ಕಲಿಯುಗದಲ್ಲಿ ಕೆಟ್ಟ ಶಕ್ತಿಗಳ ತೊಂದರೆಯ ವಿಷಯದಲ್ಲಿ ಸಮಾಜವು ಅಜ್ಞಾನಿಯಾಗಿದೆ. ಬುದ್ಧಿಪ್ರಾಮಾಣ್ಯವಾದಿಗಳು ‘ಜಗತ್ತಿನಲ್ಲಿ ಕೆಟ್ಟ ಶಕ್ತಿಗಳು ಎಂದು ಏನೂ ಇಲ್ಲವೆ ಇಲ್ಲ’, ಎಂದು ಹೇಳುತ್ತಾರೆ; ಏಕೆಂದರೆ ಅವರಿಗೆ ಈ ವಿಷಯದಲ್ಲಿ ಅಭ್ಯಾಸವೇ ಇಲ್ಲ. ನಮ್ಮೆಲ್ಲ ಸಾಧಕರಿಗೆ ಕೂಡ ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಹಾಗೂ ಅವರು ಪದೇ ಪದೇ ಮಾಡಿದ ಮಾರ್ಗ ದರ್ಶನದಿಂದ ಕೆಟ್ಟ ಶಕ್ತಿಗಳ ಸೂಕ್ಷ್ಮ ಜಗತ್ತಿನ ಪರಿಚಯವಾಯಿತು. ಪರಾತ್ಪರ ಗುರು ಡಾ. ಆಠವಲೆಯವರು ಈ ವಿಷಯದಲ್ಲಿ ಅನೇಕ ಸಂತರಲ್ಲಿಗೆ ಹೋಗಿ, ತಾನು ಸ್ವತಃ ಅಖಂಡ ಸಂಶೋಧನೆ ಮಾಡಿ ಸಾವಿರಾರು ಪ್ರಯೋಗಗಳಿಂದ ಕೆಟ್ಟ ಶಕ್ತಿಗಳ ನಿವಾರಣೆಗಾಗಿ ಅನೇಕ ಉಪಾಯಗಳನ್ನು ಕಂಡು ಹಿಡಿದರು. ‘ಕೆಟ್ಟ ಶಕ್ತಿಗಳು ಎಷ್ಟೇ ದೊಡ್ಡದಿದ್ದರೂ ಅವುಗಳಿಗಿಂತಲೂ ದೇವರ ಶಕ್ತಿ ತುಂಬಾ ದೊಡ್ಡದಿದೆ’, ಎಂಬುದನ್ನು ಅನೇಕ ಪ್ರಸಂಗಗಳಿಂದ ಸಾಧಕರಿಗೆ ತೋರಿಸಿ ಅವರು ಸಾಧನೆಯ ಮಹತ್ವವನ್ನು ಸಾಧಕರ ಮನಸ್ಸಿನಲ್ಲಿ ಬಿಂಬಿಸಿದರು. ತಮ್ಮ ೮೧ ವಯಸ್ಸಿನಲ್ಲಿಯೂ ಅವರ ಸಂಶೋಧನೆಯ ಕಾರ್ಯ ಮುಂದುವರಿದಿದೆ. ಪೃಥ್ವಿಯಲ್ಲಿ ಕೆಟ್ಟ ಶಕ್ತಿಗಳ ವಿಷಯದಲ್ಲಿ ಇಷ್ಟು ಆಳ ಅಭ್ಯಾಸ ಮಾಡುವವರಲ್ಲಿ ಪರಾತ್ಪರ ಗುರು ಡಾ. ಆಠವಲೆ ಏಕಮೇವಾದ್ವಿತೀಯರಾಗಿದ್ದಾರೆ.
