ಮುರ್ಶಿದಾಬಾದನಲ್ಲಿ ಮೆರವಣಿಗೆಯಲ್ಲಿ ನಾಡಬಾಂಬ ಸ್ಫೋಟ !
ಕೋಲಕಾತಾ (ಬಂಗಾಳ) – ರಾಮನವಮಿ ದಿನ ಬಂಗಾಳದ ಕೆಲವೆಡೆ ಹಿಂಸಾಚಾರ ನಡೆದಿದೆ. ಮುರ್ಶಿದಾಬಾದ ಜಿಲ್ಲೆಯ ಬೆಲಡಾಂಗಾ ನಗರದ ಶಕ್ತಿಪುರನಲ್ಲಿ ಮಸೀದಿ ಹತ್ತಿರ ರಾಮನವಮಿಯ ಮೆರವಣಿಗೆ ಬಂದಾಗ ಮತಾಂಧ ಮುಸಲ್ಮಾನರು ದಾಳಿ ನಡೆಸಿದರು. ಮತ್ತು ಮೇಲ್ಛಾವಣಿಯಿಂದ ಕಲ್ಲು ತೂರಾಟ ಮಾಡಿದರು. (‘ಮೇಲ್ಛಾವಣಿಯ ಮೇಲೆ ಕಲ್ಲುಗಳನ್ನು ಇಡಲಾಗಿದೆಯೇ?’ ಎಂದು ಮೆರವಣಿಗೆ ಮೊದಲು ಪೊಲೀಸರು ಏಕೆ ತನಿಖೆಯನ್ನು ಮಾಡಲಿಲ್ಲ ? – ಸಂಪಾದಕರು) ಈ ಸಮಯದಲ್ಲಿ ನಾಡಬಾಂಬ ಸ್ಫೋಟಿಸಲಾಗಿದೆ ಎಂದು ಹೇಳಲಾಗುತ್ತಿದೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ಶಕ್ತಿಪುರದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಜಿಲ್ಲೆಯ ಮಾಣಿಕ್ಯಾಹಾರ ಮತ್ತು ಮೇದಿನಿಪುರ ಇಗ್ರಾದಲ್ಲಿಯೂ ಹಿಂದೂಗಳ ಮೆರವಣಿಗೆಯ ಮೇಲೆ ದಾಳಿ ನಡೆದಿದೆ. ಮೂವರೂ ಸ್ಥಳಗಳಲ್ಲಿ ನಡೆದ ಹಿಂಸಾಚಾರದಲ್ಲಿ 18 ಜನರು ಗಾಯಗೊಂಡಿದ್ದಾರೆ. ಇದರಲ್ಲಿ 2 ಅಪ್ರಾಪ್ತ ಹುಡುಗರು, ಓರ್ವ ಮಹಿಳೆ ಮತ್ತು ಕೆಲವು ಪೊಲೀಸ ಸಿಬ್ಬಂದಿಗಳು ಸೇರಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಆಡಳಿತವು ಹೆಚ್ಚಿನ ಸಂಖ್ಯೆಯ ಕೇಂದ್ರ ಪಡೆಗಳನ್ನು ನಿಯೋಜಿಸಿದೆ. ಈ ಪ್ರಕರಣದಲ್ಲಿ ಪೊಲೀಸರ ಅಧಿಕೃತ ಹೇಳಿಕೆ ಇದುವರೆಗೂ ಹೊರಬಂದಿಲ್ಲ.
ಮಾಣಿಕ್ಯಹಾರ ಮತ್ತು ಮೇದಿನಿಪುರನಲ್ಲಿಯೂ ದಾಳಿ
1. ಶಕ್ತಿಪುರದಂತೆ ಮುರ್ಶಿದಾಬಾದ್ ಜಿಲ್ಲೆಯ ಮಾಣಿಕ್ಯಹಾರ ಪ್ರದೇಶದಲ್ಲಿಯೂ ಮೆರವಣಿಗೆಯ ಮೇಲೆ ದಾಳಿ ನಡೆಸಲಾಗಿದೆ. ಮಾಣಿಕ್ಯಹಾರ ಪರಿಸರದಲ್ಲಿಯೂ ದಾಳಿಕೋರರು ಹಿಂದೂಗಳ ಮನೆಗಳು ಮತ್ತು ಇತರ ಮನೆಗಳಿಗೆ ಬೆಂಕಿ ಹಚ್ಚಿದರು ಮತ್ತು ಲೂಟಿ ಮಾಡಿದರು.
2. ಬಂಗಾಳದ ಮೇದಿನಿಪುರದ ಇಗ್ರಾದಲ್ಲಿ ಮೆರವಣಿಗೆಯ ಮೇಲೆ ದಾಳಿಗಳು ನಡೆದವು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಭಾಜಪದಿಂದ ತೃಣಮೂಲ ಕಾಂಗ್ರೆಸ್ ಮೇಲೆ ಟೀಕೆ
1. ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಮಮತಾ ಬ್ಯಾನರ್ಜಿಯವರ ಪೊಲೀಸರು ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಮತ್ತೊಮ್ಮೆ ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ. ‘ಹಿಂದೂಗಳ ಮೇಲೆ ಬಹಿರಂಗವಾಗಿ ಹಲ್ಲೆ ನಡೆಸಲಾಯಿತು ಮತ್ತು ಮಮತಾ ಬ್ಯಾನರ್ಜಿ ಅವರ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು’ ಎಂದು ಅವರು ಆರೋಪಿಸಿದರು.
