-
ತೃಣಮೂಲ ಕಾಂಗ್ರೆಸ್ಸಿನ ಮೇಲೆ ಆರೋಪ ಹೇರಿದ ಬಿಜೆಪಿ
-
೧೬ ಜನರಿಗೆ ಗಾಯ
ಕೊಲ್ಕತ್ತಾ(ಬಂಗಾಳ) – ಸಿಲಿಗುಡಿಯಲ್ಲಿ ‘ಜೈ ಶ್ರೀ ರಾಮ’ ಎಂದು ಘೋಷಣೆ ನೀಡಿದ್ದಕ್ಕೆ ನಮ್ಮ ಕಾರ್ಯಕರ್ತರ ಮೇಲೆ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಘಟನೆ ಬಳಿಕ ಬಿಜೆಪಿ ಸಿಲಿಗುಡಿ ಬಂದ್ ಗೆ ಕರೆ ನೀಡಿದೆ.
ಏಪ್ರಿಲ್ ೨೮ ರಂದು ‘ಜೈ ಶ್ರೀ ರಾಮ’ ಎಂದು ಹೇಳಿದ್ದಕ್ಕೆ ಬಿಜೆಪಿಯ ಬೂತ್ ಅಧ್ಯಕ್ಷ ನಂದ ಕಿಶೋರ್, ಅವರ ಕುಟುಂಬ ಮತ್ತು ಇತರ ಅನೇಕ ಕಾರ್ಯಕರ್ತರ ಮೇಲೆ ದಾಳಿ ಮಾಡಲಾಗಿದೆ ಎಂದು ಬಿಜೆಪಿ ದೂರಿದೆ. ಇದರಲ್ಲಿ ಒಟ್ಟು ೧೫ ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಿಜೆಪಿ ಪ್ರಕಾರ, ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ದಾಳಿಯ ನಂತರ ನಾವು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದೆವು. ಈ ದಾಳಿಯ ಪ್ರಕರಣದಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ ? ಇದರ ಯಾವುದೇ ಮಾಹಿತಿ ಇಲ್ಲಿಯವರೆಗೂ ದೊರೆತಿಲ್ಲ.
BJP workers hold protest at Matigara police station, alleging that TMC goons visited the booth president’s house and asked why they voted for BJP and why ‘Jai Shri Ram’ slogans were raised.@AdrijaSaha9 shares details with @AnchorAmitaW. pic.twitter.com/iu0keLv73U
— TIMES NOW (@TimesNow) April 29, 2024
ಸಂಪಾದಕೀಯ ನಿಲುವುಬಂಗಾಳವು ಹಿಂದುಗಳ ಪಾಲಿಗೆ ಇಸ್ಲಾಮಿ ರಾಜ್ಯದಂತಾಗಿದೆ. ಬಂಗಾಳದಲ್ಲಿ ಹಿಂದುಗಳ ರಕ್ಷಣೆ ಮಾಡುವುದಕ್ಕಾಗಿ ಕೇಂದ್ರ ಸರಕಾರದಿಂದ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ ! |