India UNSC Seat : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಬದಲಿಸುವ ಅಗತ್ಯ !

ಭಾರತದ ಬೇಡಿಕೆಯನ್ನು ಬೆಂಬಲಿಸಿದ ಅಮೇರಿಕಾ

ನ್ಯೂಯಾರ್ಕ್ (ಅಮೇರಿಕಾ) – ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯನಿರ್ವಹಣೆಯ ಸಂದರ್ಭದ ಬಗ್ಗೆ ನಿರಂತರವಾಗಿ ಪ್ರಶ್ನೆಗಳು ಉದ್ಭವಿಸುತ್ತಿದ್ದು ಈ ಹಿನ್ನೆಲೆಯಲ್ಲಿ ‘ಭದ್ರತಾ ಮಂಡಳಿಯನ್ನು ಬದಲಾಯಿಸುವ ಅಗತ್ಯವಿದೆ’ ಎಂದು ಭಾರತ ನಿರಂತರವಾಗಿ ಬೇಡಿಕೆಯನ್ನು ಮುಂದಿಡುತ್ತಿದೆ. ಈಗ ಅಮೇರಿಕಾ ಕೂಡ ಭಾರತದ ಈ ಬೇಡಿಕೆಗಳಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ. 70 ವರ್ಷಗಳ ಹಿಂದಿನ ಭದ್ರತಾ ಮಂಡಳಿಯು ಇಂದಿನ ವಾಸ್ತವವನ್ನು ನಿಜವಾಗಿಯೂ ಪ್ರತಿಬಿಂಬಿಸುವುದಿಲ್ಲ ಎಂದು ಅಮೇರಿಕಾ ಹೇಳಿಕೆ ನೀಡಿದೆ.

ನಮಗೆ ಬದಲಾವಣೆ ಬೇಕಾಗಿದೆ !

ವಿಶ್ವಸಂಸ್ಥೆಯ ಅಮೇರಿಕೆಯ ರಾಯಭಾರಿ ಲಿಂಡಾ ಥಾಮಸ್-ಗ್ರೀನಫೀಲ್ಡ್ ಅವರು ಟೋಕಿಯೊದಲ್ಲಿ ಮಾಡಿದ ಭಾಷಣದಲ್ಲಿ ರಷ್ಯಾ ಮತ್ತು ಚೀನಾ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಈ ಶಕ್ತಿಶಾಲಿ 15 ಸದಸ್ಯರ ಶಾಖೆಯ ವಿಸ್ತರಣೆಯನ್ನು ವಿರೋಧಿಸುತ್ತವೆ ಎಂದು ಹೇಳಿದರು. ಈ ಹಿಂದೆ `ನಮಗೆ ಭದ್ರತಾ ಮಂಡಳಿಯಲ್ಲಿ ಬದಲಾವಣೆ ಬೇಡ’ ಎಂಬ ಅಭಿಪ್ರಾಯದ ಮೇಲೆ ಅಮೇರಿಕಾ, ಚೀಣಾ ಮತ್ತು ರಶಿಯಾಗಳು ಒಮ್ಮತವನ್ನು ಹೊಂದಿದ್ದವು. ಆದರೆ 2021 ರಲ್ಲಿ ಅಮೇರಿಕಾ ಇದರಿಂದ ತನ್ನನ್ನು ಪ್ರತ್ಯೇಕಗೊಳಿಸಿ, ಬದಲಾವಣೆ ಆವಶ್ಯಕವಾಗಿದೆಯೆಂದು ಸ್ಪಷ್ಟಪಡಿಸಿತು. 70 ವರ್ಷಗಳ ಹಿಂದಿನ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇಂದಿನ ಕಾಲದ ವಾಸ್ತವವನ್ನು ಪ್ರತಿಬಿಂಬಿಸುವುದಿಲ್ಲ, ನಮ್ಮ ಬಳಿ 193 ಸದಸ್ಯ ರಾಷ್ಟ್ರಗಳಿವೆ. ಇದರಲ್ಲಿ ಆಫ್ರಿಕೆಗೆ ಶಾಶ್ವತ ರೂಪದ ಸ್ಥಾನವಿಲ್ಲ, ದಕ್ಷಿಣ ಅಮೇರಿಕಾಗೆ ಶಾಶ್ವತ ರೂಪದ ಸ್ಥಾನವಿಲ್ಲ ಮತ್ತು ಪ್ರಪಂಚದ ಇತರ ದೇಶಗಳು ಮತ್ತು ಇತರ ಪ್ರದೇಶಗಳ ಪರಿಷತ್ತಿನಲ್ಲಿ ಗಮನಾರ್ಹ ಪ್ರಾತಿನಿಧ್ಯವನ್ನು ಹೊಂದಿಲ್ಲ; ಆದ್ದರಿಂದ, ನಾವು `ಜಿ-4 ಸದಸ್ಯ’ಆಗಿರುವ ಜಪಾನ್, ಜರ್ಮನಿ ಮತ್ತು ಭಾರತದೊಂದಿಗೆ ನಡೆದ ಚರ್ಚೆಯಲ್ಲಿ ಈ ರಾಷ್ಟ್ರಗಳು ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗುವುದನ್ನು ನಾವು ಬೆಂಬಲಿಸುತ್ತೇವೆ ಎಂದು ಅಮೇರಿಕದ ಅಧ್ಯಕ್ಷರು ಕಳೆದ ವರ್ಷ ತಮ್ಮ ಭಾಷಣದಲ್ಲಿ ಇದರ ಪುನರುಚ್ಚಾರ ಮಾಡಿದ್ದರು. ಅಮೇರಿಕದ ಅಧ್ಯಕ್ಷರು ಮಾತನಾಡಿ ಇದನ್ನು ಸಾಧಿಸುವುದು ಸುಲಭದ ಕೆಲಸವಲ್ಲ ಎಂಬುದು ನನಗೆ ತಿಳಿದಿದೆ . ಇದಕ್ಕಾಗಿ ಸಾಕಷ್ಟು ಕೆಲಸ ಮಾಡಬೇಕಾಗುತ್ತದೆ. ಅದನ್ನು ಹೇಗೆ ಮಾಡುವುದು? ಈ ವಿಷಯದ ಬಗ್ಗೆ 193 ಸದಸ್ಯರಲ್ಲಿ ಒಮ್ಮತವಿಲ್ಲ; ಆದರೆ ನಮಗೆ ಬದಲಾವಣೆ ಬೇಕಾಗಿದೆ ಮತ್ತು ಅದು ಹೇಗೆ ಮತ್ತು ಯಾವ ಸ್ವರೂಪದಲ್ಲಿರುವುದು? ಎಂದು ಶೋಧಿಸಲು ನಮಗೆ ಒಟ್ಟಿಗೆ ಕಾರ್ಯ ಮಾಡಬೇಕಾಗುವುದು; ಆದರೆ ಇದು ಎಂತಹ ವಿಷಯವಾಗಿದೆಯೆಂದರೆ, ಇದಕ್ಕಾಗಿ ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಮತ್ತು ಅದನ್ನು ಯಶಸ್ವಿಗೊಳಿಸಲು ನಾವು ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.

