RSS Supports Reservation: RSS ನಿಂದ ಮೀಸಲಾತಿಗೆ ಸಂಪೂರ್ಣ ಬೆಂಬಲ ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ್

ಭಾಗ್ಯನಗರ (ತೆಲಂಗಾಣ) – ನಾನು ಇಲ್ಲಿಗೆ ಬಂದಾಗ ರಾಷ್ಟ್ರೀಯ ಸ್ವಯಂಸೇವಕ ಸಂಘ ಮೀಸಲಾತಿ ವಿರುದ್ಧ ಎಂಬ ವಿಡಿಯೋ ಹರಿದಾಡುತ್ತಿತ್ತು. ಮೀಸಲಾತಿಯನ್ನು ಸಂಘ ವಿರೋಧಿಸುತ್ತದೆ, ಅದು ಸಂಪೂರ್ಣ ಸುಳ್ಳಾಗಿದೆ. ಸಂಘವು ಪ್ರಾರಂಭದಿಂದಲೂ ಸಂವಿಧಾನದ ಅಡಿಯಲ್ಲಿ ಎಲ್ಲಾ ಮೀಸಲಾತಿಗಳನ್ನು ಬೆಂಬಲಿಸುತ್ತಾಬಂದಿದೆ. ಎಲ್ಲಿಯವರೆಗೆ ಮೀಸಲಾತಿಯ ಅಗತ್ಯವಿದೆಯೋ ಅಲ್ಲಿಯವರೆಗೆ ಮೀಸಲಾತಿ ಮುಂದುವರಿಯಬೇಕು ಎಂಬ ಸಂಘದ ಅಭಿಪ್ರಾಯವಾಗಿದೆ ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನ್‌ಜಿ ಭಾಗವತ್ ಇಲ್ಲಿ ಮಾಡಿದರು. ಮೀಸಲಾತಿಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ವಿವಾದದ ಕುರಿತು ಸರಸಂಘಚಾಲಕರು ಈ ಸ್ಪಷ್ಟನೆ ನೀಡಿದ್ದಾರೆ. ಸರಸಂಘಚಾಲಕ ಡಾ. ಭಾಗವತ ಇವರು ಕಳೆದ ವರ್ಷ ಸಪ್ಟೆಂಬರ್ ನಲ್ಲಿ, ಸಮಾಜದಲ್ಲಿ ಎಲ್ಲಿಯವರೆಗೆ ತಾರತಮ್ಯವಿದೆಯೋ ಅಲ್ಲಿಯವರೆಗೆ ಮೀಸಲಾತಿಯನ್ನು ಮುಂದುವರಿಸಬೇಕು ಎಂದು ಹೇಳಿದ್ದರು. ಸಮಾಜದಲ್ಲಿ ತಾರತಮ್ಯ ಕಾಣದಿದ್ದರೂ ಅದು ಇರುತ್ತದೆ ಎಂದು ಹೇಳಿದರು.

ಮೀಸಲಾತಿ ರದ್ದುಪಡಿಸಲು ಬಿಜೆಪಿ ಪಿತೂರಿ ! – ರಾಹುಲ್ ಗಾಂಧಿ

ಬಿಜೆಪಿಯನ್ನು ಟೀಕಿಸಿದ ರಾಹುಲ್ ಗಾಂಧಿ, ಬಿಜೆಪಿಯು ದಲಿತರು, ಹಿಂದುಳಿದ ವರ್ಗಗಳು ಮತ್ತು ಆದಿವಾಸಿಗಳ ಮೀಸಲಾತಿಯನ್ನು ಕಸಿದುಕೊಳ್ಳಲು ಬಯಸುತ್ತದೆ ಮತ್ತು ದೇಶವನ್ನು ನಡೆಸುವಲ್ಲಿ ಅವರ ಭಾಗವಹಿಸುವಿಕೆಯನ್ನು ಕೊನೆಗೊಳಿಸಲು ಬಯಸುತ್ತದೆ; ಆದರೆ ಸಂವಿಧಾನ ಮತ್ತು ಮೀಸಲಾತಿಯನ್ನು ರಕ್ಷಿಸಲು ಬಿಜೆಪಿಯ ಹಾದಿಯಲ್ಲಿ ಕಾಂಗ್ರೆಸ್ ಪರ್ವತದಂತೆ ನಿಂತಿದೆ. ಕಾಂಗ್ರೆಸ್ ಇರುವವರೆಗೆ ಜಗತ್ತಿನ ಯಾವ ಶಕ್ತಿಯೂ ಹಿಂದುಳಿದವರ ಮೀಸಲಾತಿಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ರಾಹುಲ್ ಗಾಂಧಿ ಸುಳ್ಳು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ! – ಅಮಿತ್ ಶಾ

ರಾಹುಲ್ ಗಾಂಧಿ ಟೀಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇವರು, ರಾಹುಲ್ ಗಾಂಧಿ ಸುಳ್ಳು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. 10 ವರ್ಷಗಳಿಂದ ಬಿಜೆಪಿ ದೇಶದಲ್ಲಿ ಆಡಳಿತ ನಡೆಸುತ್ತಿದೆ. ಎರಡೂ ಬಾರಿ ಪೂರ್ಣ ಬಹುಮತದೊಂದಿಗೆ ಸರ್ಕಾರ ಬಂದಿದೆ. ಬಿಜೆಪಿ ಮೀಸಲಾತಿಯನ್ನು ಕೊನೆಗಾಣಿಸಲು ಬಯಸಿದರೆ ಅದನ್ನು ಯಾವಾಗ ಬೇಕಾದರೂ ಕೊನೆಗೊಳಿಸುತ್ತಿತ್ತು. ‘ಬಿಜೆಪಿ ಇರುವವರೆಗೆ ಮೀಸಲಾತಿಯನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ’ ಎಂದು ನರೇಂದ್ರ ಮೋದಿ ಅವರು ಇಡೀ ದೇಶದ ದಲಿತ, ಹಿಂದುಳಿದ, ಬುಡಕಟ್ಟು ಬಂಧುಗಳಿಗೆ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಯಾವಾಗಲೂ ಪರಿಶಿಷ್ಟ ಜಾತಿ-ಪಂಗಡ ಹಾಗೂ ಹಿಂದುಳಿದವರ ಮೀಸಲಾತಿಯ ಮೇಲೆ ದಾಳಿ ಮಾಡಿದ್ದಾರೆ. ಕರ್ನಾಟಕದಲ್ಲಿ ಅವರ ಸರ್ಕಾರ ಬಂದಾಗ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡಲಾಗಿತ್ತು. ಇದಕ್ಕಾಗಿ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಶೇಕಡಾವಾರು ಕಡಿಮೆ ಮಾಡಿತು. ಆಂಧ್ರಪ್ರದೇಶದಲ್ಲಿ ಅವರ ಸರ್ಕಾರ ಬಂದಾಗ ಅಲ್ಲಿಯೂ ಮುಸ್ಲಿಮರಿಗೆ ಶೇ 5ರಷ್ಟು ಮೀಸಲಾತಿ ನೀಡಿದ್ದರು. ಬಿಜೆಪಿ ರಾಜಕೀಯದಲ್ಲಿ ಇದೆಯೋ ಅಲ್ಲಿಯವರೆಗೂ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಡಿಮೆ ಆಗಲು ಬಿಡುವುದಿಲ್ಲ ಎಂದು ಹೇಳುತ್ತೇನೆ, ಎಂದು ಹೇಳಿದರು.