ಮೀರತ(ಉತ್ತರಪ್ರದೇಶ) ಶಾಹಿ ಈದಗಾಹ ಹತ್ತಿರದ ರಸ್ತೆಯ ಮೇಲೆ ನಮಾಜ್ ಮಾಡಲು ಪೊಲೀಸರಿಂದ ವಿರೋಧ

ಮುಸಲ್ಮಾನರಿಂದ ‘ಅಲ್ಲಾಹು ಅಕ್ಬರ್’ (‘ಅಲ್ಲಾ ಮಹಾನ್’) ಘೋಷಣೆ !

ಮೀರತ (ಉತ್ತರ ಪ್ರದೇಶ) – ನಗರದ ಶಾಹಿ ಈದಗಾಹದಲ್ಲಿ ಬೆಳಗ್ಗೆ 8.15ಕ್ಕೆ ನಮಾಜ್ ಪಠಣ ಮಾಡಲಾಯಿತು. ಈ ಸಮಯದಲ್ಲಿ ಸಾವಿರಾರು ಮುಸಲ್ಮಾನರು ಉಪಸ್ಥಿತರಿದ್ದರು; ಆದರೆ ಜನರ ಸಂಖ್ಯೆ ಹೆಚ್ಚಾಗಿದ್ದರಿಂದ ಬಂದ ಮುಸ್ಲಿಮರು ರಸ್ತೆಯ ಮೇಲೆಯೇ ನಮಾಜ್ ಪಠಣ ಮಾಡಲು ಪ್ರಯತ್ನಿಸಿದರು; ಆದರೆ ಪೊಲೀಸರು ಅದನ್ನು ವಿರೋಧಿಸಿದರು.

ಈದ್ ನಿಮಿತ್ತ ನಗರದ ಯಾವುದೇ ಸ್ಥಳದಲ್ಲಿ ನಮಾಜ್ ಪಠಣ ಮಾಡಬಾರದು, ಎಂದು ಮೀರತನ ಪೊಲೀಸರು ಮತ್ತು ಸರ್ಕಾರವು ಈ ಹಿಂದೆಯೇ ಸೂಚನೆ ನೀಡಿತ್ತು. ಹೀಗಿರುವಾಗಲೂ ಅಲ್ಲಿನ ಮುಸಲ್ಮಾನರು ರಸ್ತೆಯ ಮೇಲೆ ನಮಾಜ್ ಪಠಣ ಮಾಡುವ ಪ್ರಯತ್ನ ಮಾಡಿದ್ದರಿಂದ ಪೊಲೀಸರು ಮತ್ತು ಮುಸ್ಲಿಮರ ನಡುವೆ ಕೆಲ ಕಾಲ ವಾದ ನಡೆಯಿತು. ಪೊಲೀಸರ ಕ್ರಮವನ್ನು ವಿರೋಧಿಸಿ ಮುಸ್ಲಿಮರು `ಅಲ್ಲಾಹು ಅಕ್ಬರ್’ ಎಂಬ ಘೋಷಣೆ ನೀಡಲು ಪ್ರಾರಂಭಿಸಿದರು. ಪೊಲೀಸರು ತೆಗೆದುಕೊಂಡ ನಿಲುವಿನಿಂದ ಮುಸ್ಲಿಮರಿಗೆ ಜಯ ಸಿಗಲಿಲ್ಲ. ಆಗ ಅವರು ಇತರ ಈದಗಾಹ ಮತ್ತು ಮಶೀದಿಗೆ ತೆರಳಿ ನಮಾಜ್ ಪಠಣ ಮಾಡಿದರು.

ಸಂಪಾದಕೀಯ ನಿಲುವು

ರಸ್ತೆಯಲ್ಲಿ ನಮಾಜ್ ಪಠಣ ಮಾಡುವುದು ಅಯೋಗ್ಯವಾಗಿರುವಾಗ, ಅಂತಹ ಪ್ರಯತ್ನ ಮಾಡುವವರ ಮೇಲೆ ಕಠಿಣ ಕ್ರಮ ಕೈಕೊಂಡರೆ ಮಾತ್ರ ಇಂತಹ ಘಟನೆಗಳನ್ನು ತಡೆಯಬಹುದು.