Doordarshan New Logo : ‘ದೂರದರ್ಶನದ ಜನರ ಕೇಸರಿಕರಣವನ್ನು ನೋಡಿ ದುಃಖವೆನಿಸುತ್ತಿದೆಯಂತೆ !’ – ತೃಣಮೂಲ ಕಾಂಗ್ರೆಸ್ ಶಾಸಕ ಜವಾಹರ್ ಸರ್ಕಾರ

  • ದೂರದರ್ಶನದ ಹೊಸ ಚಿಹ್ನೆಯ ಕೆಂಪು ಬಣ್ಣವನ್ನು ಕಿತ್ತಳೆ ಬಣ್ಣಕ್ಕೆ ಬದಲಾಯಿಸಿರುವ ಬಗ್ಗೆ ಹೇಳಿಕೆ !

  • ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ‘ಪ್ರಸಾರ ಭಾರತಿ’ಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜವಾಹರ್ ಸರ್ಕಾರ ಇವರಿಗೆ ಹೊಟ್ಟೆಯುರಿ !

ದೂರದರ್ಶನದ ಹೊಸ ಚಿಹ್ನೆ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಜವಾಹರ್ ಸರ್ಕಾರ

ನವ ದೆಹಲಿ – ಸಾರ್ವಜನಿಕ ಪ್ರಸಾರ ದೂರದರ್ಶನದ ಚಿಹ್ನೆಯ ಬಣ್ಣವನ್ನು ಕೆಂಪು ಬಣ್ಣದಿಂದ ಕಿತ್ತಳೆ ಬಣ್ಣಕ್ಕೆ ಬದಲಾಯಿಸಲಾಗಿದೆ. ಇದರಿಂದ ಹಿಂದೂ ದ್ವೇಷಿಗಳ ಪಿತ್ತ ನೆತ್ತಿಗೇರಿದೆ. `ಪ್ರಸಾರ ಭಾರತಿ’ಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ತೃಣಮೂಲ ಕಾಂಗ್ರೆಸ್ಸಿನ ಶಾಸಕ ಜವಾಹರ್ ಸರ್ಕಾರ ಇವರು ಈ ಚಿಹ್ನೆಯ ಬಣ್ಣದ ಕುರಿತು ಟೀಕಿಸುತ್ತಾ, ದೂರದರ್ಶನವು ತನ್ನ ಐತಿಹಾಸಿಕ ಅಧಿಕೃತ ಚಿಹ್ನೆಯನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿದೆ. ಈಗ ಅದು ‘ಪ್ರಸಾರ ಭಾರತಿ’ ಆಗಿರದೇ, ‘ಪ್ರಚಾರ ಭಾರತಿ’ ಆಗಿದೆ. ದೂರದರ್ಶನದ ಜನರ ಆಗುತ್ತಿರುವ ಕೇಸರಿಕರಣವನ್ನು ನೋಡಿ ಕೆಟ್ಟದೆನಿಸಿತು. ಒಂದು ತಟಸ್ಥ ಸಾರ್ವಜನಿಕ ಪ್ರಸಾರ ಈಗ ಪಕ್ಷಪಾತದ ಆಡಳಿತದೊಂದಿಗೆ ಧರ್ಮ (ಹಿಂದೂ) ಮತ್ತು ಸಂಘ ಪರಿವಾರದ ಬಣ್ಣಗಳನ್ನು ಸೇರಿಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲಿದೆ. ಜವಹರ್ ಸಿರ್ಕಾರ್ ಅವರು 2012 ರಿಂದ 2016 ರ ಅವಧಿಯಲ್ಲಿ ದೂರದರ್ಶನ ಮತ್ತು ‘ಆಲ್ ಇಂಡಿಯಾ ರೇಡಿಯೊ’ದ ಜವಾಬ್ದಾರಿ ಹೊಂದಿರುವ ‘ಪ್ರಸಾರ ಭಾರತಿ’ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದರು.