ಸೂಕ್ಷ್ಮ ಜಗತ್ತಿನ ವಿಷಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಅನುಭವಿಸಿದ ಸ್ವಲ್ಪ ವಿಷಯವನ್ನು ೨೫/೩೦ ನೇ ಸಂಚಿಕೆಯಲ್ಲಿ ನೋಡಿದೆವು, ಈ ವಾರ ಮುಂದಿನ ಭಾಗವನ್ನು ನೋಡೋಣ.
ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/112855.html |
ಭಾಗ ೨
೧. ಪರಾತ್ಪರ ಗುರು ಡಾ. ಆಠವಲೆ ಇವರು ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅದಕ್ಕೆ ಸಂಬಂಧಿಸಿದ ಶಕ್ತಿ ಒಟ್ಟಾಗಿರುತ್ತದೆ’, ಎಂಬ ಅಧ್ಯಾತ್ಮದ ಸಿದ್ದಾಂತವನ್ನು ಪ್ರಯೋಗ ಮಾಡಿ ಸಿದ್ದಪಡಿಸಿ ತೋರಿಸುವುದು
೧. ಅ. ಪರಾತ್ಪರ ಗುರು ಡಾಕ್ಟರರು ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಹೆಸರನ್ನು ಒಂದು ಕಾಗದದಲ್ಲಿ ಬರೆದು ಆ ಕಾಗದವನ್ನು ನಾಮಜಪ ಮಾಡುತ್ತಾ ಹರಿದಾಗ ಆ ಸಾಧಕನಿಗೆ ತೊಂದರೆ ನೀಡುವ ಕೆಟ್ಟ ಶಕ್ತಿಗೆ ತೊಂದರೆ ಆಗುವುದು : ‘ಓರ್ವ ಸಾಧಕಿಗೆ ಕೆಟ್ಟ ಶಕ್ತಿಗಳ ತೊಂದರೆ ಆದಾಗ ಅವರು ನಮಗೆ ಕೆಟ್ಟ ಶಕ್ತಿಯ ತೊಂದರೆಯ ಬಗ್ಗೆ ಅನೇಕ ಅಂಶಗಳನ್ನು ಕಲಿಸಿದ್ದರು. ಒಮ್ಮೆ ಪರಾತ್ಪರ ಗುರು ಡಾಕ್ಟರರು ನಮಗೆ ಒಂದು ಪ್ರಯೋಗ ಮಾಡಿ ತೋರಿಸಿದರು. ಅವರು ಕೆಟ್ಟ ಶಕ್ತಿಗಳ ತೊಂದರೆ ಇರುವ ಓರ್ವ ಸಾಧಕನ ಹೆಸರನ್ನು ಕಾಗದದಲ್ಲಿ ಬರೆದರು ಮತ್ತು ಆ ಕಾಗದ ನಾಮಜಪ ಮಾಡುತ್ತಾ ಉದ್ದವಾಗಿ ಹರಿದರು. ತಕ್ಷಣ ಕಾಗದದಲ್ಲಿ ಹೆಸರು ಬರೆದಿರುವ ಆ ಸಾಧಕ ಯಾವ ಸ್ಥಳದಲ್ಲಿ ಸೇವೆ ಮಾಡುತ್ತಿದ್ದನೋ ಅಲ್ಲಿ ಅವನಿಗೆ ತೊಂದರೆ ನೀಡುವ ಕೆಟ್ಟ ಶಕ್ತಿಗೆ ಬಹಳಷ್ಟು ತೊಂದರೆಯಾಗತೊಡಗಿತು.
