ಕೃತಕ ಬುದ್ಧಿಮತ್ತೆ (‘ಆರ್ಟಿಫಿಶಿಯಲ್‌ ಇಂಟಲಿಜನ್ಸ್‌’ನ) ಮೂಲಕ ಬಿಡಿಸಿದ ಶ್ರೀರಾಮನ ಚಿತ್ರ !

೧. ಸಾಮಾಜಿಕ ಮಾಧ್ಯಮದಿಂದ ಕೃತಕ ಬುದ್ಧಿಮತ್ತೆಯ ಆಧಾರದಲ್ಲಿ ರಚಿತ ಶ್ರೀರಾಮನ ಚಿತ್ರ ಸಿಗುವುದು ಮತ್ತು ‘ಅದರಲ್ಲಿ ಶ್ರೀರಾಮನ ಸ್ಪಂದನಗಳಿಲ್ಲ’, ಎಂದು ಸನಾತನದ ಸಾಧಕಿಯರು ಹೇಳುವುದು

‘ನನಗೆ ಸಾಮಾಜಿಕ ಮಾಧ್ಯಮದಿಂದ ಪ್ರಭು ಶ್ರೀರಾಮನ ಒಂದು ಚಿತ್ರ ಸಿಕ್ಕಿತು. ಆ ಚಿತ್ರದ ಕೆಳಗೆ ‘ಈ ಚಿತ್ರವನ್ನು ಕೃತಕ ಬುದ್ಧಿಮತ್ತೆಯ (‘ಆರ್ಟಿಫಿಶಿಯಲ್‌ ಇಂಟಲಿಜನ್ಸ್‌’ನ) ಆಧಾರದಿಂದ ರಚಿಸಲಾಗಿದೆ’, ಎಂದು ಬರೆಯಲಾಗಿತ್ತು. ನಾನು ಆ ಚಿತ್ರವನ್ನು (ಗೋವಾದ) ರಾಮನಾಥಿಯ ಸನಾತನದ ಆಶ್ರಮಕ್ಕೆ ಕಲೆಯ ಮಾಧ್ಯಮದಿಂದ ಸಾಧನೆಯನ್ನು ಮಾಡುವ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಭಾವಿನಿ ಕಾಪಾಡಿಯಾ ಮತ್ತು ಸೌ. ಜಾಹ್ನವಿ ಶಿಂದೆ ಇವರಿಗೆ ಕಳುಹಿಸಿದೆ. ಆ ಚಿತ್ರವನ್ನು ನೋಡಿ ಅವರು ನನಗೆ, ‘ಈ ಚಿತ್ರದಲ್ಲಿ ಶ್ರೀರಾಮನ ಸ್ಪಂದನಗಳ ಅರಿವಾಗುವುದಿಲ್ಲ’, ಎಂದು ತಿಳಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ‘ಈ ಚಿತ್ರ ರಾಮಾಯಣದಲ್ಲಿನ ಶ್ರೀರಾಮನ ವರ್ಣನೆಗೆ ಹೋಲಿಕೆಯಾಗುವುದಿಲ್ಲ’, ಎಂದು ಶ್ರೀರಾಮನ ಸ್ಥೂಲ ರೂಪದ ವರ್ಣನೆಯ ಬಗ್ಗೆ ಇರುವ ವ್ಯತ್ಯಾಸಗಳ ಬಗ್ಗೆ ಪ್ರತಿಕ್ರಿಯೆಗಳು ಓದಲು ಸಿಗುವುದು ನಂತರ ಸಾಮಾಜಿಕ ಜಾಲತಾಣಗಳಲ್ಲಿ ‘ಈ ಚಿತ್ರದಲ್ಲಿ ಶ್ರೀರಾಮನ ಬಣ್ಣ, ಕೇಶರಚನೆ ಇತ್ಯಾದಿ ರಾಮಾಯಣದ ಶ್ರೀರಾಮನ ವರ್ಣನೆಗೆ ಹೋಲಿಕೆ ಯಾಗುವುದಿಲ್ಲ’, ಎಂಬ ಮಾಹಿತಿಯನ್ನು ಓದಿದೆ. ಸಮಾಜದ ಕೆಲವು ಜನರಿಗೆ ‘ಶ್ರೀರಾಮನ ಸ್ಥೂಲದ ವರ್ಣನೆ ಈ ಚಿತ್ರದೊಂದಿಗೆ ಹೋಲಿಕೆಯಾಗುವುದಿಲ್ಲ’, ಎಂದು ಅರಿವಾಗುತ್ತಿತ್ತು; ಆದರೆ ಸನಾತನದ ಸಾಧಕಿಯರಿಗೆ ಈ ಚಿತ್ರದಲ್ಲಿ ಸೂಕ್ಷ್ಮದಿಂದ ಶ್ರೀರಾಮನ ಸ್ಪಂದನಗಳ ಅರಿವಾಗಲಿಲ್ಲ. ಅವು ಇತರ ಯಾರಿಗೂ ಅರಿವಾಗಲಿಲ್ಲ.