ದೂರದರ್ಶನವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ ! – ಗೌರವ ದ್ವಿವೇದಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಪ್ರಸಾರ ಭಾರತಿ

ಈ ಆರೋಪದ ಕುರಿತು ಪ್ರಸಾರ ಭಾರತಿಯ ಪ್ರಸ್ತುತ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಗೌರವ ದ್ವಿವೇದಿ ಅವರು ಮಾತನಾಡುತ್ತಾ, ಹೊಸ ಕಿತ್ತಳೆ ಬಣ್ಣದ ಚಿಹ್ನೆ ನೋಡಲು ಆಕರ್ಷಕವಾಗಿರುವುದರಿಂದ ಅದನ್ನು ಬದಲಾಯಿಸಲಾಗಿದೆ. ದೃಶ್ಯ ಸೌಂದರ್ಯ ಶಾಸ್ತ್ರವನ್ನು ಗಮನದಲ್ಲಿಟ್ಟುಕೊಳ್ಳಿ. ಚಿಹ್ನೆಯ ಬಣ್ಣ ಕೇಸರಿ ಅಲ್ಲ, ಕಿತ್ತಳೆ ಬಣ್ಣವಾಗಿದೆ. ಕೇವಲ ಚಿಹ್ನೆ ಮಾತ್ರವಲ್ಲ, ನಾವು ಸಂಪೂರ್ಣ ದೂರದರ್ಶನವನ್ನು ಬದಲಾಯಿಸಿದ್ದೇವೆ. ಈ ವಿಷಯದಲ್ಲಿ ಜನರು ಖಾರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇದು ದುರಾದೃಷ್ಟಕರ ಎಂದು ಹೇಳಿದರು.

ಮತ್ತೊಂದೆಡೆ, ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಅವರು ಮಾತನಾಡಿ, ಕೇಸರೀಕರಣ ಮತ್ತು ಸರ್ಕಾರಿ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಈ ಹೆಜ್ಜೆ ಭಾರತದ ಸಾರ್ವಜನಿಕ ಪ್ರಸಾರದ ತಟಸ್ಥತೆ ಮತ್ತು ನಂಬಿಕೆಯನ್ನು ಸ್ಪಷ್ಟವಾಗಿ ಹಾಳುಮಾಡುತ್ತದೆ. (ಕಾಂಗ್ರೆಸ್ ಕಳೆದ 7 ದಶಕಗಳಿಂದ ದೇಶವನ್ನು ನಾಶಮಾಡುವ ಅಕ್ಷಮ್ಯ ಕೃತ್ಯಗಳನ್ನು ಮಾಡಿದೆ. ಅದರ ಈ ಘೋರ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸರಕಾರ ಅವರಿಗೆ ಹೇಳಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

ತಥಾಕಥಿತ ಜಾತ್ಯತೀತತೆಯ ಢಂಗೂರ ಬಾರಿಸುತ್ತಿರುವ ಜವಹರ್ ಸಿರ್ಕಾರ್ ರಿಗೆ ಬಂಗಾಳ ರಾಜ್ಯವನ್ನು ಅವರ ಪಕ್ಷವು ಹಸಿರೀಕರಣ ಮಾಡಿರುವುದು ಕಾಣಿಸುತ್ತಿಲ್ಲವೇ ? ಈಗ ಹಿಂದೂಗಳು ತೃಣಮೂಲ ಕಾಂಗ್ರೆಸ್ಸಿಗೆ ‘ಬಾಂಗ್ಲಾದೇಶದ ಹಾದಿಯಲ್ಲಿ ಸಾಗುತ್ತಿರುವ ಬಂಗಾಳ ರಾಜ್ಯವನ್ನು ಕೇಸರೀಕರಣವನ್ನು ಮಾಡುತ್ತೇವೆ’, ಎಂದು ಒತ್ತಿ ಹೇಳಬೇಕು !