Shopping Complex Thiruvannamalai : ತಿರುವಣ್ಣಾಮಲೈನ ಶ್ರೀ ಅರುಣಾಚಲೇಶ್ವರ ದೇವಸ್ಥಾನದ ಮುಂಭಾಗದಲ್ಲಿ ‘ಶಾಪಿಂಗ್ ಕಾಂಪ್ಲೆಕ್ಸ್’ ನಿರ್ಮಿಸುವುದಿಲ್ಲ!

ಉಚ್ಚನ್ಯಾಯಾಲಯದಲ್ಲಿ ‘ತಮಿಳುನಾಡು ಹಿಂದೂ ಧರ್ಮದಾಯ(ದತ್ತಿ) ಇಲಾಖೆ’ಯ ಮಾಹಿತಿ !

ಚೆನ್ನೈ – ತಿರುವಣ್ಣಾಮಲೈನಲ್ಲಿರುವ ಶ್ರೀ ಅರುಣಾಚಲೇಶ್ವರ ದೇವಸ್ಥಾನದ ರಾಜಗೋಪುರದ ಎದುರು ‘ಶಾಪಿಂಗ್ ಕಾಂಪ್ಲೆಕ್ಸ್’ ನಿರ್ಮಿಸುವುದಿಲ್ಲ ಎಂದು ತಮಿಳುನಾಡು ಹಿಂದೂ ಧರ್ಮದಾಯ ಇಲಾಖೆ (ಎಚ್.ಆರ್.ಅಂಡ್ ಸಿ. ಇ. ) ಉಚ್ಚನ್ಯಾಯಾಲಯದ ಮುಂದೆ ಹೇಳಿಕೆ ನೀಡಿದೆ. ಇದು ದೇಗುಲದ ಭಕ್ತರಿಗೆ ಸಿಕ್ಕ ದೊಡ್ಡ ವಿಜಯವೆಂದು ದೇವಸ್ಥಾನದ ಕಾರ್ಯಕರ್ತ ಟಿ.ಆರ್. ರಮೇಶ್ ಅವರು 30 ಏಪ್ರಿಲ್ 2024 ರಂದು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಟಿ.ಆರ್. ರಮೇಶ್

ಕಳೆದ ವರ್ಷ ನವೆಂಬರ್‌ನಲ್ಲಿ ಈ ಸೂತ್ರವನ್ನು ನ್ಯಾಯಾಲಯದ ಮುಂದೆ ತಂದಾಗ, ಪ್ರಕರಣದ ಆಲಿಕೆ(ವಿಚಾರಣೆ) ನಡೆಸಿದ ವಿಭಾಗೀಯ ಪೀಠವು ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣವನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆದೇಶ ನೀಡಿತ್ತು.

ಈ ವಿಷಯದ ಬಗ್ಗೆ ಟಿ. ಆರ್. ರಮೇಶ್ ಮಾತನಾಡಿ, ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣದಿಂದ ಪಾರಂಪರಿಕ ತಾಣದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಹಿಂದುತ್ವನಿಷ್ಠ ನಿಯತಕಾಲಿಕೆ ( ಪತ್ರಿಕೆ) ‘ಸ್ವರಾಜ್ಯ’ಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.