Protest against Nepal SC Judge: ನೇಪಾಳದಲ್ಲಿ ನ್ಯಾಯಾಧೀಶರ ವಿರುದ್ಧದ ಮೆರವಣಿಗೆಯಲ್ಲಿ ‘ಸರ್ ತನ್ ಸೆ ಜುದಾ’ ಘೋಷಣೆ !

ನ್ಯಾಯಾಧೀಶರು ತಥಾಕಥಿತ ಇಸ್ಲಾಂ ವಿರೋಧಿ ‘ಪೋಸ್ಟ್’ಗಳನ್ನು ಪ್ರಸಾರ ಮಾಡಿದ್ದಾರೆಂಬ ಹುರುಳಿಲ್ಲದ ಹೇಳಿಕೆ !

(ಸರ್ ತನ್ ಸೆ ಜುದಾ ಎಂದರೆ ತಲೆಯನ್ನು ದೇಹದಿಂದ ಬೇರ್ಪಡಿಸುವುದು)

ಕಾಠ್ಮಂಡು – ನೇಪಾಳದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕಮಲನಾರಾಯಣ ದಾಸ್ ಅವರ ಹೆಸರಿನ ‘ಪೋಸ್ಟ್’ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಈ ಪೋಸ್ಟನಲ್ಲಿ ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ, ಮುಸ್ಲಿಮರು ಬೀದಿಗಿಳಿದು ಪ್ರತಿಭಟನೆ ನಡೆಸಿ ಹಲವಾರು ಸ್ಥಳಗಳಲ್ಲಿ ‘ಅಲ್ಲಾ-ಹು-ಅಕ್ಬರ್’ (ಅಲ್ಲಾ ಮಹಾನ್), ‘ಸರ್ ತನ್ ಸೆ ಜುದಾ’ ಎಂದು ಕೂಗುತ್ತಾ ರಸ್ತೆ ತಡೆ ಮಾಡಿದರು. ನೇಪಾಳದ ‘ಮುಸ್ಲಿಂ ಆಯೋಗ’ ಈ ಪ್ರಕರಣದಲ್ಲಿ ಸರಕಾರಕ್ಕೆ ಬರೆದ ಪತ್ರದಲ್ಲಿ ನ್ಯಾಯಮೂರ್ತಿ ಕಮಲನಾರಾಯಣ ದಾಸ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ. ನೇಪಾಳಿ ಪೊಲೀಸರಾಗಲಿ ಅಥವಾ ಯಾವುದೇ ತನಿಖಾ ಸಂಸ್ಥೆಯಾಗಲಿ ಪೋಸ್ಟ್ ಬರೆದವರು ಯಾರು ಎಂಬುದನ್ನು ಅಧಿಕೃತವಾಗಿ ಗುರುತಿಸಲು ಸಾಧ್ಯವಾಗಿಲ್ಲ. ಇದರ ಹೊರತಾಗಿಯೂ ನೇಪಾಳದ ಮುಸ್ಲಿಂ ಸಮುದಾಯವು ಬೀದಿಗಿಳಿದು ನ್ಯಾಯಮೂರ್ತಿ ದಾಸ್ ಅವರನ್ನು ಬಂಧಿಸುವಂತೆ ಒತ್ತಾಯಿಸುತ್ತಿದೆ.

ಮುಸ್ಲಿಂ ಆಯೋಗದ ಕೂಗಾಟ

ಈ ಪೋಸ್ಟನಲ್ಲಿ ರಂಜಾ಼ನ್ ಉಪವಾಸದ ಬಗ್ಗೆ ಟಿಪ್ಪಣೆ ಮಾಡಿದ್ದಾರೆ ಎಂದು ಆರೋಪಿಸಿದೆ. ರಂಜಾ಼ನ್ ಸಮಯದಲ್ಲಿ ಈ ಪೋಸ್ಟ್ ಅನ್ನು ಪ್ರಸಾರ ಮಾಡುವುದು ನೇಪಾಳದಲ್ಲಿ ಸಹೋದರತ್ವವನ್ನು ನಾಶಮಾಡುವ ಪಿತೂರಿಯಾಗಿದೆ. ಇದು ನಮ್ಮ ಸಂಸ್ಕೃತಿಯ ಮೇಲಿನ ದಾಳಿಯಾಗಿದ್ದು, ಈ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ವಾದಗಳನ್ನು ಅಮಾನ್ಯಗೊಳಿಸುತ್ತಿದೆ ಎಂದು ಮುಸ್ಲಿಂ ಆಯೋಗ ಹೇಳಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ಹಿಂದೂಗಳು ಇಸ್ಲಾಂ ಅನ್ನು ಅವಮಾನ ಮಾಡಿದ್ದಾರೆಂದು ವದಂತಿ ಹಬ್ಬಿಸಿ ಅವರನ್ನು ಕೊಂದಿರುವ ಅಥವಾ ಶಿಕ್ಷೆ ನೀಡಿರುವ ಅನೇಕ ನಿದರ್ಶನಗಳಿವೆ. ನೇಪಾಳದ ಮುಸ್ಲಿಮರೂ ಅದೇ ರೀತಿಯಲ್ಲಿ ಮಾಡುತ್ತಿದ್ದಾರೆ, ಎಂದು ನೀವು ಭಾವಿಸಿದರೆ ತಪ್ಪೇನು ?

ಪ್ರಪಂಚದ ಯಾವುದೇ ಮೂಲೆ ಇರಲಿ ಧರ್ಮದ ಮೇಲೆ ಆಪಾದಿತ ದಾಳಿ ನಡೆಯುತ್ತಿದೆ ಎಂದು ಮುಸ್ಲಿಮರು ದಾವೆ ಮಾಡಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ !