ದೂರಿನ ನಂತರ ಪರಾರಿ !
(ಇಮಾಮ್ ಎಂದರೆ ಮಸೀದಿಯಲ್ಲಿ ನಮಾಜ ಕಲಿಸುವವ)

ರಾಯಪುರ – ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯಲ್ಲಿ ಮಸೀದಿಯೊಂದರ ಇಮಾಮ್ ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಇಮಾಮ್ ಹೆಸರು ಗುಲಾಂ ಗೌಸ್ ಆಗಿದ್ದು, ನೀರು ಕೇಳಲು ಮಹಿಳೆಯ ಮನೆಗೆ ನುಗ್ಗಿದ್ದನು. ಪ್ರಸಾರ ಮಾಧ್ಯಮಗಳ ವರದಿಯ ಪ್ರಕಾರ, ಸೂರಜ್‌ಪುರ ಜಿಲ್ಲೆಯ ಚೌಕಿ ಪ್ರದೇಶದ ಬಸದೈಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮಸೀದಿಯೊಂದರಲ್ಲಿ ಇಮಾಮ್ ಗುಲಾಮ್ ಘೌಸ್ ಸ್ಥಳೀಯ ಜನರಿಗೆ ನಮಾಜ್ ಕಲಿಸುತ್ತಿದ್ದ. 26 ವರ್ಷದ ಸಂತ್ರಸ್ತೆಯ ಮನೆ ಮಸೀದಿಯಿಂದ ಕಾಲ್ನಡಿಗೆಯ ದೂರದಲ್ಲಿದೆ. ಏಪ್ರಿಲ್ 10 ರಂದು ಸಂಜೆ, ಇಮಾಮ್ ಸಂತ್ರಸ್ತೆಯ ಮನೆಗೆ ಹೋಗಿ ತನ್ನ ಗಂಡನ ಬಗ್ಗೆ ಕೇಳುತ್ತಾ ಮನೆಗೆ ನುಗ್ಗಿದ. ಮಹಿಳೆ ಆತ ಪರಿಚಯಸ್ತ ಎಂದು ಮನೆಯೊಳಗೆ ಪ್ರವೇಶಿಸಲು ಅವಕಾಶ ನೀಡಿದ್ದಾಳೆ. ಗುಲಾಂ ಗೌಸ್ ನೀರು ಕೇಳಿದ. ಮಹಿಳೆ ನೀರಿನಿಂದ ಹಿಂತಿರುಗಿದಾಗ, ಇಮಾಮ್ ಅವಳನ್ನು ಕೆಟ್ಟ ಉದ್ದೇಶದಿಂದ ಹಿಡಿದನು. ಸಂತ್ರಸ್ತೆಯು ವಿರೋಧಿಸಲು ಪ್ರಯತ್ನಿಸಿದಾಗ ಗುಲಾಂ ಗೌಸ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ನಂತರ ಮಹಿಳೆಯನ್ನು ಬೆದರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಸಂತ್ರಸ್ತೆ ತನ್ನ ಪತಿಗೆ ಘಟನೆಯನ್ನು ವಿವರಿಸಿದ್ದಾಳೆ.
ಸಂತ್ರಸ್ತೆಯ ಪತಿ ಇಮಾಮ್ ವಿರುದ್ಧ ಬಸದೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಗುಲಾಂ ಗೌಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾದ ತಕ್ಷಣ ಗುಲಾಂ ಗೌಸ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವು‘ಭಾರತದಲ್ಲಿ ಅಲ್ಪಸಂಖ್ಯಾತರು ಅಪಾಯದಲ್ಲಿದ್ದಾರೆ’ ಎಂದು ಸುಳ್ಳು ವರದಿ ನೀಡುವ ಅಮೆರಿಕ ಈಗ ‘ಭಾರತದಲ್ಲಿ ಅಲ್ಪಸಂಖ್ಯಾತರಿಂದ ಇತರರು ಅಪಾಯದಲ್ಲಿದ್ದಾರೆ’ ಎಂದು ವರದಿ ಮಾಡುವ ಧೈರ್ಯ ತೋರಿಸುವುದೇ ? |
ಹಿಂಸಾಚಾರಕ್ಕೆ ತಿರುಗಿದ ‘ಕಾಕರೋಚ್ ಜನತಾ ಪಾರ್ಟಿ’ಯ ಸಂಸತ್ ಭವನ ಚಲೋ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ
5 ವರ್ಷಗಳಲ್ಲಿ 1 ಸಾವಿರ 676 ಪ್ರಕರಣಗಳು ದಾಖಲು: ಕೋಟ್ಯಂತರ ರೂಪಾಯಿ ಮೌಲ್ಯದ ಟಿಕೆಟ್ ಜಪ್ತಿ : Railway Tickets Seized
ಬಂಗಾಳದಲ್ಲಿ ಸೆಪ್ಟೆಂಬರ್ 1 ರಿಂದ ಎಲ್ಲಾ ಸರಕಾರಿ ಕಲಾಪಗಳು ಬಂಗಾಳಿ ಭಾಷೆಯಲ್ಲೇ ನಡೆಯಲಿವೆ! – ಮುಖ್ಯಮಂತ್ರಿ : Only Bengali in Bengal
‘ಹಿಂದೂ ದೇವತೆಗಳು ಮಾಂಸ-ಮದ್ಯ ಸೇವಿಸುತ್ತಿದ್ದರು’ ಎಂದು ಹೇಳುವ ಧ್ರುವ್ ರಾಠಿಯ ವೀಡಿಯೊವನ್ನು ೨೪ ಗಂಟೆಗಳಲ್ಲಿ ತೆಗೆದುಹಾಕಿ !
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News