ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿ ಇವರ ವಿಚಾರಧನ !

ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಜ್ಞಾನಿ ಮತ್ತು ಅಜ್ಞಾನಿ ಇವರ ನಡವಳಿಕೆಯಲ್ಲಿನ ವೈವಿಧ್ಯಗಳು !

ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿ

೧. ತಾಯಿ-ತಂದೆಯರಿಂದ ದೊರಕಿದ ಸಂಸ್ಕಾರಗಳಿಂದ ಇಹಲೋಕ ಮತ್ತು ಪರಲೋಕಗಳಲ್ಲಿನ ಕಲ್ಯಾಣ ಅನುಭವಿಸುವುದು

‘ಪ.ಪೂ. ಗುರುದೇವರಿಗೆ ಅವರ ದೇವರಂತಿದ್ದ ತಾಯಿ-ತಂದೆಯರಿಂದ ದೊರಕಿದ ಸುಸಂಸ್ಕಾರಗಳೇ ಮಹಾನ ವ್ಯಕ್ತಿಯಾಗುವ ಮೊದಲ ಮೆಟ್ಟಿಲಾದವು. ಮಾತೋಶ್ರಿಯವರ ರೂಪದಲ್ಲಿ ಸ್ತ್ರೀಧರ್ಮ, ಪತಿವ್ರತಾಧರ್ಮ, ಆಚಾರ ಧರ್ಮ ಮತ್ತು ಅದರಿಂದ ಸಾಧಿಸಲಾದ ಇಹಲೋಕ ಮತ್ತು ಪರಲೋಕಗಳ ಕಲ್ಯಾಣವನ್ನು ಅವರು ಪ್ರತ್ಯಕ್ಷ ಅನುಭವಿಸಿದರು. ತಂದೆಯ ಸಾನ್ನಿಧ್ಯದಲ್ಲಿದ್ದು ನಿಷ್ಕಾಮ ಕರ್ಮಯೋಗವನ್ನು ಹೇಗೆ ಆಚರಿಸಬೇಕು, ಎಂಬುದನ್ನು ಅವರು ಪ್ರತ್ಯಕ್ಷ ನೋಡಿದರು.

೨. ಅಲಿಪ್ತರಾಗಿದ್ದು ಸಾಕ್ಷಿತ್ವದಿಂದ ಮಾಡಿದ ಕರ್ಮವೇ ಸಾತ್ತ್ವಿಕವಾಗುತ್ತದೆ !

