಂದ ರಾಜತಾಂತ್ರಿಕ ಮೌಲ್ಯದ ಪಾಲನೆ ಮಾಡುವ ಬಗ್ಗೆ ನಾವು ಅಪೇಕ್ಷಿಸುತ್ತೇವೆ. ಪ್ರತಿಯೊಂದು ವಿಷಯದಲ್ಲಿ ಎಲ್ಲಕ್ಕಿಂತ ಅನುಮಾನಸ್ಪದ ಇತಿಹಾಸ ಹೊಂದಿರುವ ದೇಶದಿಂದ ಇಂತಹ ಅಪೇಕ್ಷೆ ಮಾಡುವುದು ಕೂಡ ತಪ್ಪಾಗಿದೆಯೇ?

೪. ಭಯೋತ್ಪಾದನೆಯು ಶಾಂತಿ ಮತ್ತು ಎಲ್ಲಾ ಧಾರ್ಮಿಕ ಮೌಲ್ಯದ ವಿರುದ್ಧವಾಗಿದೆ. ಅದು ಭಿನ್ನಾಭಿಪ್ರಾಯ ನಿರ್ಮಾಣ ಮಾಡುತ್ತದೆ. ಶತ್ರುತ್ವಕ್ಕೆ ಪ್ರೋತ್ಸಾಹ ನೀಡುತ್ತದೆ ಮತ್ತು ಧಾರ್ಮಿಕ ಮೌಲ್ಯಗಳನ್ನು ಅಶಕ್ತ ಗೊಳಿಸುತ್ತದೆ. ಭಾರತದ ವಿಶ್ವಾಸ ಏನೆಂದರೆ ಎಲ್ಲಾ ದೇಶಗಳು ಶಾಂತಿಯ ಭಾವನೆಯನ್ನು ಹರಡಲು ಒಗ್ಗಟ್ಟಾಗಿ ಕೆಲಸ ಮಾಡಬೇಕು, ಇದರ ಅವಶ್ಯಕತೆ ಇದೆ ಎಂದು ಕಾಂಬೋಜ್ ಹೇಳಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನಕ್ಕೆ ಭಾರತವು ಅನೇಕ ಬಾರಿ ವಿಶ್ವಸಂಸ್ಥೆಯಲ್ಲಿ ಮತ್ತು ಇತರ ಅಂತರಾಷ್ಟ್ರೀಯ ವೇದಿಕೆಯಲ್ಲಿ ತಪರಾಕಿ ನೀಡಿದೆ, ಆದರೂ ಅದು ನಾಚಿಕೆಯಿಲ್ಲದೆ ಪದೇ-ಪದೇ ಭಾರತದ ವಿರುದ್ಧ ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ಪಾಕಿಸ್ತಾನದಂತಹ ದೇಶಕ್ಕೆ ಕೇವಲ ಮಾತಿನಿಂದಲ್ಲ, ಅದಕ್ಕೆ ತಕ್ಕ ಭಾಷೆಯಲ್ಲಿ ಉತ್ತರ ನೀಡುವ ಅವಶ್ಯಕತೆಯಿದೆ !