2. ಭಾಜಪದ ಪ್ರದೇಶ ಕಾರ್ಯದರ್ಶಿ ಜಗನ್ನಾಥ ಚಟ್ಟೋಪಾಧ್ಯಾಯ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಪೊಲೀಸರ ಕೆಲಸವಾಗಿದೆ. ನಾವು ಚುನಾವಣಾ ಆಯೋಗಕ್ಕೆ ಅಲ್ಲಿನ ಪೊಲೀಸ್ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ವಿನಂತಿಸುತ್ತೇನೆ.
3. ಭಾಜಪ ಪ್ರದೇಶಾಧ್ಯಕ್ಷ ಸುಕಾಂತ ಮಜುಂದಾರ ಇವರು ಹಿಂಸಾಚಾರದ ಘಟನೆಯ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
4. ಭಾಜಪ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ ಮಾಲವಿಯಾ ಅವರು ಹಿಂಸಾಚಾರದ ಕೆಲವು ವೀಡಿಯೊಗಳನ್ನು ‘X’ ನಲ್ಲಿ ಹಂಚಿಕೊಂಡಿದ್ದಾರೆ. ಅವರು, ಮಮತಾ ಬ್ಯಾನರ್ಜಿಯವರು ರಾಮನವಮಿಯ ಮೆರವಣಿಗೆಗೆ ಭದ್ರತೆಯನ್ನು ಒದಗಿಸುವಲ್ಲಿ ಮತ್ತೊಮ್ಮೆ ವಿಫಲರಾಗಿದ್ದಾರೆ. ಮಮತಾ ಬ್ಯಾನರ್ಜಿ ಅವರು ಕಳೆದ ಕೆಲವು ದಿನಗಳಲ್ಲಿ ತಮ್ಮ ಪ್ರಚಾರ ಸಭೆಗಳಲ್ಲಿ ಮಾಡುವ ಜನರನ್ನು ಪ್ರಚೋದಿಸುವ ಭಾಷಣಗಳು ಹಿಂಸಾಚಾರದ ಘಟನೆಗಳಿಗೆ ಕಾರಣವಾಗಿದೆ ಎಂದು ಅವರು ಬರೆದಿದ್ದಾರೆ.
BJP’s Suvendu Adhikari blames Mamata Banerjee for Bengal’s Ram Navami clasheshttps://t.co/FSuRMiMpvx pic.twitter.com/Q7kqzTcHA9
— Hindustan Times (@htTweets) April 18, 2024
ತೃಣಮೂಲ ಕಾಂಗ್ರೆಸ್ಸಿನಿಂದ ಭಾಜಪ ಮೇಲೆ ಟೀಕೆ
ಮತ್ತೊಂದೆಡೆ, ತೃಣಮೂಲ ಕಾಂಗ್ರೆಸ್ ಭಾಜಪ ಮೇಲೆ ಚುನಾವಣಾ ಪೂರ್ವ ಉದ್ವಿಗ್ನತೆಯನ್ನು ನಿರ್ಮಾಣಮಾಡಿದೆಯೆಂದು ಆರೋಪಿಸಿದೆ. ತೃಣಮೂಲದ ನಾಯಕ ಶಂತನೂ ಸೇನ ಮಾತನಾಡಿ, ಭಾಜಪ ಚುನಾವಣಾ ಪೂರ್ವ ಗಲಭೆಯನ್ನು ನಡೆಸಲು ಪ್ರಯತ್ನಿಸುತ್ತಿದೆ. ಇಂತಹ ಹಿಂಸಾತ್ಮಕ ಘಟನೆಗಳನ್ನು ನಾವು ನಿಷೇಧಿಸುತ್ತೇವೆ ಇದು ಭಾಜಪ ಕೆಲಸವಾಗಿದೆಯೆಂದು ಎಂದು ಹೇಳಿದ್ದಾರೆ.
ಭಾಜಪ ಕಾರ್ಯಕರ್ತರಿಂದ ಕಾಂಗ್ರೆಸ್ ಪ್ರದೇಶಾಧ್ಯಕ್ಷರ ವಿರೋಧ
ಮುರ್ಶಿದಾಬಾದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಗಾಯಾಳುಗಳನ್ನು ನೋಡಲು ಬಂದಿದ್ದ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಅಧೀರ ರಂಜನ ಚೌಧರಿ ವಿರುದ್ಧ ಭಾಜಪ ಕಾರ್ಯಕರ್ತರು ‘ಮರಳಿ ಹೋಗು’ ಎಂದು ಘೋಷಣೆ ಕೂಗಿದರು. ಈ ಸಮಯದಲ್ಲಿ ಭಾಜಪ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಅಧೀರ ರಂಜನ ಚೌಧರಿ ಅವರ ಮೇಲೆ ಭಾಜಪ ನಾಯಕನನ್ನು ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ.