ಶ್ರೀ. ರೂಪೇಶ ಲಕ್ಷ್ಮಣ ರೆಡಕರ

೨. ಕೃತಕ ಬುದ್ಧಿಮತ್ತೆಯ ಮಿತಿ !

‘ಕೃತಕ ಬುದ್ಧಿಮತ್ತೆಗೆ ಎಷ್ಟೇ ಮಾಹಿತಿ ನೀಡಿದರೂ ಅದು ರಚಿಸಿದ ಈ ದೇವತೆಯ ಚಿತ್ರದಲ್ಲಿ ಆ ದೇವತೆಯ ಸ್ಪಂದನಗಳು ಬಂದಿವೆ’, ಎಂದು ಖಚಿತವಾಗಿ ಹೇಳಲು ಬರುವುದಿಲ್ಲ. ಅದಕ್ಕಾಗಿ ‘ಸೂಕ್ಷ್ಮ ಸ್ಪಂದನಗಳನ್ನು ತಿಳಿಯಬಲ್ಲ ಸಾಧಕರದ್ದೇ ಆವಶ್ಯಕತೆ ಇದೆ’, ಎಂಬುದು ನನ್ನ ಗಮನಕ್ಕೆ ಬಂದಿತು. ‘ಶ್ರೀರಾಮನ ಚಿತ್ರವನ್ನು ‘ಕೃತಕ ಬುದ್ಧಿಮತ್ತೆ’ಯಿಂದ ರಚಿಸಿದರೆ ಅದು ಯಾವುದೇ ತಪ್ಪುಗಳಿಲ್ಲದೇ ಸರಿಯಾಗಿಯೇ ಇರುತ್ತದೆ’, ಎಂಬ ನಂಬಿಕೆ ಇರುವ ಅನೇಕ ಜನರು ಆ ಚಿತ್ರವನ್ನು ನೋಡಿ ಭ್ರಮೆಗೊಳಗಾದರು; ಆದರೆ ಸ್ಪಂದನಗಳನ್ನು ತಿಳಿಯಬಲ್ಲ ಸನಾತನದ ಸಾಧಕಿಯರು ಭ್ರಮೆಗೆ ಒಳಗಾಗಲಿಲ್ಲ.

೩. ಸೂಕ್ಷ್ಮ ಸ್ಪಂದನಗಳನ್ನು ಗುರುತಿಸಲು ಕಲಿಸುವ ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಅರಿವಾದ ಅದ್ವಿತೀಯತೆ !

ಪ.ಪೂ. ಡಾಕ್ಟರರು (ಪರಾತ್ಪರ ಗುರು ಡಾ. ಆಠವಲೆಯರು) ಸೂಕ್ಷ್ಮದ ಪ್ರಯೋಗಗಳ ಮೂಲಕ ಸಾಧಕರಿಗೆ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಆಚೆಗಿನ, ಅಂದರೆ ಸೂಕ್ಷ್ಮದ ಸ್ಪಂದನಗಳನ್ನು ಅನುಭವಿಸಲು ಕಲಿಸಿದರು ಮತ್ತು ಈಗಲೂ ಕಲಿಸುತ್ತಿದ್ದಾರೆ. ಇದರಿಂದ ಸನಾತನದ ಅನೇಕ ಸಾಧಕರಲ್ಲಿ ಯಾವುದಾದರೊಂದು ವಸ್ತುವಿನ ಕಡೆಗೆ ಸೂಕ್ಷ್ಮ ಸ್ಪಂದನಗಳ ದೃಷ್ಟಿಕೋನದಿಂದ ನೋಡುವ ಮತ್ತು ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಕ್ಷಮತೆ ನಿರ್ಮಾಣವಾಗಿದೆ.

ಇಂತಹ ಅದ್ವಿತೀಯ ಬೋಧನೆಯನ್ನು ನೀಡುವ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೋಟಿ ಕೋಟಿ ವಂದನೆಗಳು !’

– ಶ್ರೀ. ರೂಪೇಶ ಲಕ್ಷ್ಮಣ ರೆಡಕರ, ದೇವದ, ಪನವೇಲ, ಮಹಾರಾಷ್ಟ್ರ. (೧೧.೪.೨೦೨೩)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ.