Hindu Temple Blamed for Rains: ‘ದುಬೈನಲ್ಲಿ ಹಿಂದೂಗಳ ದೇವಸ್ಥಾನ ಕಟ್ಟಿದ್ದರಿಂದ ನೆರೆ ಬಂತಂತೆ !’

ಸಾಮಾಜಿಕ ಮಾಧ್ಯಮಗಳ ಮೂಲಕ ಮತಾಂಧ ಮುಸಲ್ಮಾನರ ಹಿಂದೂದ್ವೇಷಿ ಪ್ರಚಾರ !

 

ನವ ದೆಹಲಿ – ದುಬೈ ಸೇರಿದಂತೆ ಸಂಯುಕ್ತ ಅರಬ ಎಮಿರಾಟ್ಸ ಈ ಮುಸ್ಲಿಂ ರಾಷ್ಟ್ರಗಳ ಕೆಲವು ನಗರಗಳಲ್ಲಿ ಧಾರಾಕಾರ ಮಳೆಯಿಂದ ನೆರೆಹಾವಳಿಯಾಗಿದೆ. ಇಲ್ಲಿಯವರೆಗೆ 19 ಮಂದಿ ಸಾವನ್ನಪ್ಪಿದ್ದಾರೆ. ಈಗ ಈ ಮಳೆಯಿಂದ ಸಾಮಾಜಿಕ ಮಾಧ್ಯಮದಿಂದ ಜಿಹಾದಿ ಮಾನಸಿಕತೆಯ ಮುಸಲ್ಮಾನರು ದುಬೈನಲ್ಲಿ ಹಿಂದೂ ದೇವಸ್ಥಾನ ನಿರ್ಮಾಣ ಮಾಡಿದ್ದರಿಂದ ಅಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಸಾರ ಮಾಡುತ್ತಿದ್ದಾರೆ. ಈ ಸಂದರ್ಭದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ.

1. ಇದರಲ್ಲಿ ದುಬೈನ ಮಳೆಯ ಕೆಲವು ದೃಶ್ಯಗಳನ್ನು ತೋರಿಸುತ್ತಿದ್ದು, ಇದರಲ್ಲಿ, ‘ದುಬೈನಲ್ಲಿ ದೇವಸ್ಥಾನವನ್ನು ನಿರ್ಮಾಣ ಮಾಡಿದ ಬಳಿಕ ಬಿರುಗಾಳಿ ಬಂದಿತು ಮತ್ತು ಧಾರಾಕಾರ ಮಳೆಯಾಯಿತು. ಯಾವ ಸ್ಥಳದಲ್ಲಿ ಅಲ್ಲಾ ಮೂರ್ತಿಪೂಜೆಯನ್ನು ನಿಲ್ಲಿಸಲು ಪೈಗಂಬರರನ್ನು ಕಳುಹಿಸಿದ್ದನೋ, ಇಂದು ಆ ಸ್ಥಳದಲ್ಲಿ ಮೂರ್ತಿ ಪೂಜೆ ಪ್ರಾರಂಭವಾಗಿದೆ.’

2. ಈ ವೀಡಿಯೊವನ್ನು ಇನ್ಸ್ಟಾಗ್ರಾಮ ಮೇಲೆ ‘@ISLAMIC_BOY345’ ಹೆಸರಿನ ಖಾತೆಯಿಂದ ಪ್ರಸಾರವಾಗಿದೆ. ಇದರೊಂದಿಗೆ ಮತಾಂಧ ಮುಸಲ್ಮಾನರಿಂದ ವಿರೋಧವಾಗುತ್ತಿದೆ. `ಅರಬ ದೇಶಗಳಲ್ಲಿ ಅಲ್ಲಾನ ಶುದ್ಧ ಮಾರ್ಗದರ್ಶನವನ್ನು ನೀಡಬೇಕು ಮತ್ತು ಅವರು ಈ ರೀತಿ ಮಾಡಬಾರದು’ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನದ ಮಹಿಳಾ ಪತ್ರಕರ್ತೆಯಿಂದ ಮತಾಂಧ ಮುಸ್ಲಿಮರಿಗೆ ವಿರೋಧ

ಪಾಕಿಸ್ತಾನಿ ಪತ್ರಕರ್ತೆ ನಾಯಲಾ ಇನಾಯತ ಅವರು ಈ ವಿಷಯದ `ಎಕ್ಸ’ ನಲ್ಲಿ ಪೋಸ್ಟ್ ಮಾಡಿ, ಈ ಇಸ್ಲಾಮಿ ‘ಹವಾಮಾನಶಾಸ್ತ್ರಜ್ಞ’, ದುಬೈನಲ್ಲಿ ಹೊಸದಾಗಿ ನಿರ್ಮಿಸಿರುವ ಹಿಂದೂ ದೇವಸ್ಥಾನ ನೆರೆಹಾವಳಿಗೆ ಕಾರಣ ಹೇಗೆ ಆಗಿದೆಯೆಂದು ಹೇಳುತ್ತಾರೆ. ಸ್ತ್ರೀಯರ ವಿಷಯದಲ್ಲಿ ಮಹಿಳೆಯರು ಜೀನ್ಸ್ ಧರಿಸುವುರಿಂದ ಭೂಕಂಪಕ್ಕೆ ಕಾರಣವಾಗಿದೆಯೆಂದು ಎಂದು ಹೇಳಲಾಗುತ್ತದೆ. ಈ ವಿಡಿಯೋ ನೋಡಿದ ನಂತರ ಈಗ ಕೆಲ ಭಾರತೀಯರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಭಾರತದಿಂದಾಗಿ ಬೇರೆ ದೇಶಗಳಲ್ಲಿ ಮಳೆಯಾಗುತ್ತದೆ’ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಒಂದು ವೇಳೆ ದುಬೈ ಮತ್ತು ಕೊಲ್ಲಿ ದೇಶಗಳ ಮರಳುಗಾಡಿನಲ್ಲಿ ಈ ರೀತಿ ಮಳೆಯಾಗುತ್ತಿದ್ದರೆ, ಮುಸಲ್ಮಾನರು ಹಿಂದೂಗಳ ದೇವಸ್ಥಾನಗಳ ವಿಷಯದಲ್ಲಿ ಕೃತಜ್ಞತೆಯನ್ನೇ ವ್ಯಕ್ತಪಡಿಸಬೇಕು. ಜಗತ್ತಿನಲ್ಲಿ ಎಲ್ಲೆಲ್ಲಿ ಬರಗಾಲವಿದೆಯೋ ಆ ಎಲ್ಲ ಸ್ಥಳಗಳಲ್ಲಿ ಈಗ ದೇವಸ್ಥಾನಗಳನ್ನು ನಿರ್ಮಾಣ ಮಾಡಬೇಕು !