ನವ ದೆಹಲಿ – ಉತ್ತರಾಖಂಡ ಸರಕಾರವು ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಪರವಾನಗಿಯನ್ನು ತಕ್ಷಣದಿಂದ ಜಾರಿಯಾಗುವಂತೆ ಅಮಾನತುಗೊಳಿಸಿದೆ. ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರತಿಜ್ಞಾಪತ್ರದಲ್ಲಿ, ಹೇಳಿದಂತೆ ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ರಾಜ್ಯ ಪರವಾನಗಿ ಪ್ರಾಧಿಕಾರವು ಏಪ್ರಿಲ್ 15 ರಂದು ‘ದಿವ್ಯ ಫಾರ್ಮಸಿ’ ಮತ್ತು ‘ಪತಂಜಲಿ ಆಯುರ್ವೇದ’ ಉತ್ಪನ್ನಗಳ ಮೇಲೆ ಈ ಕ್ರಮ ಕೈಗೊಂಡಿದೆ.
ಏಪ್ರಿಲ್ 16 ರಂದು ಜಿಲ್ಲಾ ಔಷಧ ನಿರೀಕ್ಷಕರು ಯೋಗ ಋಷಿ ರಾಮದೇವ ಬಾಬಾ, ಶ್ರೀ. ಬಾಲಕೃಷ್ಣ, ದಿವ್ಯ ಫಾರ್ಮಸಿ ಮತ್ತು ಪತಂಜಲಿ ಆಯುರ್ವೇದ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದರು. ಈ ಮಾಹಿತಿಯನ್ನು ಕೇಂದ್ರ ಆಯುಷ್ ಸಚಿವಾಲಯಕ್ಕೂ ನೀಡಲಾಗಿದೆ.
ಈ ಕೆಳಗಿನ ಉತ್ಪನ್ನಗಳ ಪರವಾನಗಿ ಅಮಾನತು !
ಶ್ವಾಸಾರಿ ಗೋಲ್ಡ್, ಶ್ವಾಸಾರಿ ವಟಿ, ಶ್ವಾಸಾರಿ ಪ್ರವಾಹಿ, ಬ್ರಾನ್ಕೋಮ್, ಶ್ವಾಸಾರಿ ಅವಾಲೆಹ, ಮುಕ್ತಾ ವಟಿ ಎಕ್ಸ್‌ಟ್ರಾ ಪವರ್, ಲಿಪಿಡ್ರೋಮ್, ಬಿಪಿ ಗ್ರಿಟ್, ಮಧುಗ್ರಿಟ್, ಮಧುನಾಶಿನಿ ವಟಿ ಎಕ್ಸ್‌ಟ್ರಾ ಪವರ್, ಲಿವಾಮೃತ್ ಡವಾನ್ಸ್, ಲಿವೋಗ್ರಿಟ್, ಐಗ್ರಿಟ್ ಗೋಲ್ಡ್ ಮತ್ತು ಪತಂಜಲಿ ದೃಷ್ಟಿ ಐ ಡ್ರಾಪ್, ಈ ಉತ್ಪಾದನೆಗಳ ಪರವಾನಗಿಯನ್ನು ಅಮಾನತುಗೊಳಿಸಿದೆ.