ಕರ್ಮದ ಸ್ವರೂಪವು ನಿಯತ, ಶಾಸ್ತ್ರಶುದ್ಧವಾಗಿದ್ದರೆ ಮಾತ್ರ ಅದು ಸಾತ್ತ್ವಿಕ ಕರ್ಮವಾಗುತ್ತದೆ ! ವರ್ಹಾಡಾದ ಶಾಸ್ತ್ರೀ ಬುವಾ ಇವರು ಓರ್ವ ಅಗ್ರಗಣ್ಯ ಯೋಗಿ ಮತ್ತು ಕರ್ಮಠ ಹಾಗೂ ಜ್ಞಾನಿ ವಿದ್ವಾಂಸರಾಗಿದ್ದರು. ಅವರ ಮೂರೂ ಸಮಯದ ಸಂಧ್ಯಾವಂದನೆ, ಪೂಜೆ ಎಂದಿಗೂ ತಪ್ಪುತ್ತಿರಲಿಲ್ಲ. ಕಾಶಿಯ ಲಕ್ಷ್ಮಣಶಾಸ್ತ್ರಿ ದ್ರವಿಡರು ಅಕೋಲಾಕ್ಕೆ ಬಂದಿದ್ದರು. ಶಾಸ್ತ್ರಿಯವರೊಂದಿಗೆ ಅವರ ಮಾತುಕತೆ ಬಹಳ ಹೊತ್ತು ನಡೆದಿತ್ತು. ಇಬ್ಬರೂ ಜ್ಞಾನಿಗಳು. ಶಾಸ್ತ್ರೀಬುವಾರ ಮಧ್ಯಾಹ್ನದ ಸ್ನಾನ ಆಗಿರಲಿಲ್ಲ. ಒಂದೂವರೆ ಗಂಟೆ ತಡವಾಗಿತ್ತು. ಮಾತು ಮುಗಿಸಿ ಲಕ್ಷ್ಮಣಶಾಸ್ತ್ರಿ ಇವರು ನಿರ್ಗಮಿಸಿದರು. ನಂತರ ಅವರು ಸ್ನಾನ ಮಾಡಿ ಬಾಕಿ ಉಳಿದಿದ್ದನ್ನು ಮುಗಿಸಿದರು. ನಿಯಮದ ಸಮಯ ತಪ್ಪಿತೆಂದು; ಶಾಸ್ತ್ರಿ ಬುವಾ ಇವರು ಅಸ್ವಸ್ಥರಾಗಲಿಲ್ಲ. ನಿತ್ಯಕರ್ಮದಲ್ಲಿ, ನಿಯಮಗಳ ಆಸಕ್ತಿಯೂ ಬೇಡ. ಸತ್ಕರ್ಮ, ಧರ್ಮ-ಕರ್ಮಗಳ ಸೆಳೆತವೂ ಬೇಡ. ಶುಭಕರ್ಮಗಳ ಬಗ್ಗೆಯೂ ಅನಾಸಕ್ತಿ. ಎಲ್ಲಿಯೂ ಆಸಕ್ತಿ ಇಲ್ಲ.

ಯಾವ ಸಮಯದಲ್ಲಿ ಏನು ಪ್ರಾಪ್ತವಾಗುತ್ತದೆಯೋ, ಅದನ್ನು ಅದೇ ರೀತಿ ಅಲಿಪ್ತವಾಗಿ, ಸಾಕ್ಷಿಭಾವದಿಂದ ನೆರವೇರಿಸುವುದು, ಈ ಕರ್ಮವನ್ನು ಮಾಡುವ ಕಲೆಯನ್ನು ಸಾಧಿಸಿದರೆ ಆ ಕರ್ಮವು ನಮ್ಮನ್ನು ಬಂಧಿಸುವುದಿಲ್ಲ. ಸಾತ್ತ್ವಿಕ ಕರ್ಮ, ಶುಭ ಕರ್ಮ, ನಿತ್ಯ ಕರ್ಮ, ನಿಯಮಗಳ ಬಗ್ಗೆ ಒಂದು ವೇಳೆ ಆಸಕ್ತಿ ಇದ್ದರೆ ಅದು ಸಾತ್ತ್ವಿಕ ಕರ್ಮವಾಗುವುದಿಲ್ಲ. ಶುಭ ಮತ್ತು ಅಶುಭ ಇವುಗಳ ಆಚೆಗೆ ಹೋಗಲು ಬರಬೇಕು.

೩. ಜ್ಞಾನಿ ವ್ಯಕ್ತಿಗಳ ಪ್ರಾರಬ್ಧ ಮತ್ತು ಮೃತ್ಯುವಿನ ಕಡೆಗೆ ನೋಡುವ ದೃಷ್ಟಿಕೋನ !