ಭಾರತದ ಬೇಡಿಕೆ

ವಿಶ್ವಸಂಸ್ಥೆಯಲ್ಲಿ ಬದಲಾವಣೆ ಮಾಡುವ ಆವಶ್ಯಕತೆ ಇದೆಯೆಂದು ಭಾರತ ಹಲವು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದೆ. ಈ ಮಂಡಳಿಯ ಶಾಶ್ವತ ಸದಸ್ಯತ್ವಕ್ಕೆ ಭಾರತ ಅರ್ಹವಾಗಿದೆ ಎಂಬುದು ಭಾರತದ ನಿಲುವಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಸುಧಾರಣೆಗಳು

ಸದ್ಯಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 5 ಖಾಯಂ ಸದಸ್ಯ ರಾಷ್ಟ್ರಗಳಿವೆ. ಇದರಲ್ಲಿ ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಮತ್ತು ಅಮೇರಿಕಾ, ಒಬ್ಬ ಖಾಯಂ ಸದಸ್ಯನಿಗೆ ಯಾವುದೇ ನಿರ್ದಿಷ್ಟ ಠರಾವಿನ ಮೇಲೆ ( ವೀಟೋ) ಬಳಸಲು ಹಕ್ಕಿದೆ. ಕಳೆದ ತಿಂಗಳು, ಭಾರತವು ಭದ್ರತಾ ಮಂಡಳಿಯ ಸುಧಾರಣೆಗಳ ವಿವರವಾದ ಮಾದರಿಯನ್ನು ಪ್ರಸ್ತುತಪಡಿಸಿತ್ತು. ಇದರಲ್ಲಿ 6 ಕಾಯಂ ಸ್ವರೂಪಿ ಮತ್ತು 4 ಅಥವಾ 5 ಕಾಯಂ ಸದಸ್ಯರಲ್ಲದವರನ್ನು ಜೋಡಿಸಿ ಭದ್ರತಾ ಮಂಡಳಿಯ ಸದಸ್ಯತ್ವವನ್ನು ಸದ್ಯದ 15 ರಿಂದ 25 ವರೆಗೆ ಹೆಚ್ಚಿಸುವ ಪ್ರಸ್ತಾವನೆಯಿದೆ.