ಕರ್ನಾಟಕದ ಕಾಂಗ್ರೆಸ್ ಶಾಸಕ ರಾಜು ಕಾಗೆ ಆಕ್ರೋಶದ ಹೇಳಿಕೆ
ಬೆಳಗಾವಿ – ಕಾಂಗ್ರೆಸ ಶಾಸಕ ರಾಜು ಕಾಗೆಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ತೀವ್ರ ಆಕ್ರೋಶದ ಹೇಳಿಕೆ ನೀಡಿದ್ದಾರೆ. ಮೋದಿಯವರ ಹುರಿದುಂಬಿಸುವ ಜಯಘೋಷ ಮಾಡುವ ಯುವಕರನ್ನು ಟೀಕಿಸಿದ ಕಾಗೆಯವರು, ನಾನು ಪದವೀಧರನಾಗಿದ್ದು ನನಗೆ ಬುದ್ಧಿಯಿದೆ. ನಾನು ಅನಕ್ಷರಸ್ಥನಲ್ಲ. ನಾನೂ ಕೂಡ ದೇಶವನ್ನು ನಡೆಸಬಲ್ಲೆ ಎಂಬ ವಿಶ್ವಾಸ ನನಗಿದೆ. ನಾಳೆ ಪ್ರಧಾನಮಂತ್ರಿ ಸತ್ತರೆ ಯಾರೂ ಪ್ರಧಾನಮಂತ್ರಿ ಆಗುವುದಿಲ್ಲವೇ? ಈ ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದೆ. ಇಷ್ಟೊಂದು ಜನರಲ್ಲಿ ಪ್ರಧಾನಮಂತ್ರಿಯಾಗಬಲ್ಲ ಒಬ್ಬನೇ ಒಬ್ಬ ವ್ಯಕ್ತಿ ಕೂಡ ಇಲ್ಲವೇ ? ಎಂದು ಖಾರವಾಗಿ ನುಡಿದರು.
ಶಾಸಕ ಕಾಗೆ ಅವರ ಈ ಟೀಕೆಗೆ ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದೆ. ‘ಕಾಂಗ್ರೆಸ್ ನಾಯಕರು ಪ್ರಧಾನಮಂತ್ರಿ ಸಾವಿಗೆ ಕಾಯುತ್ತಿದ್ದಾರೆಯೇ?’ ಎಂದು ಬಿಜೆಪಿ ‘ಎಕ್ಸ್’ ಮಾಧ್ಯಮದಲ್ಲಿ ಪ್ರಶ್ನೆ ಕೇಳಿದೆ. ಕೆಲವು ದಿನಗಳ ಹಿಂದೆ ಕೂಡ ಕಾಗೆಯವರು ಪ್ರಧಾನಮಂತ್ರಿಯವರ ಜೀವನಶೈಲಿಯನ್ನು ಟೀಕಿಸಿ, ಪ್ರಧಾನಿಯವರು ದುಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಅವರ ಬಟ್ಟೆ ಬೆಲೆ 4 ಲಕ್ಷ ರೂಪಾಯಿಗಳಾಗಿರುತ್ತವೆ ಎಂದು ಹೇಳಿದ್ದರು. ವಿಶೇಷವೆಂದರೆ ಕಾಗೆಯವರು ಮೊದಲು ಬಿಜೆಪಿಯಲ್ಲಿದ್ದರು 2019 ರಲ್ಲಿ ಕಾಂಗ್ರೆಸ್ ಸೇರಿದ್ದರು.
ಸಂಪಾದಕೀಯ ನಿಲುವುಇಂತಹ ಹೇಳಿಕೆಯು ಕಾಂಗ್ರೆಸ್ ನಾಯಕರ ಮನೋವೃತ್ತಿಯನ್ನು ಎತ್ತಿ ತೋರಿಸುತ್ತದೆ ! |