ನೇಪಾಳ: ರಾಜಪ್ರಭುತ್ವ ಮತ್ತು ಹಿಂದೂ ರಾಷ್ಟ್ರದ ಮರುಸ್ಥಾಪನೆಗಾಗಿ ಆಂದೋಲನ !

ಕಾಠ್ಮಂಡು – ನೇಪಾಳದಲ್ಲಿ ರಾಜಪ್ರಭುತ್ವ ಮತ್ತು ಹಿಂದೂ ರಾಷ್ಟ್ರದ ಮರುಸ್ಥಾಪನೆಯ ಬೇಡಿಕೆಗಳು ವೇಗ ಪಡೆದುಕೊಂಡಿದೆ. ರಾಜಪ್ರಭುತ್ವವನ್ನು ಮರುಸ್ಥಾಪಿಸಬೇಕೆಂದು ಒತ್ತಾಯಿಸಿ ನೂರಾರು ಪ್ರತಿಭಟನಾಕಾರರು ಕಾಠ್ಮಂಡುವಿನ ಬೀದಿಗಿಳಿದಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದ್ದು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

2008 ರಲ್ಲಿ, ಅಲ್ಲಿನ ರಾಜ ಜ್ಞಾನೇಂದ್ರ ಅವರನ್ನು ಅಧಿಕಾರದಿಂದ ತೆಗೆಯಲಾಯಿತು. ಅವರ ಬೆಂಬಲಿಗರು ಪ್ರಧಾನಿ ಕಚೇರಿ ಮತ್ತು ಇತರ ಪ್ರಮುಖ ಸರ್ಕಾರಿ ಇಲಾಖೆಗಳಲ್ಲಿ ಪ್ರತಿಭಟನೆ ನಡೆಸಲು ಪ್ರಯತ್ನಿಸಿದರು. ಜ್ಞಾನೇಂದ್ರ ಅವರ ಪ್ರಮುಖ ಬೆಂಬಲಿಗರಾಗಿರುವ ರಾಷ್ಟ್ರೀಯ ಪ್ರಜಾತಂತ್ರ ಪಕ್ಷವು ಈ ಪ್ರತಿಭಟನೆಯನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ‘ರಾಜಪ್ರಭುತ್ವ ಮರಳಿ ತನ್ನಿ, ಪ್ರಜಾಪ್ರಭುತ್ವ ತೊಲಗಿಸಿ’ ಎಂಬ ಘೋಷಣೆಗಳನ್ನು ಕೂಗಿದರು. “ನಮಗೆ ನಮ್ಮ ರಾಜ ಮತ್ತು ದೇಶ ನಮ್ಮ ಪ್ರಾಣಕ್ಕಿಂತಲೂ ಹೆಚ್ಚು ಪ್ರಿಯವಾಗಿದೆ” ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು.