Pakistan Accuses India: ಸರ್ಫರಾಜ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಪಾಕಿಸ್ತಾನದ ಗೃಹ ಸಚಿವರ ಸಂದೇಹ

ಲಾಹೋರ್ (ಪಾಕಿಸ್ತಾನ) – ಇಲ್ಲಿ ಗುಂಡಿಕ್ಕಿ ಹತ್ಯೆಯಾದ ಕುಖ್ಯಾತ ದರೋಡೆಕೋರ ಅಮೀರ್ ಸರ್ಫರಾಜ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಮೊಹಸಿನ್ ನಖ್ವಿ ಸಂದೇಹ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಭಾರತ ಸರಕಾರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 2013ರಲ್ಲಿ ಸರ್ಫರಾಜ್ ಇಲ್ಲಿನ ಲಖ್‌ಪತ್ ಜೈಲಿನಲ್ಲಿ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಅವರನ್ನು ಕೊಂದಿದ್ದ.

ನಖ್ವಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಕಳೆದ ಕೆಲವು ದಿನಗಳಲ್ಲಿ ಪಾಕಿಸ್ತಾನದಲ್ಲಿ ನಡೆದ ಹಲವಾರು ಹತ್ಯೆಗಳಲ್ಲಿ ಭಾರತವು ಭಾಗಿಯಾಗಿರುವ ಶಂಕೆ ಇದೆ; ಆದರೆ ಪೊಲೀಸರು ಇನ್ನೂ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಏನೂ ಹೇಳಲು ಅಸಾಧ್ಯ ಎಂದು ಹೇಳಿದರು.

ಸರ್ಫ್ರಾಜ್ ಇನ್ನೂ ಬದುಕಿದ್ದಾನೆ ! – ಹಿರಿಯ ಪೊಲೀಸ್ ಅಧೀಕ್ಷಕರ ದಾವೆ

ಅಮೀರ್ ಸರ್ಫರಾಜ್ ಹತ್ಯೆಯ ಒಂದು ದಿನದ ನಂತರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಹಿರಿಯ ಪೊಲೀಸ್ ಅಧೀಕ್ಷಕ ಸೈಯದ್ ಅಲಿ ರಜಾ ಅವರು, ಸರ್ಫರಾಜ್ ಇನ್ನೂ ಜೀವಂತವಾಗಿದ್ದಾರೆ; ಆದರೆ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಅತನನ್ನು ಚಿಕಿತ್ಸೆಗಾಗಿ ಎಲ್ಲಿ ಇರಿಸಲಾಗಿದೆ ಎಂದು ರಝಾ ಹೇಳಿಲ್ಲ.
ಈ ಸಂದರ್ಭದಲ್ಲಿ ಲಾಹೋರ್ ಪೊಲೀಸ್ ವಕ್ತಾರ ಫರ್ಹಾನ್ ಶಾ ಅವರನ್ನು ಭಾರತೀಯ ಸುದ್ದಿ ಸಂಸ್ಥೆ ಸಂಪರ್ಕಿಸಿದೆ, ಅವರು ವಿಷಯ ಸೂಕ್ಷ್ಮವಾಗಿದೆ ಎಂದು ಹೇಳುವ ಮೂಲಕ ಏನನ್ನೂ ಹೇಳಲು ನಿರಾಕರಿಸಿದರು.

ಸಂಪಾದಕೀಯ ನಿಲುವು

ತನ್ನ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವಾಗ ಅದನ್ನು ನೋಡದೇ ಭಾರತವನ್ನು ಅನುಮಾನದಿಂದ ನೋಡುವುದೆಂದರೆ ತನ್ನ ಜವಾಬ್ದಾರಿಯಿಂದ ಕೈಚೆಲ್ಲುವ ಪಾಕಿಸ್ತಾನದ ಗೃಹ ಸಚಿವ !