Goldman Sachs Report: 2075 ರ ತನಕ ಪಾಕಿಸ್ತಾನ ಮತ್ತು ಇಂಡೋನೇಷ್ಯಾ ವಿಶ್ವದಲ್ಲಿ ಮೊದಲ 10 ಹಣಕಾಸು ವ್ಯವಸ್ಥೆಯ ಸಾಲಿನಲ್ಲಿ ಇರುವವು !

  • ವಿಶ್ವದಲ್ಲೇ ಅತ್ಯುತ್ತಮ ಬ್ಯಾಂಕ್‌ಗಳಲ್ಲಿ ಒಂದಾದ ‘ಗೋಲ್ಡ್‌ಮನ್ ಸ್ಯಾಕ್ಸ್’ ನ ಅಂದಾಜು

  • ಚೀನಾ ಪ್ರಥಮ ಹಾಗೂ ಭಾರತ ಎರಡನೇ ಸ್ಥಾನದಲ್ಲಿರುವ ಸಾಧ್ಯತೆ!

ನ್ಯೂಯಾರ್ಕ್ (ಅಮೇರಿಕಾ) – ಮುಂದಿನ 50 ವರ್ಷಗಳಲ್ಲಿ, ಅಂದರೆ 2075 ರ ವೇಳೆಗೆ, ವಿಶ್ವದ ಶ್ರೀಮಂತ ದೇಶಗಳ ಒಟ್ಟು ಆರ್ಥಿಕತೆಯು 235 ಟ್ರಿಲಿಯನ್ ಡಾಲರ್ಸ್ ಗಳಷ್ಟು ಇರುವುದು. ಇದರಲ್ಲಿ ಸುಮಾರು 50 ಟ್ರಿಲಿಯನ್ ಡಾಲರ್ಸ್ ಮುಸಲ್ಮಾನರ ಕೈಯಲ್ಲಿ ಇರಲಿದೆ, ಎಂದು ಜಗತ್ತಿನ ಅತ್ಯುತ್ತಮ ಬ್ಯಾಂಕ್ ಗಳಲ್ಲಿ ಒಂದಾಗಿರುವ ‘ಗೋಲ್ಡಮನ್ ಸ್ಯಾಕ್ಸ್’ ಅಂದಾಜಿಸಿದೆ. 2075 ರ ವರೆಗೆ ಮೊದಲ 10 ಹಣಕಾಸು ವ್ಯವಸ್ಥೆಯಲ್ಲಿ ಇಂಡೋನೇಷಿಯಾ, ಪಾಕಿಸ್ತಾನ, ನೈಜೀರಿಯಾ ಮತ್ತು ಈಜಿಪ್ಟ್ ಈ 4 ಮುಸಲ್ಮಾನ ದೇಶಗಳು ‘ಶ್ರೀಮಂತ ದೇಶ’ ಎಂದು ಹೊರಹೊಮ್ಮಬಹುದು, ಎಂದು ಈ ಬ್ಯಾಂಕ್ ಹೇಳಿದೆ. ಚೀನಾ ಮೊದಲು ಹಾಗೂ ಭಾರತ ಎರಡನೇ ಸ್ಥಾನದಲ್ಲಿರುವುದೆಂದು ಈ ಬ್ಯಾಂಕ್ ಹೇಳುತ್ತಿದೆ.

ಪ್ರಸ್ತುತ, ಇಂಡೋನೇಷ್ಯಾದ ಆರ್ಥಿಕತೆಯು 16 ನೇ, ನೈಜೀರಿಯಾ 31 ನೇ, ಈಜಿಪ್ಟ್ 32 ನೇ ಮತ್ತು ಪಾಕಿಸ್ತಾನದ ಆರ್ಥಿಕತೆಯು 41 ನೇ ಕ್ರಮಾಂಕದಲ್ಲಿದೆ. ಮುಂದಿನ 50 ವರ್ಷಗಳಲ್ಲಿ, ಈ ದೇಶಗಳ ಮಧ್ಯೆ ಪ್ರಮುಖ ಬದಲಾವಣೆಗಳಾಗಿ ಅವುಗಳ ಆರ್ಥಿಕತೆಯು ವೇಗವಾಗಿ ಬೆಳೆಯುವುದು, ಎಂದು ಗೋಲ್ಡ್ ಮನ್ ಸ್ಯಾಕ್ಸ್ ಹೇಳಿದೆ.