Stones Pelted on Ram Navami Procession: ಬೊಕಾರೊ (ಜಾರ್ಖಂಡ್)ದಲ್ಲಿ ಮಸೀದಿ ಬಳಿ ರಾಮನವಮಿ ಮೆರವಣಿಗೆ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ : 12 ಮಂದಿಗೆ ಗಾಯ

ಬೊಕಾರೊದಲ್ಲಿ (ಜಾರ್ಖಂಡ್) – ರಾಮ ನವಮಿಯ ಸಂದರ್ಭದಲ್ಲಿ ಹೊರಡಬೇಕಿದ್ದ ಮೆರವಣಿಗೆಯನ್ನು ಮತಾಂಧ ಮುಸ್ಲಿಮರು ಮಸೀದಿಯ ಮುಂದೆ ಬರುತ್ತಿದ್ದಂತೆ ನಿಲ್ಲಿಸಿದರು. ಬಳಿಕ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಕೆಲವು ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ. ಇದರಲ್ಲಿ 1 2ಕ್ಕೂ ಹೆಚ್ಚು ಹಿಂದೂಗಳು ಗಾಯಗೊಂಡಿದ್ದಾರೆ. ಜೊತೆಗೆ ಒಬ್ಬ ಪೊಲೀಸ್ ಪೇದೆಯೂ ಗಾಯಗೊಂಡಿದ್ದಾರೆ. ಸದ್ಯ ಈ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸೆಕ್ಷನ್ 144 (ಗುಂಪು ನಿಷೇಧ) ಜಾರಿಗೊಳಿಸಲಾಗಿದೆ. ವಿಶೇಷವೆಂದರೆ ಪೊಲೀಸರು ಡ್ರೋನ್ ಮೂಲಕ ಈ ಮಾರ್ಗದಲ್ಲಿ ಮನೆಗಳ ಮೇಲ್ಛಾವಣಿಯ ಮೇಲೆ ನಿಗಾ ವಹಿಸಿದ್ದರು ಮತ್ತು ಛಾವಣಿಯ ಮೇಲೆ ಇರುವ ಕಲ್ಲುಗಳನ್ನು ತೆಗೆಯುವಂತೆ ಎಚ್ಚರಿಕೆ ನೀಡಿದ್ದರು.

ಸಂಪಾದಕೀಯ ನಿಲುವು

ಭಾರತದಲ್ಲಿ ರಾಮನವಮಿ ಮೆರವಣಿಗೆ ಮಾಡುವುದು ಮತ್ತು ಮಸೀದಿ ಬಳಿಯ ಮಾರ್ಗದಲ್ಲಿ ಕೊಂಡೊಯ್ಯುವುದು ಅಪರಾಧವಾಗಿದೆ, ಈ ರೀತಿಯ ಚಿತ್ರಣ ಅನೇಕ ವರ್ಷಗಳಿಂದ ಕಂಡುಬಂದಿದೆ; ಆದರೆ ಇನ್ನೂ ಆಡಳಿತಗಾರರು ಮತ್ತು ಪೊಲೀಸರು ಹಿಂದೂಗಳನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ. ಇದು ಬಹುಸಂಖ್ಯಾತ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