Former Judges Criticized SC Judges : ಪತಂಜಲಿ ಪ್ರಕರಣದಲ್ಲಿ `ನಿಮ್ಮನ್ನು ಸಿಗಿದು ಹಾಕುತ್ತೇವೆ’ ಎಂದು ಹೇಳುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಟೀಕಿಸಿದ ಮಾಜಿ ನ್ಯಾಯಮೂರ್ತಿಗಳು!

ನವ ದೆಹಲಿ – ಪತಂಜಲಿ ಸಂಸ್ಥೆಯು ಜನರನ್ನು ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸಿರುವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ಪ್ರಕರಣದಲ್ಲಿ ಯೋಗಋಷಿ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ನ್ಯಾಯಾಲಯದಲ್ಲಿ ಬೇಷರತ್ ಕ್ಷಮೆಯನ್ನು ಕೋರಿದ್ದರು; ಆದರೆ ನ್ಯಾಯಾಲಯ ಅದನ್ನು ಸ್ವೀಕರಿಸಲು ನಿರಾಕರಿಸಿತ್ತು. ಆ ಸಮಯದಲ್ಲಿ, ಅವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅಮಾನುದ್ದೀನ್ ಅಮಾನುಲ್ಲಾ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಇವರ ವಿಭಾಗೀಯ ಪೀಠವು ಈ ಪ್ರಕರಣದ ಕಾರ್ಯಾಚರಣೆ ಕ್ರಮಕೈಗೊಳ್ಳುವ ವಿಷಯದಲ್ಲಿ ನಿಷ್ಕ್ರಿಯರಾಗಿರುವ ಉತ್ತರಾಖಂಡ ಪರವಾನಗಿ ಪ್ರಾಧಿಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆ ಸಮಯದಲ್ಲಿ ನ್ಯಾಯಾಲಯವು ಅಲ್ಲಿ ಉಪಸ್ಥಿತರಿದ್ದ ಪ್ರಾಧಿಕಾರದ ಅಧಿಕಾರಿಗಳಿಗೆ ‘ನಿಮ್ಮನ್ನು ಸಿಗಿದು ಹಾಕುತ್ತೇವೆ’, ಎಂದು ಹೇಳಿದ್ದರು. ಸರ್ವೋಚ್ಚ ನ್ಯಾಯಾಲಯದ ಈ ಹೇಳಿಕೆಯನ್ನು ಮಾಜಿ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಈ ಅಭಿಪ್ರಾಯವನ್ನು ಟೀಕಿಸಿದ್ದಾರೆ ಎಂದು ‘ಹಿಂದೂಸ್ಥಾನ್’ ಸುದ್ದಿ ಸಂಕೇತಸ್ಥಳ ವರದಿ ಮಾಡಿದೆ.

1. ಈ ಸುದ್ದಿಯಲ್ಲಿ ಮಾಜಿ ನ್ಯಾಯಮೂರ್ತಿಗಳು, ನ್ಯಾಯಾಲಯದ ವಿಚಾರಣೆಗಳ ಸಮಯದಲ್ಲಿ ಸಂಯಮದ ಮಾನದಂಡಗಳನ್ನು ಯಾವಾಗಲೂ ಪಾಲಿಸಲಾಗಿದೆ ಮತ್ತು ಅದನ್ನು ನ್ಯಾಯಯುತ ಚರ್ಚೆಗಾಗಿ ಬಳಸಲಾಗುತ್ತದೆ. ‘ನಾವು ನಿಮ್ಮನ್ನು ಸಿಗಿದು ಹಾಕುತ್ತೇವೆ’ ಎಂದು ಹೇಳುವುದು ರಸ್ತೆಯ ಮೇಲೆ ಕೇಳುವಂತಹ ಭಾಷೆಯಂತಿದ್ದು, ಇದು ಅಪಾಯಕಾರಿಯಾಗಿದೆ. ಇಂತಹ ಶಬ್ದಗಳು ಸಂವಿಧಾನಾತ್ಮಕ ನ್ಯಾಯಾಲಯದ ನ್ಯಾಯದ ಶಬ್ದಕೋಶದ ಭಾಗವಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

2. ಈ ಮಾಜಿ ನ್ಯಾಯಮೂರ್ತಿಗಳು, ನ್ಯಾಯಮೂರ್ತಿ ಅಮಾನುಲ್ಲಾ ಅವರು ನ್ಯಾಯಾಲಯದ ವರ್ತನೆಯು ನಿಮ್ಮನ್ನು ಗುರುತಿಸಿಕೊಳ್ಳಲು ಸರ್ವೋಚ್ಚ ನ್ಯಾಯಾಲಯ 2 ತೀರ್ಪನ್ನು ನೋಡಬೇಕು ಎಂದು ಸಲಹೆ ನೀಡಿದರು. ಈ ಎರಡು ತೀರ್ಪುಗಳೆಂದರೆ ಕೃಷ್ಣಸ್ವಾಮಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ(1992) ಮತ್ತು ಸಿ. ರವಿಚಂದ್ರನ್ ಅಯ್ಯರ್ ವಿರುದ್ಧ ನ್ಯಾಯಮೂರ್ತಿ ಎ.ಎಮ್. ಭಟ್ಟಾಚಾರ್ಯಜಿ (1995).

3. ಕೃಷ್ಣ ಸ್ವಾಮಿ ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯವು ಸಂವಿಧಾನಾತ್ಮಾಕ ನ್ಯಾಯಾಲಯದ ನ್ಯಾಯಾಧೀಶರ ನಡವಳಿಕೆ ಸಮಾಜದ ಸಾಮಾನ್ಯ ಜನರಿಗಿಂತ ಯೋಗ್ಯವಾಗಿರಬೇಕು ಎಂದು ಹೇಳಿತ್ತು. ನ್ಯಾಯಾಂಗ ವರ್ತನೆಯ ಮಾನದಂಡಗಳು ವಿಭಾಗೀಯ ಪೀಠದ ಮೇಲೆ ಮತ್ತು ಹೊರಗೆ ಸಾಮಾನ್ಯವಾಗಿ ಉಚ್ಚ ಮಟ್ಟದಲ್ಲಿರಬೇಕು. ನ್ಯಾಯಾಧೀಶರ ಚಾರಿತ್ರ್ಯ, ಸಮಗ್ರತೆ ಅಥವಾ ನಿಷ್ಪಕ್ಷಪಾತ ವರ್ತನೆ ಇವುಗಳ ಮೇಲಿನ ಜನತೆಯ ವಿಶ್ವಾಸ ಕಡಿಮೆ ಮಾಡುವ ನಡವಳಿಕೆಯನ್ನು ತಿರಸ್ಕರಿಸಬೇಕು ಎಂದು ಹೇಳಿದರು.