ಕಳೆದ ವರ್ಷವೂ ಹಿಂಸಾಚಾರ ನಡೆದಿತ್ತು !
ಕಳೆದ ವರ್ಷ ರಾಮ ನವಮಿಯ ದಿನ ಬಂಗಾಳದಲ್ಲಿ ಹಿಂಸಾಚಾರದ ಘಟನೆಗಳು ನಡೆದಿದ್ದವು. ಉತ್ತರ ದಿನಾಜಪುರದ ದಾಲಖೋಲಾ, ಹಾವಡಾದ ಶಿವಪುರ ಮತ್ತು ರಿಸರಾ ಹಾಗೂ ಹುಗಳಿಯ ಶ್ರೀರಾಮಪುರದಲ್ಲಿ ರಾಮನವಮಿಯ ಮೆರವಣಿಗೆಯ ಮೇಲೆ ದಾಳಿ ನಡೆದಿತ್ತು. ಇದರಲ್ಲಿ ಅನೇಕರು ಗಾಯಗೊಂಡಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ ಈ ದಾಳಿಯ ತನಿಖೆ ನಡೆಸುತ್ತಿದೆ.
ಮರ್ಷಿದಾಬಾದ್ ಹಿಂಸಾಚಾರದ ಹಿಂದೆ ಬಿಜೆಪಿ ! – ಮಮತಾ ಬ್ಯಾನರ್ಜಿ ಆರೋಪ
ಮುರ್ಷಿದಾಬಾದ್‌ನಲ್ಲಿ ನಡೆದ ರಾಮನವಮಿ ಹಿಂಸಾಚಾರಕ್ಕೆ ಬಿಜೆಪಿಯೇ ಕಾರಣ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಅವರು, ಮುರ್ಷಿದಾಬಾದ್‌ನಲ್ಲಿ ರಾಮನವಮಿ ಮೆರವಣಿಗೆ ವೇಳೆ ಸ್ಫೋಟ ಸಂಭವಿಸಿದೆ. ಇದರಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಎಲ್ಲವೂ ಪೂರ್ವ ಯೋಜಿತವಾಗಿತ್ತು. ಮುರ್ಷಿದಾಬಾದ್‌ನ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಅವರನ್ನು ರಾಮ ನವಮಿಯ ಒಂದು ದಿನ ಮೊದಲು ತೆಗೆದುಹಾಕಲಾಯಿತು, ಇದರಿಂದಾಗಿ ಅವರು (ಬಿಜೆಪಿ) ರಾಜ್ಯದಲ್ಲಿ ಹಿಂಸಾಚಾರವನ್ನು ಪ್ರಚೋದಿಸಬಹುದು. ಇದಕ್ಕೂ ಮುನ್ನ ಇದೇ ಸ್ಥಳದಲ್ಲಿ ಬಿಜೆಪಿ ಶಾಸಕರೊಬ್ಬರು ಗದ್ದಲ ಸೃಷ್ಟಿಸಿದ್ದರು. ರಾಮನವಮಿ ಮೆರವಣಿಗೆಯಲ್ಲಿ ಕತ್ತಿ ಹಿಡಿದು ಬಂದಿದ್ದು ಏಕೆ ? ನಾನು ‘ಬಿಜೆಪಿ ಆಯೋಗ’ಕ್ಕೆ (ಚುನಾವಣಾ ಆಯೋಗ), ರಾಮನವಮಿಯ ಮೊದಲು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಅವರನ್ನು ಏಕೆ ತೆಗೆದುಹಾಕಲಾಯಿತು? ಇವರು ಬಿಜೆಪಿಗೆ ಸಹಾಯ ಮಾಡಲು ಈ ರೀತಿ ಮಾಡಿದ್ದಾರಾ ? ಎಂದು ಪ್ರಶ್ನೆ ಕೇಳಿದ್ದಾರೆ.
ಮಮತಾ ಬ್ಯಾನರ್ಜಿ ಇವರು ರಾಮನವಮಿಯ ಹಿಂದಿನ ದಿನ ಬಿಜೆಪಿಯನ್ನು ಆರೋಪಿಸುತ್ತಾ, ‘ಭಾಜಪ ರಾಮನವಮಿಯ ದಿನ ರಾಜ್ಯದಲ್ಲಿ ಗಲಭೆ ಸೃಷ್ಟಿಸುವ ಉದ್ದೇಶ ಇತ್ತು’, ಎಂದು ದಾವೆ ಮಾಡಿದ್ದರು.
West Bengal: Chief Minister and TMC supremo Mamata Banerjee blamed Bharatiya Janata Party (BJP) for ‘instigating’ violence during the Ram Navami celebrations in the state’s Murshidabad district. @akankshaswarups | #RamNavami #BJP #TMC pic.twitter.com/cMXJBFQ3zq
— News18 (@CNNnews18) April 18, 2024
ಸಂಪಾದಕೀಯ ನಿಲುವು
|