ಜ್ಞಾನಿ ವ್ಯಕ್ತಿಯು ಪ್ರಾರಬ್ಧವನ್ನು ಸುಮ್ಮನೆ ಭೋಗಿಸಿ ಮುಗಿಸುತ್ತಾನೆ. ಪ್ರಕೃತಿಯ ಗುಣಗಳೊಂದಿಗೆ ಅವನು ಹೋರಾಡುವುದಿಲ್ಲ, ಜಗಳಾಡುವುದಿಲ್ಲ, ಏನು ಘಟಿಸುತ್ತಿದೆಯೋ, ಅದನ್ನು ಘಟಿಸಲು ಬಿಡುತ್ತಾನೆ. ಶಾಂತವಾಗಿ ಎಲ್ಲವನ್ನೂ ಪ್ರಾರಬ್ಧದಂತೆ ಸ್ವೀಕರಿಸುತ್ತಾನೆ; ಆದುದರಿಂದಲೇ ಶಾಸ್ತ್ರೀಬುವಾ ಇವರು ತಮ್ಮ ಪತ್ನಿಯ ಅಕಾಲಿಕ ಮರಣವನ್ನು ಶಾಂತವಾಗಿ ಸ್ವೀಕರಿಸಿದರು. ಆ ಸಮಯದಲ್ಲಿ ಅವರಿಗೆ ಉತ್ತಮ ಗತಿ ಸಿಗಲೆಂದು; ವಿಷ್ಣು ಸಹಸ್ರನಾಮವನ್ನು ಶಾಂತವಾಗಿ ಉಚ್ಚ ಸ್ವರದಲ್ಲಿ ಸ್ಥಿತಪ್ರಜ್ಞರಾಗಿ ಪೂರ್ಣಗೊಳಿಸಿದರು. ಜನ್ಮವಿದ್ದಲ್ಲಿ ಮೃತ್ಯು ಇದೆ. ಜ್ಞಾನಿ ವ್ಯಕ್ತಿಯು ಸಾಯುತ್ತಾನೆ ಮತ್ತು ಅಜ್ಞಾನಿಯು ಸಹ ಸಾಯುತ್ತಾನೆ !

೪. ಜ್ಞಾನಿ ವ್ಯಕ್ತಿಯು ಮೃತ್ಯುವನ್ನು ಸ್ವಾಗತಿಸುತ್ತಾನೆ !

ಮೃತ್ಯುವೆಂದರೆ ಹೊಸಜೀವನ ! ಜೀರ್ಣ ಶರೀರವನ್ನು ಮೃತ್ಯು ಕಸಿದುಕೊಳ್ಳುತ್ತದೆ ಮತ್ತು ಹೊಸದನ್ನು ನೀಡುತ್ತದೆ, ಈ ರೀತಿಯ ವಿಚಾರ ಜ್ಞಾನಿಗಳದ್ದಾಗಿರುತ್ತದೆ. ಆದುದರಿಂದ ಅವರು ಮೃತ್ಯುವನ್ನು ಸ್ವಾಗತಿಸುತ್ತಾರೆ. ಜೀವನದಲ್ಲಿ ಸಣ್ಣ, ದೊಡ್ಡ ದುಃಖಗಳು, ಆಪತ್ತುಗಳು, ಸಂಕಟಗಳು ಪ್ರತಿ ಕ್ಷಣ ಬರುತ್ತವೆ. ಜ್ಞಾನಿ ಮತ್ತು ಅಜ್ಞಾನಿ ಇವರಿಬ್ಬರೂ ಎದುರಿಸಬೇಕಾಗುತ್ತದೆ. ಆಪತ್ತಿನಲ್ಲಿ ಅಜ್ಞಾನಿಯು ದುಃಖಿಯಾಗುತ್ತಾನೆ. ಜ್ಞಾನಿಯು ಪ್ರಸನ್ನನಾಗಿರುತ್ತಾನೆ. ಪ್ರಕೃತಿಗನುಸಾರ ವಿಧಿಗನುಸಾರ ಪ್ರಾರಬ್ಧಕ್ಕ ನುಸಾರ ಎಲ್ಲವೂ ಘಟಿಸುತ್ತದೆ. ಜ್ಞಾನಿಗೆ ಅರಿವಿರುತ್ತದೆ, ಅಜ್ಞಾನಿಗೆ ತಿಳುವಳಿಕೆ ಇರುವುದಿಲ್ಲ. ಹಾಗಾಗಿ ಅವನು (ಅಜ್ಞಾನಿ) ದುಃಖಿ ಯಾಗುತ್ತಾನೆ ! ಮೇಲಿನ ಜ್ಞಾನಿಗಳ ಮೃತ್ಯುವಿನ ವರ್ಣನೆ ಶಾಸ್ತ್ರಿ ಬುವಾರ ಪುಣ್ಯಪಾವನ ಸಾವಿಗೆ ಅಕ್ಷರಶಃ ಅನ್ವಯಿಸುತ್ತದೆ.

