Service Tax on Yoga Sessions: ಯೋಗಋಷಿ ರಾಮದೇವ್ ಬಾಬಾ ಯೋಗ ಶಿಬಿರಕ್ಕೆ ‘ಸೇವಾ ತೆರಿಗೆ’ ಪಾವತಿಸಬೇಕಾಗಬಹುದು ! – ಸರ್ವೋಚ್ಚ ನ್ಯಾಯಾಲಯ

ಯೋಗ ಶಿಬಿರಕ್ಕೆ ಪ್ರವೇಶ ಶುಲ್ಕ ವಿಧಿಸಿದ್ದಕ್ಕೆ ಕಾರಣ ನೀಡಿದೆ !

ನವ ದೆಹಲಿ – ಯೋಗ ಋಷಿ ರಾಮದೇವ್ ಬಾಬಾ ಅವರ ಸಂಸ್ಥೆ ‘ಪತಂಜಲಿ ಯೋಗಪೀಠ ನ್ಯಾಸ’ ಆಯೋಜಿಸುವ ಯೋಗ ಶಿಬಿರಗಳಿಗೆ ಪ್ರವೇಶ ಶುಲ್ಕ ವಿಧಿಸುವುದರಿಂದ ಯೋಗವೂ ಒಂದು ಸೇವೆಯಾಗುತ್ತದೆ. ಹಾಗಾಗಿ, ಇನ್ನು ಮುಂದೆ ನ್ಯಾಸದಿಂದ ಆಯೋಜಿಸುವ ಶಿಬಿರಗಳಿಗೆ ‘ಸೇವಾ ಶುಲ್ಕ’ ಪಾವತಿಸುವುದು ಕಡ್ಡಾಯವಾಗಿದೆ, ಎಂದು ನ್ಯಾಯಮೂರ್ತಿ ಅಭಯ ಓಕ್ ಮತ್ತು ನ್ಯಾಯಮೂರ್ತಿ ಉಜ್ವಲ್ ಭುೂಯಿಯಾ ಅವರ ವಿಭಾಗೀಯಪೀಠವು ತೀರ್ಪು ನೀಡಿದೆ. ಈ ಮೂಲಕ ಸೇವಾ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.

ನ್ಯಾಯಮಂಡಳಿಯು ಅಕ್ಟೋಬರ್ 5, 2023 ರಂದು ಪ್ರಯಾಗರಾಜ್‌ನಲ್ಲಿರುವ ಕಸ್ಟಮ್ಸ್ ತೆರಿಗೆ, ಉತ್ಪಾದನಾ ತೆರಿಗೆ ಮತ್ತು ಸೇವಾ ತೆರಿಗೆ ಪಾವತಿಸಲು ಪತಂಜಲಿ ಯೋಗಪೀಠ ನ್ಯಾಸಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ನ್ಯಾಸ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿ ನ್ಯಾಯಾಧಿಕರಣದ ತೀರ್ಪನ್ನು ಖಾಯಂ ಗೊಳಿಸಿತು.