೧ ಆ. ಪರಾತ್ಪರ ಗುರು ಡಾಕ್ಟರರು ‘ಸಾಧಕರಿಗಾಗಿ ಉಪಾಯ ಆಗುವುದು’, ಎಂದರೇನು?’, ಇದನ್ನು ತಿಳಿಸಿ ಹೇಳುವುದು : ಈ ಪ್ರಸಂಗದಿಂದ ಪರಾತ್ಪರ ಗುರು ಡಾಕ್ಟರರು ‘ಕೆಟ್ಟ ಶಕ್ತಿಗಳಿಗೆ ಸೂಕ್ಷ್ಮದಲ್ಲಿ ಎಷ್ಟು ತಿಳಿಯುತ್ತದೆ?’, ಇದನ್ನು ನಮಗೆ ಅರಿವಿಗೆ ತಂದು ಕೊಟ್ಟರು. ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅದಕ್ಕೆ ಸಂಬಂಧಿತ ಶಕ್ತಿ ಒಟ್ಟಾಗಿರುತ್ತದೆ, ಇದು ಅಧ್ಯಾತ್ಮದ ಒಂದು ಸಿದ್ಧಾಂತವಾಗಿದೆ. ಕಾಗದ ದಲ್ಲಿರುವ ಸಾಧಕನ ಹೆಸರಿನ ಅಕ್ಷರದ ಮೇಲೆ ಪರಾತ್ಪರ ಗುರು ಡಾಕ್ಟರರಲ್ಲಿನ ಚೈತನ್ಯಶಕ್ತಿಯ ಜೋರಾದ ಆಘಾತ ಆಗಿ ಸಾಧಕನಿಗೆ ತೊಂದರೆ ನೀಡುವ ಕೆಟ್ಟ ಶಕ್ತಿಗೆ ತೊಂದರೆಯಾಗತೊಡಗಿತು. ಇದರ ಬಗ್ಗೆ ಪರಾತ್ಪರ ಗುರು ಡಾಕ್ಟರರು ಹೇಳಿದರು, ”ಇದನ್ನೇ ‘ಆ ಸಾಧಕನಿಗಾಗಿ ಉಪಾಯ ಆಗುವುದು’’ ಎಂದು ಹೇಳುವುದು. ಇದರಿಂದ ನಮಗೆ ಸಂತರ ಚೈತನ್ಯದಾಯಕ ಸತ್ಸಂಗದಲ್ಲಿ ಕೆಟ್ಟ ಶಕ್ತಿಗಳಿಗೆ ಹೇಗೆ ತೊಂದರೆಯಾಗುತ್ತದೆ ?’, ಇದು ಕಲಿಯಲು ಸಿಕ್ಕಿತು.
೧ ಇ. ‘ಕೆಟ್ಟ ಶಕ್ತಿಗಳ ತೊಂದರೆ ಇರುವ ಸಾಧಕರಿಗಾಗಿ ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತ ಸಾಧಕರು ಮಾಡುವ ನಾಮಜಪಾದಿ ಉಪಾಯ’, ಇದು ಸೂಕ್ಷ್ಮದ ಯುದ್ಧವಾಗಿರುವುದು : ಕೆಟ್ಟ ಶಕ್ತಿಗಳ ತೊಂದರೆ ಇರುವ ಸಾಧಕರಿಗಾಗಿ ನಾಮಜಪಾದಿ ಉಪಾಯ ಮಾಡುವ ವ್ಯಕ್ತಿ ಮಾತ್ರ ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತರಾಗಿರಬೇಕು, ಇಲ್ಲವಾದರೆ ಉಪಾಯ ಮಾಡುವ ವ್ಯಕ್ತಿಗೆ ಕೆಟ್ಟಶಕ್ತಿಯ ತೊಂದರೆಯಾಗಬಹುದು. ‘ಉಪಾಯ ಮಾಡುವುದು’ ಒಂದು ರೀತಿ ಯುದ್ಧವೇ ಆಗಿದೆ. ಇದನ್ನೇ ‘ಸೂಕ್ಷ್ಮ ಯುದಧ್’ ಎಂದು ಹೇಳುತ್ತಾರೆ. ಈ ರೀತಿ ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನದಿಂದ ‘ಕೆಟ್ಟ ಶಕ್ತಿಗಳ ತೊಂದರೆ, ಕೆಟ್ಟ ಶಕ್ತಿಗಳ ತೊಂದರೆಯಿರುವ ಸಾಧಕರಿಗೆ ಉಪಾಯ ಮಾಡುವುದು, ಕೆಟ್ಟ ಶಕ್ತಿ ಮತ್ತು ದೈವೀ ಶಕ್ತಿ ಇವರಲ್ಲಿ ‘ಸೂಕ್ಷ್ಮ ಯುದ್ಧ’, ಈ ಪದಪ್ರಯೋಗ ಸನಾತನ ಸಂಸ್ಥೆಯ ಇತಿಹಾಸದಲ್ಲಿ ರೂಢಿ ಆಗಿದೆ.