೫. ಅಜ್ಞಾನಿ ವ್ಯಕ್ತಿಯ ಮರಣ !

ಅಕೋಲಾದ ಶಾಸ್ತ್ರಿಬುವಾ ಇವರು ವಿದರ್ಭ ಸನಾತನಧರ್ಮ ಸಭೆಯ ಅಧ್ಯಕ್ಷರಾಗಿದ್ದರು ! ಅವರ ಮೃತ್ಯುವಿನ ನೆನಪಾಗುತ್ತದೆ. ಅವರು ಎಲ್ಲ ಸಿದ್ಧತೆಯನ್ನು ಮಾಡಿದರು ಮತ್ತು ನಿಶ್ಚಿಂತರಾಗಿ ಪ್ರಸನ್ನ ಮನಃಸ್ಥಿತಿಯಲ್ಲಿ ಅವರ ಮೃತ್ಯುವಾಯಿತು. ಯಾರನ್ನೋ ಬೀಳ್ಕೊಡುವಂತೆ ಅವರ ಮೃತ್ಯುವಾಯಿತು. ಜ್ಞಾನಿ ವ್ಯಕ್ತಿಗಳ ಮರಣ ಈ ರೀತಿ ಇರುತ್ತದೆ; ಆದರೆ ಅಜ್ಞಾನಿಗಳು ಜಗಳಾಡುತ್ತಾರೆ. ವಿರೋಧಿಸುತ್ತಾರೆ, ವೈದ್ಯರು ಗೊಂದಲಕ್ಕೊಳಗಾಗುತ್ತಾರೆ, ಅವರು ಅಶಾಂತರಾಗಿರುತ್ತಾರೆ, ವ್ಯಗ್ರರಾಗಿರುತ್ತಾರೆ. ಅಜ್ಞಾನಿಯು ಸಾಯುತ್ತಾನೆ ಪುನಃ ಜನ್ಮ ಪಡೆಯುತ್ತಾನೆ.

೬. ಶಾಸ್ತ್ರೀಬುವಾ ಇವರ ಇಚ್ಛೆಗನುಸಾರ ಅಂತ್ಯಕ್ರಿಯೆ !

ಮೃತ್ಯುವಿನ ಸಮಯದಲ್ಲಿ ಅವರಿಗೆ ಸನ್ಯಾಸ ಸ್ವೀಕರಿಸುವ ಇಚ್ಛೆ ಇತ್ತು. ಪಂಚಕ್ರೋಶಿಯ ಪ.ಪ. (ಪರಮಹಂಸ ಪರವ್ರಾಜಕಾಚಾರ್ಯ) ಶ್ರೀಧರಸ್ವಾಮಿಗಳು ಇಂದೂರಿನಲ್ಲಿ ಇದ್ದುದರಿಂದ ಅವರ ಸನ್ಯಾಸ ದೀಕ್ಷೆಯ ಇಚ್ಛೆ ಈಡೇರಲಿಲ್ಲ; ಆದರೆ ವಾದ್ಯಗಳೊಂದಿಗೆ, ಭಜನೆ ಹಾಡುತ್ತಾ ಅವರ ಕಳೇಬರಕ್ಕೆ (ಮೃತದೇಹಕ್ಕೆ) ೧೧ ಪ್ರದಕ್ಷಿಣೆಯನ್ನು ಹಾಕಿಸಿ ನಂತರವೇ ಅವರ ಅಂತ್ಯಕ್ರಿಯೆಯನ್ನು ಮಾಡಲಾಯಿತು.

೭. ಸಂತರ ದೇಹತ್ಯಾಗದ ವೈಶಿಷ್ಟ್ಯ !

ಪ.ಪ. ಶ್ರೀಧರಸ್ವಾಮಿಯವರು ಏಕಾಂತದಲ್ಲಿರುತ್ತಾರೆ. ಕರ್ನಾಟಕದ ವರದಹಳ್ಳಿಯಲ್ಲಿ ಅವರು ದೇಹತ್ಯಾಗ ಮಾಡುತ್ತಾರೆ. ಅವರ ದೇಹತ್ಯಾಗದ ಬಗ್ಗೆ ಅವರ ಹತ್ತಿರದ ಶಿಷ್ಯನಿಗೂ ನಂತರ ತಿಳಿಯುತ್ತದೆ. ಸಂತಶ್ರೇಷ್ಠ ಜ್ಞಾನದೇವರಂತಹ ಜ್ಞಾನೇಶ್ವರ ಯೋಗಿಗಳು ಸಂಜೀವನಿ ಸಮಾಧಿ ತೆಗೆದುಕೊಳ್ಳುತ್ತಾರೆ ! ಸಮರ್ಥ ರಾಮದಾಸಸ್ವಾಮಿಯವರು ಪೂರ್ವಸೂಚನೆ ನೀಡಿ ದಾಸ ನವಮಿಯಂದು ನಿರ್ಧರಿಸಿದ ಸಮಯದಲ್ಲಿ ದೇಹತ್ಯಾಗ ಮಾಡುತ್ತಾರೆ. ಸಂತ ಏಕನಾಥರು ನಾಥಷಷ್ಠಿಯಂದು ಹೇಳಿ ಸಿದ್ಧ ರಾಗಿ ಗೋದಾವರಿಯಲ್ಲಿ ಜಲಸಮಾಧಿ ತೆಗೆದುಕೊಳ್ಳುತ್ತಾರೆ. ಇದ್ದಕ್ಕಿದ್ದಂತೆಯೇ ಸಾವು ಬಂದರೂ ಜ್ಞಾನಿಗಳು ಎದೆಗುಂದುವುದಿಲ್ಲ. ಅವರು ಜಾಗರೂಕ ಮತ್ತು ಸಂತೋಷದಿಂದ ಇರುತ್ತಾರೆ. ಸಂತೋಷದಿಂದ ಮೃತ್ಯುವನ್ನು ಸ್ವಾಗತಿಸುತ್ತಾರೆ.

ಸಾರಾಂಶವೆಂದರೆ, ಜೀವನದಲ್ಲಿ ಸಣ್ಣ-ದೊಡ್ಡ ದುಃಖಗಳು, ಆಪತ್ತುಗಳು, ಸಂಕಟಗಳು ಆಗಾಗ ಬರುತ್ತವೆ. ಇಂತಹ ಈ ಸುಖ – ದುಃಖಗಳನ್ನು ಜ್ಞಾನಿ ಮತ್ತು ಅಜ್ಞಾನಿ ಇವರಿಬ್ಬರೂ ಎದುರಿಸ ಬೇಕಾಗುತ್ತದೆ. ಆಪತ್ತಿನಲ್ಲಿ ಅಜ್ಞಾನಿ ದುಃಖಿಯಾಗುತ್ತಾನೆ; ಆದರೆ ಜ್ಞಾನಿಯು ಸಂತೋಷದಿಂದಿರುತ್ತಾನೆ.’

(ಆಧಾರ : ಮಾಸಿಕ ‘ಘನಗರ್ಜಿತ’, ಮೇ ೨೦೧೯)

ಮೃತ್ಯುವನ್ನು ಎದುರಿಸುವ ಜ್ಞಾನಿ ಮತ್ತು ಅಜ್ಞಾನಿ ವ್ಯಕ್ತಿ ಇವರಲ್ಲಿನ ವ್ಯತ್ಯಾಸ

‘ಮೃತ್ಯು ಅನಿವಾರ್ಯವಾಗಿದೆ; ಜ್ಞಾನಿ ವ್ಯಕ್ತಿಯು ಎದುರಿಗಿರುವ ಪ್ರಾರಬ್ಧವನ್ನು ಅರಿತು ಸಾಕ್ಷಿಯಿಂದಿದ್ದು ಶಾಂತವಾಗಿ ಪ್ರಸನ್ನತೆಯಿಂದ ಅದನ್ನು ಎದುರಿಸುತ್ತಾನೆ. ಅಜ್ಞಾನಿ ವ್ಯಕ್ತಿಯು ಮಾತ್ರ ದುಃಖಿಯಾಗುತ್ತಾನೆ. ಮೃತ್ಯುವಿನೊಂದಿಗೆ ಹೋರಾಡಲು ಪ್ರಯತ್ನಿಸುತ್ತಾನೆ. ಅಸ್ವಸ್ಥನಾಗುತ್ತಾನೆ, ಸಾವನ್ನು ತಪ್ಪಿಸಲು ಪ್ರಯತ್ನಿಸುತ್ತಾನೆ ಮತ್ತು ಮೃತ್ಯುವಿನ ಸಮಯದಲ್ಲಿ ದುಃಖ, ಸಂಕಟವನ್ನು ಭೋಗಿಸುತ್ತಾನೆ ಮತ್ತು ಕೊನೆಗೆ ಸೋಲುತ್ತಾನೆ. ಮುಂದೇನು ? ನರಕಯಾತನೆ ! ನಂತರ ಮತ್ತೇ ಪುನರಾಗಮನ, ಮತ್ತೇ ವಾಸನೆಗಳಿಗನುಸಾರ ಜನ್ಮ. ತಾಮಸಿಕ ಆಗಿದ್ದರೆ, ಕೀಟ, ಪತಂಗ, ಪಶು, ಪಕ್ಷಿ ಮತ್ತು ಸಾತ್ತ್ವಿಕವಾಗಿದ್ದರೆ ಮನುಷ್ಯ ಜನ್ಮ ! ಹೀಗೆ ಈ ಜನ್ಮ-ಮರಣದ ಚಕ್ರವು ತಿರುಗುತ್ತಿರುತ್ತದೆ. ಭಕ್ತ-ಯೋಗಿ ಮಾತ್ರ ಈ ಮನುಷ್ಯ ಜೀವನದ ಅವಕಾಶವನ್ನು ಸಾಧಿಸುತ್ತಾನೆ. ಅಂತರಂಗವನ್ನು ಪರಮಶುದ್ಧ ಮಾಡಿಕೊಂಡು ಭಗವಂತನು ಪ್ರಕಟವಾಗುವುದಕ್ಕೆ ಅನುಕೂಲವಾದ ಸ್ಥಾನ ನಿರ್ಮಿಸುತ್ತಾನೆ. ಪೂರ್ಣತ್ವದ ಹಂತ, ಕೊನೆಗೆ ಸಾಕ್ಷಾತ್ಕಾರವನ್ನಾದರೂ ಸಾಧಿಸದಿದ್ದರೆ ಅದರ ಮುಂದಿನ ಹೆಜ್ಜೆಯು ಮುಂದೆ ಬೀಳುತ್ತದೆ. ಶಾಸ್ತ್ರಿಬುವಾ ಮತ್ತು ಅವರ ಪತ್ನಿ ಇವರ ಮೃತ್ಯುವಿನ ವರ್ಣನೆಯನ್ನು ಕೇಳಿ ಮನಸ್ಸನ್ನು ಪವಿತ್ರ ಮಾಡಿಕೊಳ್ಳಬೇಕು.

(ಆಧಾರ : ಮಾಸಿಕ ‘ಘನಗರ್ಜಿತ’, ಮಾರ್ಚ್ ೨೦೧೯)

ನಮ್ಮ ಮೃತ್ಯುವನ್ನು ನೆನಪಿಸಿಕೊಂಡರೆ ಅಹಂಕಾರವು ಸಂಪೂರ್ಣ ನಿವೃತ್ತವಾಗಿ ಶರಣಾಗತಿಯ ಕಡೆಗೆ ಮಾರ್ಗಕ್ರಮಣವಾಗುವುದು

”ಪ್ರತಿದಿನ ಜನರು ಸಾಯುತ್ತಾರೆ. ನಾನು ಮಾತ್ರ ಎಂದಿಗೂ ಸಾಯುವುದಿಲ್ಲ’, ಎಂದೇ ಎಲ್ಲರ ವಿಚಾರವಿರುತ್ತದೆ. ಇದೇ ಎಲ್ಲಕ್ಕಿಂತ ದೊಡ್ಡ ಆಶ್ಚರ್ಯ ? ಪ.ಪೂ ಗುರುದೇವ ಡಾ. ಕಾಟೆಸ್ವಾಮೀಜಿಯವರು ಮೃತ್ಯುವಿನ ಮಹಿಮೆಯನ್ನು ಅರಿತಿದ್ದರು. ಒಂದು ಸಲ, ಬಾಲ್ಯದಿಂದಲೂ ಅಧ್ಯಾತ್ಮದಲ್ಲಿ ಆಸಕ್ತಿ ಹೊಂದಿರುವ ಓರ್ವ ಧ್ಯೇಯನಿಷ್ಠ ಮತ್ತು ಕರ್ತೃತ್ವವಂತ ವೈದ್ಯರು ನಂತರದ ಜೀವನದಲ್ಲಿ ಬಹಳ ಉತ್ಸಾಹದಿಂದ ಪ.ಪೂ. ಗುರುದೇವರಿಗೆ, ”ಮಹಾರಾಜ, ಈಗ ನನ್ನ ಮನಸ್ಸಿ ನಲ್ಲಿ ಯಾವುದೇ ಚಿಂತೆ ಇಲ್ಲ, ಆದರೆ ನನ್ನ ಮನಸ್ಸು ದೇವರ ಕಡೆಗೆ ಏಕೆ ತಿರುಗುವುದಿಲ್ಲ ?’’ ಎಂದು ಕೇಳಿದರು. ಗುರು ದೇವರು ಶಾಂತವಾಗಿ ಹೇಳಿದರು, ‘ನಿಮ್ಮ ಮರಣವನ್ನು ನೆನಪಿಸಿ ಕೊಳ್ಳಿ !’’ ಈ ಕೇವಲ ೩ ಶಬ್ದಗಳಿಂದ ಒಂದೇ ಕ್ಷಣದಲ್ಲಿ ಆ ಡಾಕ್ಟರರ ಜೀವನ ಬದಲಾಯಿತು. ಮೊದಲಿನ ಜೀವನದ ಧ್ಯೇಯನಿಷ್ಠೆ ಮತ್ತು ಕರ್ತೃತ್ವವು ತನ್ನದಲ್ಲ ಎಂಬ ವಿಚಾರದಿಂದ ಅಹಂಕಾರವು ಕುಸಿಯತೊಡಗಿತು. ನಿಧಾನವಾಗಿ ಅಹಂಕಾರವು ಸಂಪೂರ್ಣವಾಗಿ ನಿವೃತ್ತ ಹೊಂದಿ ಅವರ ಶರಣಾಗತಿಯ ಕಡೆಗೆ ಮಾರ್ಗಕ್ರಮಣ ಆರಂಭವಾಯಿತು. ಕೊನೆಗೆ ಆ ಡಾಕ್ಟರರ ಮೃತ್ಯು ಮಂಗಲಮಯವಾಯಿತು.’

(ಆಧಾರ : ಮಾಸಿಕ ‘ಘನಗರ್ಜಿತ’, ಮಾರ್ಚ್ ೨೦೧೯)