೨. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ಉಪಾಯ ಪದ್ಧತಿ ಹುಡುಕುವ ಬಗ್ಗೆ ಪರಾತ್ಪರ ಗುರು ಡಾಕ್ಟರರು ಹೇಳಿರುವ ಮಹತ್ವ
ಕೆಟ್ಟ ಶಕ್ತಿಗಳ ತೊಂದರೆಯ ವಿಷಯವಾಗಿ ನಮ್ಮ ಜೊತೆಗೆ (ಸೂಕ್ಷ್ಮದಲ್ಲಿ ತಿಳಿಯುವ ಸಾಧಕರ ಜೊತೆಗೆ) ಮಾತನಾಡುವಾಗ ಪರಾತ್ಪರ ಗುರು ಡಾಕ್ಟರರು ನಮಗೆ ಹೇಳಿದರು, ”ಈ ಜಗತ್ತು ಸೂಕ್ಷ್ಮ ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ಅಜ್ಞಾನದಲ್ಲಿದೆ. ಜನರಿಗೆ ಈ ವಿಷಯದ ಬಗ್ಗೆ ಕಲಿಸಬೇಕಿದೆ. ಜಗತ್ತಿನಲ್ಲಿನ ಬಹಳಷ್ಟು ಒಳ್ಳೆಯ ವ್ಯವಹಾರಗಳು ಕೆಟ್ಟ ಶಕ್ತಿಗಳ ತೊಂದರೆಗಳಿಂದ ವಿಫಲವಾಗುತ್ತವೆ. ಅದರ ಹಿಂದೆ ಹೆಚ್ಚಾಗಿ ಆಧ್ಯಾತ್ಮಿಕ ಕಾರಣವೇ ಇರುತ್ತದೆ. ಅದನ್ನು ನಾವು ಹುಡುಕಿ ತೆಗೆಯಬೇಕು ಮತ್ತು ಕೇವಲ ಹುಡುಕುವುದಷ್ಟೇ ಅಲ್ಲ, ‘ಅದಕ್ಕೆ ಯಾವ ಉಪಾಯ ಯೋಜನೆ ಮಾಡಬೇಕೆಂದು ಸಹ ಸಮಾಜಕ್ಕೆ ಹೇಳಲು ತಿಳಿಯಬೇಕು. ಪೃಥ್ವಿಯ ಸಮಾಜ ಕೆಟ್ಟಶಕ್ತಿಗಳ ತೊಂದರೆಯಿಂದ ದುಃಖಿತವಾಗಿದೆ; ಆದರೆ ಸಮಾಜಕ್ಕೆ ಇದನ್ನು ಕಲಿಸುವವರು ಯಾರಿಲ್ಲ. ಅದಕ್ಕಾಗಿ ನಾವು ಸೂಕ್ಷ್ಮ ಜಗತ್ತಿನ ಅಧ್ಯಯನ ನಡೆಸಿ ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ಉಪಾಯಪದ್ಧತಿ ಹುಡುಕಬೇಕು.’’
೩. ಸಮಾಜದ ಕಲ್ಯಾಣದ ತೀವ್ರ ತಳಮಳವಿರುವ ಪರಾತ್ಪರ ಗುರು ಡಾಕ್ಟರರು ಸಾವಿರಾರು ಪ್ರಯೋಗಗಳಿಂದ ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗೆ ಅನೇಕ ಉಪಾಯ ಹುಡುಕುವುದು
ಈ ರೀತಿ ಪರಾತ್ಪರ ಗುರು ಡಾಕ್ಟರರು ೧೨ ವರ್ಷಗಳಿಂದ ಅಖಂಡ ಸಂಶೋಧನೆ ನಡೆಸಿ ಸಾವಿರಾರು ಪ್ರಯೋಗಗಳಿಂದ ಕೆಟ್ಟ ಶಕ್ತಿಗಳ ತೊಂದರೆ ನಿವಾರಣೆಗಾಗಿ ಅನೇಕ ಉಪಾಯಗಳನ್ನು ಹುಡುಕಿದ್ದಾರೆ. ಪರಾತ್ಪರ ಗುರು ಡಾಕ್ಟರರು ಈ ವಿಷಯದ ಬಗ್ಗೆ ಕಾಲಕಾಲಕ್ಕೆ ಸನಾತನ ಪ್ರಭಾತದಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ ಹಾಗೂ ಅವರು ಈ ಲೇಖನದ ಅನೇಕ ಗ್ರಂಥಗಳನ್ನೂ ಪ್ರಕಟಿಸಿದ್ದಾರೆ. ಇನ್ನೂ ಕೂಡ ೮೧ ವರ್ಷ ವಯಸ್ಸಿನಲ್ಲಿ ಅವರು ಇದರ ಬಗ್ಗೆ ಸಂಶೋಧನೆ ಮುಂದುವರೆಸಿದ್ದಾರೆ. ಇದರಿಂದ ಪರಾತ್ಪರ ಗುರು ಡಾಕ್ಟರರ ಸಮಾಜಕಲ್ಯಾಣದ ತಳಮಳ ಕಂಡು ಬರುತ್ತದೆ.
೪. ಕೆಟ್ಟ ಶಕ್ತಿಯ ಬಗ್ಗೆ ಆಳವಾದ ಅಧ್ಯಯನ ಮಾಡಿಸುವ ಪೃಥ್ವಿಯಲ್ಲಿನ ಏಕೈಕ ಗುರುಗಳು ಎಂದರೆ ಪರಾತ್ಪರ ಗುರು ಡಾಕ್ಟರ ಆಠವಲೆ !
ಪರಾತ್ಪರ ಗುರು ಡಾಕ್ಟರರ ಕೃಪಾಶೀರ್ವಾದದಿಂದ ಮತ್ತು ಅವರಲ್ಲಿನ ಜಿಜ್ಞಾಸೆಯಿಂದ ಸನಾತನ ಸಂಸ್ಥೆಯಲ್ಲಿ ಸೂಕ್ಷ್ಮದಲ್ಲಿ ತಿಳಿಯುವ ಸಾಧಕರಿಗೆ ಕೆಟ್ಟ ಶಕ್ತಿಗಳ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಗುವ ತೊಂದರೆಗಳ ನಿವಾರಣೆಗಾಗಿ ಅನೇಕ ಉಪಾಯ ಪದ್ಧತಿಗಳನ್ನು ಹುಡುಕಿದ್ದಾರೆ. ಕೆಟ್ಟ ಶಕ್ತಿಗಳ ಬಗ್ಗೆ ಇಷ್ಟು ಆಳವಾದ ಅಧ್ಯಯನ ಮಾಡಿಸಿಕೊಳ್ಳುವ ಗುರುಗಳನ್ನು ನಾನು ಎಲ್ಲಿಯೂ ನೋಡಿಲ್ಲ. ‘ಪೃಥ್ವಿಯಲ್ಲಿ ಅವರೊಬ್ಬರೇ ಇದ್ದಾರೆ’, ಇದರಲ್ಲಿ ಅನುಮಾನವಿಲ್ಲ. (ಕ್ರಮಶಃ)
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೯.೧.೨೦೨೨
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.
*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |